ಮೈಸೂರು,ಮಾ.9-ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಖಾಸಗಿ ಬಸ್‍ಗಳ ದರವನ್ನು ನಾಳೆ (ಮಾ.10) ಯಿಂದ ಹೆಚ್ಚಳ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಖಾಸಗಿ ಬಸ್ ಮಾಲೀ ಕರ ಸಂಘದ ಗೌರವ ಕಾರ್ಯದರ್ಶಿ ತಾಯೂರು ವಿಠಲಮೂರ್ತಿ ತಿಳಿಸಿದ್ದಾರೆ.
ದಿನೇ ದಿನೆ ಡಿಸೇಲ್, ಬಿಡಿಭಾಗಗಳು, ಇನ್ಷೂರೆನ್ಸ್ ಮತ್ತು ಟೋಲ್ ದರಗಳು ಹೆಚ್ಚಾ ಗುತ್ತಿದ್ದು ಉದ್ಯಮವನ್ನು ನಡೆಸುವುದೇ ಕಷ್ಟವಾಗಿರುವುದರಿಂದ ಅನಿವಾರ್ಯವಾಗಿ ಈ 3 ಜಿಲ್ಲೆಯ ಖಾಸಗಿ ಬಸ್ ದರವನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.