ಮೈಸೂರು ರೇಸ್ ಕೋರ್ಸ್‍ನಲ್ಲಿ ಅಕ್ರಮ ಕುದುರೆ ಜೂಜಾಟ 8 ಮಂದಿ ಸೆರೆ, 2.33 ಲಕ್ಷ ರೂ. ನಗದು ವಶ
ಮೈಸೂರು

ಮೈಸೂರು ರೇಸ್ ಕೋರ್ಸ್‍ನಲ್ಲಿ ಅಕ್ರಮ ಕುದುರೆ ಜೂಜಾಟ 8 ಮಂದಿ ಸೆರೆ, 2.33 ಲಕ್ಷ ರೂ. ನಗದು ವಶ

March 10, 2020

ಮೈಸೂರು, ಮಾ.9(ಆರ್‍ಕೆ)-ಮೈಸೂರು ರೇಸ್ ಕೋರ್ಸ್‍ನಲ್ಲಿ ಬೆಟ್ಟಿಂಗ್ ಕಟ್ಟಿಕೊಂಡು ಅನಧಿಕೃತವಾಗಿ ಕುದುರೆ ಜೂಜಾಟದಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2,32,910 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಚಂದ್ರಶೇಖರ ಅವರ ಮಗ ವಿಶ್ವನಾಥ(52), ಬಸವೇಶ್ವರ ರಸ್ತೆ 9ನೇ ಕ್ರಾಸ್ ನಿವಾಸಿ ಮರಿಯಪ್ಪರ ಮಗ ಎಂ. ಹರೀಶ್(40), ಕೆಬಿಎಲ್ ಬಡಾವಣೆಯ ಶಿವಕುನ್ನೇಗೌಡರ ಮಗ ಸುನಿಲ್‍ಕುಮಾರ್(33), ಮಂಡಿ ಮೊಹಲ್ಲಾ, ಪಟ್ಟೇಗಾರ್ ನಿವಾಸಿ ಆರ್.ಕೃಷ್ಣಾಚಾರ್ ಅವರ ಮಗ ಶ್ರೀನಿವಾಸ(28), ಆಲನಹಳ್ಳಿ 3ನೇ ಮೇನ್ ರಸ್ತೆಯ ತಮ್ಮಣ್ಣ ಅವರ ಮಗ ಶಶಿಕುಮಾರ್(34), ಮೇಟಗಳ್ಳಿ 1ನೇ ಮೇನ್ ನಿವಾಸಿ ಕೆಂಚೇಗೌಡರ ಮಗ ಶಂಕರ್(46), ಕೋಲಾರ ಜಿಲ್ಲೆ ಕೆಜಿಎಫ್‍ನ ರಾಬರ್ಟ್‍ಸನ್‍ಪೇಟೆಯ ನಾರಾಯಣಸ್ವಾಮಿ ಮಗ ಸಿ.ಎನ್. ಪ್ರಕಾಶ(61) ಹಾಗೂ ಮಂಗಳೂರಿನ ಕಂಕನಾಡಿಯ ಇಬ್ರಾಹಿಂ ಅವರ ಮಗ ಅಮೀನ್(40) ಬಂಧಿತರು.

ಮೈಸೂರು ರೇಸ್‍ಕೋರ್ಸ್‍ನಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಪ್ರತ್ಯೇಕವಾಗಿ ಬೆಟ್ಟಿಂಗ್ ಕಟ್ಟಿಕೊಂಡು ಕುದುರೆ ಜೂಜಾಟದಲ್ಲಿ ತೊಡಗಿದ್ದಾರೆಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮಾರ್ಚ್ 8ರಂದು ಆರೋಪಿಗಳನ್ನು ಬಂಧಿಸಿ ಬೆಟ್ಟಿಂಗ್ ದಂಧೆಗೆ ಹೂಡಿದ್ದ 2,32,910 ರೂ. ನಗದನ್ನು ವಶಪಡಿಸಿಕೊಂಡರು.

ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ವಿ.ಮರಿಯಪ್ಪರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್‍ಗಳಾದ ಎ.ಮಲ್ಲೇಶ್, ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನರ್ಹೋನಾ, ಅರುಣ್‍ಕುಮಾರ್, ಆರ್.ಪುರುಷೋತ್ತಮ, ವಿ.ರಘು, ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜಿ.ಎನ್.ಶ್ರೀಕಾಂತ್, ಸಬ್‍ಇನ್ಸ್‍ಪೆಕ್ಟರ್ ಸಿದ್ದೇಶ್, ಎಎಸ್‍ಐ ಪುಟ್ಟಸ್ವಾಮಿಗೌಡ, ಸಿಬ್ಬಂದಿಗಳಾದ ಕಿರಣ್, ಮೋಹನ್ ಪಾಲ್ಗೊಂಡಿದ್ದರು.

Translate »