ಕಾಂಗ್ರೆಸ್ ಘಟಕ ರಚನೆ; ಪದಾಧಿಕಾರಿಗಳ ಆಯ್ಕೆ
ಮೈಸೂರು

ಕಾಂಗ್ರೆಸ್ ಘಟಕ ರಚನೆ; ಪದಾಧಿಕಾರಿಗಳ ಆಯ್ಕೆ

September 26, 2021

ಮೈಸೂರು,ಸೆ.25(ಪಿಎಂ)-ಗ್ರಾಮ ಮಟ್ಟ ದಲ್ಲಿ ಪಕ್ಷ ಸಂಘಟನೆಗೆ ಕೆಪಿಸಿಸಿ ರೂಪಿಸಿ ರುವ ಪ್ರಜಾಪ್ರತಿನಿಧಿ ಕಾರ್ಯಕ್ರಮದಡಿ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀ ಗೌಡ ನೇತೃತ್ವದಲ್ಲಿ ವಿವಿಧ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಘಟಕ ಗಳನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮೈಸೂರು ತಾಲೂಕಿನ ಶ್ರೀರಾಂಪುರ, ಸಿದ್ದಲಿಂಗಪುರ ಮತ್ತು ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಯಾಯ ಮುಖಂಡರು ಹಾಗೂ ಕಾರ್ಯಕರ್ತರ ಪ್ರತ್ಯೇಕ ಸಭೆ ಗಳನ್ನು ನಡೆಸಿ, ಆಯಾಯ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಘಟಕಗಳನ್ನು ರಚಿಸಲಾಯಿತು. ಬಳಿಕ ಮೂರು ಗ್ರಾಪಂಗಳ ಘಟಕಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶ್ರೀರಾಂಪುರ ಗ್ರಾಪಂ ಕಾಂಗ್ರೆಸ್ ಘಟ ಕದ ಅಧ್ಯಕ್ಷರಾಗಿ ನಾರಾಯಣ್, ಉಪಾ ಧ್ಯಕ್ಷರಾಗಿ ಮಂಜುನಾಥ್, ಪ್ರಧಾನ ಕಾರ್ಯ ದರ್ಶಿಯಾಗಿ ಶಿವಕುಮಾರ್, ಕಾರ್ಯ ದರ್ಶಿಯಾಗಿ ಚಿನ್ನಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ಸಿದ್ದಲಿಂಗ ಪುರ ಗ್ರಾಪಂ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಗಿ ಸಿದ್ದಲಿಂಗಪುರ ಗ್ರಾಮದ ದಿವಾಕರ್, ಉಪಾಧ್ಯಕ್ಷರಾಗಿ ಬೆಲವತ್ತ ರಾಮ ಚಂದ್ರು, ಪ್ರಧಾನ ಕಾರ್ಯದರ್ಶಿಯಾಗಿ ಕಾಮನ ಕೆರೆಹುಂಡಿ ಪರಮೇಶ್, ಕಾರ್ಯದರ್ಶಿ ಯಾಗಿ ಕೆ.ಆರ್.ಮಿಲ್ ಕಾಲೋನಿ ನಾಗೇಂದ್ರ ಪ್ರಸಾದ್, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಕೆ.ಆರ್.ಮಿಲ್ ಕಾಲೋನಿ ಕಿರಣ್ ಆಯ್ಕೆಯಾದರು.

ನಾಗನಹಳ್ಳಿ ಗ್ರಾಪಂ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಲಕ್ಷ್ಮೀಪುರದ ನಾಗರಾಜು, ಪ್ರಧಾನ ಕಾರ್ಯ ದರ್ಶಿಯಾಗಿ ಕಳಸ್ತವಾಡಿ ಮಹದೇವಸ್ವಾಮಿ, ಕಾರ್ಯದರ್ಶಿಯಾಗಿ ಏಕಲವ್ಯ ನಗರದ ರಾಮಮೂರ್ತಿ ಆಯ್ಕೆಗೊಂಡರು.

ಇದೇ ವೇಳೆ ಮಾತನಾಡಿದ ಕೆ.ಮರೀ ಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಲಾಷೆಯಂತೆ ಪಕ್ಷದ ಸಂಘಟನೆಗಾಗಿ ಈ ಪ್ರಜಾಪ್ರತಿನಿಧಿ ಕಾರ್ಯಕ್ರಮ ರೂಪುಗೊಂಡಿದೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಗ್ರಾಮ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಈ ಚಟುವಟಿಕೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಇದನ್ನು ಗಂಭೀರವಾಗಿ ತೆಗೆದುಕೊಂಡು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಉಸ್ತುವಾರಿ ಗುರುಪಾದ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ. ಸತೀಶ್‍ಕುಮಾರ್, ಗುರುಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ.ಎಸ್. ಸಿದ್ದರಾಜು, ನಾಗನಹಳ್ಳಿ ಉಮಾಶಂಕರ್, ತಾಪಂ ಮಾಜಿ ಸದಸ್ಯ ಸೋಮಣ್ಣ, ಗ್ರಾಪಂ ಅಧ್ಯಕ್ಷ ಶಕುಂತಲಾ, ಮುಖಂಡ ರಾದ ಕಿಶೋರ್, ನಂಜಪ್ಪ, ಲೋಕೇಶ್, ಶಿವರಾಮ, ಕುಮಾರಸ್ವಾಮಿ, ರವಿ, ವಿನಯ್, ಸಂಜಯ್, ಪ್ರವೀಣ್, ನಂಜಪ್ಪ, ರಾಮ ಚಂದ್ರ, ಪಾಂಡುರಂಗ, ದಿವಾಕರ್, ನಾಗೇಶ್, ದಶರತ್, ಆರ್.ಚೆನ್ನಾರೆಡ್ಡಿ, ಧನಂಜಯ್, ಪ್ರೇಮ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »