ಮೈಸೂರು, ಮಾ.9(ಎಸ್‍ಬಿಡಿ)- ಮೈಸೂ ರಿನ ರೈಲು ನಿಲ್ದಾಣದಲ್ಲಿ ಕೊರೊನಾ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ರೈಲುಗಳ ಮೂಲಕ ಎಲ್ಲೆಡೆಯಿಂದ ಸಾವಿರಾರು ಜನ ಮೈಸೂರಿಗೆ ಆಗಮಿಸು ತ್ತಾರೆ. ಇಲ್ಲಿಂದ ಬೇರೆ ಕಡೆಗೂ ಪ್ರಯಾಣ ಬೆಳೆಸುತ್ತಾರೆ. ಹಾಗಾಗಿ ವಿವಿಧ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗು ತ್ತಿದೆ. ಜಾಹಿರಾತು ಪ್ರದರ್ಶನ ಮಾದರಿ ಎಲ್‍ಸಿಡಿಗಳಲ್ಲಿ ವೀಡಿಯೋ ಬಿತ್ತರಿಸ ಲಾಗುತ್ತಿದೆ. ಎಲ್ಲಾ ಪ್ರಯಾಣಿಕರಿಗೂ ಕರಪತ್ರ ಹಂಚಲಾಗುತ್ತಿದೆ. ಅಲ್ಲದೆ ಧ್ವನಿ ವರ್ಧಕದ ಮೂಲಕವೂ ಕೊರೊನಾ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗದ ಗುಣಲಕ್ಷಣಗಳು, ಚಿಕಿತ್ಸೆಯ ಅಗ ತ್ಯತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರೈಲ್ವೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಿರ್ಮಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿ ನಲ್ಲಿ ಒಂದು ಪ್ರಕರಣ ದೃಢಪಟ್ಟಿರುವುದ ರಿಂದ ಪ್ರಯಾಣಿಕರು ಎಚ್ಚರಿಕೆ ವಹಿಸು ವುದು ಸೂಕ್ತ.
ಕರೆ ಮಾಡಿದರೂ ಕರೊನಾ: ಎಲ್ಲೆಡೆ ಕರೊನಾ ಜಾಗೃತಿ ವ್ಯಾಪಕವಾಗಿದೆ. ಯಾವುದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕರೊನಾ ಬಗ್ಗೆ ಎಚ್ಚರಿಕೆ ವಹಿಸುವ ಸಂದೇಶ ಕೇಳಿಬರುತ್ತದೆ. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ(01123978046)ಗೆ ಕರೆ ಮಾಡುವಂತೆ ತಿಳಿಸಲಾಗುತ್ತಿದೆ. ಈ ಜಾಗೃತಿ ಸಂದೇಶದ ಬಳಿಕವೇ ಕರೆ ಕನೆಕ್ಟ್ ಆಗು ತ್ತಿದೆ. ಮತ್ತೊಂದೆಡೆ ಕರೊನಾ ಭೀತಿ ಯನ್ನು ಹಾಸ್ಯಾತ್ಮಕವಾಗಿ ತಿಳಿಸುವ ವೀಡಿಯೋ ಗಳು ವೈರಲ್ ಆಗುತ್ತಿವೆ. ಹಾಗೆಯೇ ಕರೆ ಮಾಡಿದಾಗ ಆರಂಭದಲ್ಲೇ ಕೆಮ್ಮುವ ಶಬ್ಧ ಕೇಳುವುದನ್ನೂ ಟ್ರೋಲ್ ಮಾಡಲಾಗಿದೆ. `ನನಗೆ ಫೋನ್ ಕರೆ ಮಾಡುವವರ ಗಮ ನಕ್ಕೆ: ಕರೆಯ ಆರಂಭದಲ್ಲಿ ಕೇಳುವ ಕೆಮ್ಮುವ ಶಬ್ಧ ನನ್ನದಲ್ಲ, ಅದು ಕೊರೊನಾ ಜಾಗೃತಿಗಾಗಿ ಸರ್ಕಾರ ನೀಡುತ್ತಿರುವ ಸಂದೇಶ… ನಾನು ಆರೋಗ್ಯವಾಗಿದ್ದೇನೆ’ ಎಂದು ಅನೇಕರು ವಾಟ್ಸಾಪ್ ಸ್ಟೇಟಸ್, ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.