ರಂಗಾಯಣ ನಿರ್ದೇಶಕರ ವಿರುದ್ಧ ಮುಂದುವರೆದ ಹೋರಾಟ ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ
News, ಮೈಸೂರು

ರಂಗಾಯಣ ನಿರ್ದೇಶಕರ ವಿರುದ್ಧ ಮುಂದುವರೆದ ಹೋರಾಟ ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ

January 1, 2022

ಮೆರವಣ ಗೆೆ, ಧರಣ ಗೆ ಅವಕಾಶ ನೀಡದ ಪೊಲೀಸರು

ಬೇಡಿಕೆ ಆಲಿಸಿದ ರಂಗಾಯಣ ಜಂಟಿ ನಿರ್ದೇಶಕ, ಉಪ ನಿರ್ದೇಶಕ

ಮೈಸೂರು, ಡಿ.೩೧(ಎಂಟಿವೈ)- ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ನಡೆ ಯುತ್ತಿರುವ ಹೋರಾಟ ಶುಕ್ರವಾರವೂ ಮುಂದುವರಿದಿದ್ದು, ಮೆರವಣ ಗೆ, ಧರಣ ಮತ್ತು ಮನವಿ ಸಲ್ಲಿಸುವ ವಿಚಾರಕ್ಕೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರಿನ ಕುಕ್ಕರಹಳ್ಳಿ ಕೆರೆ ಮುಂಭಾಗದಿAದ ರಂಗಾಯಣದತ್ತ ಮೆರ ವಣ ಗೆಯಲ್ಲಿ ತೆರಳಲು ಮುಂದಾಗಿದ್ದ ರಂಗಾಯಣ ಉಳಿಸಿ ಹೋರಾಟ ಸಮಿತಿಯ ಸದಸ್ಯರನ್ನು ಪೊಲೀಸರು ತಡೆದರು. ಇದ ರಿಂದ ಆಕ್ರೋಶಗೊಂಡ ಹೋರಾಟಗಾರರು ಪೊಲೀಸರು ರಸ್ತೆಗೆ ಅಡ್ಡವಾಗಿ ಹಾಕಿದ್ದ ಬ್ಯಾರಿಕೇಡ್ ಬಳಿ ಧರಣ ಕುಳಿತರು. ಈ ವೇಳೆ ಕೆಲಕಾಲ ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಸೂಚನೆ ಧಿಕ್ಕರಿಸಿ ಮೆರವಣ ಗೆ ನಡೆಸಲು ಪ್ರಯತ್ನಿಸಿದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದ ಪೊಲೀಸರು, ಬಂಧಿಸಲು ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದರು. ಇದರಿಂದ ಪ್ರತಿಭಟನಾಕಾರರು ರಂಗಾಯಣದತ್ತ ತೆರಳದೆ ಓವಲ್ ಮೈದಾನದ ಬಳಿ ಪ್ರತಿ ಭಟಿಸಲು ನಿರ್ಧರಿಸಿ, ಕಲಾಮಂದಿರದಲ್ಲಿರುವ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ, ಓವಲ್ ಮೈದಾನದತ್ತ ತೆರಳುವುದಾಗಿ ಹೇಳಿದರು. ಆದರೆ ಪೊಲೀಸರು ಕಲಾ ಮಂದಿರದ ಮಾರ್ಗದಲ್ಲಿ ಮೆರವಣ ಗೆ ಹೋಗಲು ಅವಕಾಶ ನೀಡದೆ ಮತ್ತೆ ತಡೆಯೊಡ್ಡಿದರು.

ಮೆರವಣ ಗೆಯಲ್ಲಿ ಯಾವುದೇ ಘೋಷಣೆ ಕೂಗದೆ ಮೌನವಾಗಿ ಸಾಗುವುದಾಗಿ ಪ್ರತಿ ಭಟನಾಕಾರರು ತಿಳಿಸಿದರಾದರೂ, ಪೊಲೀ ಸರು ಮೆರವಣ ಗೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಮಾತನಾಡಿದ ಇನ್ಸ್ಪೆಕ್ಟರ್ ಪೂಣಚ್ಚ ಕಲಾಮಂದಿರದ ರಸ್ತೆಯಲ್ಲಿ ತೆರಳಲು ಯಾವುದೇ ಕಾರಣಕ್ಕೂ ಅವಕಾಶ ನೀಡು ವುದಿಲ್ಲ. ನೀವು ಆ ರಸ್ತೆಯಲ್ಲಿ ತೆರಳಿದರೆ, ರಂಗಾಯಣದ ಪರ ಪ್ರತಿಭಟಿಸಲು ಮತ್ತೊಂದು ತಂಡ ಬಂದರೆ ಸಮಸ್ಯೆಯಾಗುತ್ತದೆ. ಎಚ್ಚರಿಕೆ ಧಿಕ್ಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದರಿಂದ ಕೆರಳಿದ ಸಮಾಜವಾದಿ ಪ.ಮಲ್ಲೇಶ್ ಅವರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಸರಿಸಿ ಮುಂದೆ ಹೋಗಲು ಪ್ರಯ ತ್ನಿಸಿದರು. ಆಗ ಪೊಲೀಸರು ತಡೆದರು. ಈ ವೇಳೆ ಮಫ್ತಿ ಪೊಲೀಸ್ ಸಿಬ್ಬಂದಿ ನಿಂದಿಸಿ ದರೆಂದು ಪ.ಮಲ್ಲೇಶ್ ಆಕ್ರೋಶÀ ಗೊಂಡರು. ನನ್ನ ಜೀವನದ ೪೦ ವರ್ಷಗಳ ಹೋರಾಟ ದಲ್ಲಿ ಪೊಲೀಸರು ಯಾವಾಗಲೂ ಈ ರೀತಿ ನಡೆಸಿಕೊಂಡಿಲ್ಲ. ಮೇಲಾಧಿಕಾರಿ ಗಳು ಇರುವಾಗ ನಿಮ್ಮ ಸಿಬ್ಬಂದಿ ನಿಂದಿಸುವು ದೆಂದರೆ ಏನರ್ಥ? ಅತಿಯಾಯ್ತು ನಿಮ್ಮದು? ರೌಡಿಸಂನAತೆ ವರ್ತಿಸಬಾರದು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇನ್ಸ್ಪೆಕ್ಟರ್ ಅಜರುದ್ದೀನ್, ನಮ್ಮ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಹೊರತು ಹಗುರ ವಾಗಿ ಮಾತನಾಡಿಲ್ಲ ಎಂದರು. ಈ ವೇಳೆ ಪ್ರತಿಭಟನಾಕಾರರು-ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಅರಿತ ಮುಖಂಡ ಕೆ.ಹರೀಶ್‌ಗೌಡ ಎಲ್ಲರನ್ನು ಸಮಾಧಾನಿಸಿದರು. ಬಳಿಕ, ಕಲಾಮಂದಿರಕ್ಕೆ ತೆರಳಲು ಅವಕಾಶ ಕೊಡದಿದ್ದರೆ ಅಧಿ ಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಹೇಳಿ ಧರಣ ಕುಳಿತರು. ಈ ವೇಳೆ ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ÷್ಯ, `ಕಟ್ಟುತ್ತೇವೆ ನಾವು ಕಟ್ಟುತ್ತೇವೆ’ ಕ್ರಾಂತಿಗೀತೆಗಳನ್ನು ಹಾಡುತ್ತಾ ಕುಳಿತರು.

ಸರ್ಕಾರದಿಂದ ಉತ್ತರ ಬಂದಿಲ್ಲ: ಧರಣ ನಿರತ ಸ್ಥಳಕ್ಕೆ ಆಗಮಿಸಿದ ರಂಗಾ ಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ, ಉಪ ನಿರ್ದೇಶಕಿ ನಿರ್ಮಲ ಮಠಪತಿ ಅವರು ಪ್ರತಿಭಟನಾ ಕಾರರ ಬೇಡಿಕೆ ಆಲಿಸಿದರು. ನೀವು ಕೊಟ್ಟಿ ರುವ ಮತ್ತು ಅವರು(ಮತ್ತೊಂದು ಗುಂಪು) ಕೊಟ್ಟಿರುವ ಮನವಿ ಪತ್ರವನ್ನು ಇಲಾಖೆ ಮುಖ್ಯಸ್ಥರಿಗೆ ಕಳುಹಿಸಿದ್ದೇವೆ. ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ನಾವು ಅದನ್ನೇ ನಿರೀಕ್ಷಿಸುತ್ತಿದ್ದೇವೆ. ಪ್ರತಿನಿತ್ಯ ನಡೆಯುವ ಬೆಳವಣ ಗೆ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಪ.ಮಲ್ಲೇಶ್ ಮಾತನಾಡಿ, ರಂಗಾಯಣದ ಇಬ್ಬರು ಅಧಿಕಾರಿಗಳು ಕಾರ್ಯಪ್ಪ ವಿರುದ್ಧ ವರದಿ ಕೊಟ್ಟಿದ್ದರೆ ಸರಿಯಾಗಿ ಇರುತ್ತಿತ್ತು. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ನಿಮಗೂ ಸಲ್ಲಿಸಿದ್ದರೂ ಏನು ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಣ ್ಣÃರು ಸುರಿಸಿದ ರಂಗಕರ್ಮಿ: ರಂಗಾ ಯಣದ ವಿಚಾರದಲ್ಲಿ ನಡೆಯುತ್ತಿರುವ ಬೆಳವಣ ಗೆ ಕುರಿತು ಅಧಿಕಾರಿಗಳಿಗೆ ವಿವರಿಸುವಾಗ ಹೆಚ್.ಜನಾರ್ಧನ್ ಕಣ ್ಣÃರಿಟ್ಟರು. ರಂಗಾಯಣ ಜೀವ ಇದ್ದ ಹಾಗೆ. ನಾವು ೩೦ ವರ್ಷದಿಂದ ಉತ್ತಿ, ಎತ್ತಿ ಬೆಳೆಸಿದ್ದೇವೆ. ಬೆಳೆಸಿದ ಸಂಸ್ಥೆ ನಾಶವಾಗುತ್ತಿರುವುದು ನೋವು ತಂದಿದೆ ಎಂದು ಭಾವುಕ ರಾದರು. ರಂಗಸಮಾಜದ ಸಭೆ ಕರೆಯು ವಂತೆ ಪತ್ರ ಬರೆಯಲು ಅವಕಾಶ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದರು. ಬಳಿಕ, ಅಧಿಕಾರಿಗಳು ನಿರ್ಗಮಿಸುತ್ತಿದ್ದಂತೆ ಪ್ರತಿಭಟನಾಕಾರರು ಓವಲ್ ಮೈದಾನದ ತನಕ ಮೌನ ಮೆರವಣ ಗೆ ನಡೆಸಿ ಪ್ರತಿಭಟನೆ ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು, ಪಾಲಿಕೆ ಸದಸ್ಯ ಜೆ.ಗೋಪಿ, ಕಾಂಗ್ರೆಸ್ ಮುಖಂಡ ಕೆ.ಹರೀಶ್‌ಗೌಡ, ಮಾಜಿ ಮೇಯರ್ ಪುರುಷೋತ್ತಮ, ಉಗ್ರ ನರಸಿಂಹೇಗೌಡ, ಜಿ.ಪಿ.ಬಸವರಾಜು, ಚಂದ್ರಶೇಖರ ಮೇಟಿ, ಟಿ.ಗುರುರಾಜ್, ಕೃಷ್ಣಪ್ರಸಾದ್, ಹೊಸಳ್ಳಿ ಶಿವು, ಸೋಮಣ್ಣ ಇನ್ನಿತರರು ಪಾಲ್ಗೊಂಡಿದ್ದರು.

Translate »