ರಂಗಭೂಮಿ ಸದಾ ಸತ್ಯದ ಪರವಾಗಿರಬೇಕು ಹಿರಿಯ ನಾಟಕಕಾರ ಎಸ್.ಎನ್.ಸೇತುರಾಂ ಪ್ರತಿಪಾದನೆ
ಮೈಸೂರು

ರಂಗಭೂಮಿ ಸದಾ ಸತ್ಯದ ಪರವಾಗಿರಬೇಕು ಹಿರಿಯ ನಾಟಕಕಾರ ಎಸ್.ಎನ್.ಸೇತುರಾಂ ಪ್ರತಿಪಾದನೆ

January 1, 2022

ರಂಗಾಯಣದ ಸಂವತ್ಸರ ಪಕ್ಷಿನೋಟ ಪ್ಲವರಂಗ-೨೦೨೧

ನಾಟಕ ಉಳಿಯುವುದು ಜನರಿಂದ; ಸರ್ಕಾರ ನೀಡುವ ಹಣದಿಂದಲ್ಲ

ಅಡ್ಡಂಡ ಕಾರ್ಯಪ್ಪ ದೈಹಿಕವಾಗಿ ಸೊರಗಿದ್ದಾರೆ;

ಆದರೆ ರಂಗಾಯಣ ಬಲಗೊಳಿಸಿದ್ದಾರೆಎಲ್ಲದಕ್ಕಿಂತ ಮಾನವತೆ ದೊಡ್ಡದು. ರಂಗಾಯಣದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣ ಕವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಇಲ್ಲಿಗೆ ಬಂದಾಗ ಡಾ.ಬಿ.ವಿ.ಕಾರಂತರು ಹಾಗೂ ಎಸ್.ಎಲ್.ಭೈರಪ್ಪನವರು ಹೆಚ್ಚು ಕಾಡಿದರು. ಸರ್ಕಾರದ ನೆರವಿಲ್ಲದೆ ೧೦ ಲಕ್ಷ ರೂ. ವೆಚ್ಚದಲ್ಲಿ ಅಂದವಾದ `ಬಿ.ವಿ.ಕಾರಂತ ರಂಗಚಾವಡಿ’ ನಿರ್ಮಿಸಿದ್ದೇವೆ. ಕಾರಂತರ ಪುತ್ಥಳಿ ಸ್ಥಾಪಿಸಿದ್ದೇವೆ. ೫೦೦ಕ್ಕೂ ಹೆಚ್ಚು ಗಿಡ ನೆಟ್ಟು ರಂಗಾಯಣ ಆವರಣವನ್ನು ಹಸಿರಾಗಿಸಿದ್ದೇವೆ. ದಸರಾ ರಂಗೋತ್ಸವ, ಬಿ.ವಿ.ಕಾರಂತರ ರಂಗೋತ್ಸವ’ ಹೀಗೆ ವರ್ಷವಿಡೀ ನಿತ್ಯ ರಂಗ ಚಟುವಟಿಕೆ ನಡೆದಿದೆ. ಕಾರಂತರ ಹೆಸರೇಳುವವರು ಅವರ ಸ್ಮರಣೆಯನ್ನು ಚಿರಸ್ಥಾಯಿ ಮಾಡುವಂತಹ ಇಂತಹ ಯಾವ ಕೆಲಸ ಮಾಡಿದ್ದಾರೆ ಹೇಳಲಿ. ಕಲಾವಿದರನ್ನು ೬ ತಿಂಗಳ ಕಾಲ ಒಂದೆಡೆ ಹಿಡಿದಿಟ್ಟುಕೊಂಡು ಎಸ್.ಎಲ್.ಭೈರಪ್ಪನವರ `ಪರ್ವ’ ಕಾದಂಬರಿಯನ್ನು ಯಶಸ್ವಿಯಾಗಿ ರಂಗರೂಪಕ್ಕಿಳಿಸಿದ್ದೇವೆ. ಲಾಕ್‌ಡೌನ್ ವೇಳೆ ಒಂದೂವರೆ ಲಕ್ಷ ಮಕ್ಕಳಿಗೆ ಆಹಾರ ನೀಡಿರುವ ಮಾಳವಿಕ ಅವರನ್ನು ಜನರ ಸಂಕೇತವಾಗಿ, ಹತ್ತಾರು ನದಿ, ಕಲ್ಯಾಣ , ಕೆರೆ ಸ್ವಚ್ಛತೆಗೆ ಕಾರಣರಾಗಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ಜಲದ ಸಂಕೇತವಾಗಿ ಬಹುರೂಪಿ ರಾಷ್ಟಿçÃಯ ನಾಟಕೋತ್ಸವಕ್ಕೆ ಆಹ್ವಾನಿಸಲಾಗಿದೆ. ಇನ್ನು ಒಂದು ವರ್ಷ ನಿಮ್ಮೆಲ್ಲರ ಸಹಕಾರದಿಂದ ಅದ್ಭುತ ಕೆಲಸ ಮಾಡುತ್ತೇನೆ. ಹೊಟ್ಟೆಕಿಚ್ಚಿನಿಂದ ರಂಗಾಯಣದ ಹೆಸರನ್ನು ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲಸ ಮಾಡಲು ತೊಂದರೆ ಕೊಟ್ಟರೆ ರೌದ್ರಾವೇಶ ಅನಿವಾರ್ಯವಾಗುತ್ತದೆ.
-ಅಡ್ಡಂಡ ಸಿ.ಕಾರ್ಯಪ್ಪ, ನಿರ್ದೇಶಕ ಮೈಸೂರು ರಂಗಾಯಣ

ರAಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರು ಕೋವಿಡ್ ಸಂದರ್ಭದಲ್ಲೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. `ಪರ್ವ’ ನಾಟಕ ಪ್ರಯೋಗ ರಂಗಭೂಮಿಯಲ್ಲಿ ಇತಿಹಾಸ ದಾಖಲಿಸಿದೆ. ಇವರು ೫೦ ಲಕ್ಷ ಅನುದಾನ ಕೇಳಿದರೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಜೆಟ್‌ನಲ್ಲಿ ೧ ಕೋಟಿ ರೂ. ಅನುದಾನ ಘೋಷಿಸಿದರು. ರಂಗಾಯಣವನ್ನು ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಕಾರ್ಯಪ್ಪನವರಿಗಿದೆ. ಹೊರಗಡೆ ಯಾರು, ಹೇಗಾದರೂ ಕೂಗಾಡಲಿ. ನಾವು ನಿಮ್ಮ ಜೊತೆಯಲ್ಲಿರುತ್ತೇವೆ. ಸಚಿವರೂ ಇದನ್ನೇ ಹೇಳಿದ್ದಾರೆ. ನಿಮ್ಮ ಜೊತೆ ಸರ್ಕಾರವೂ ಇದೆ. ಎಲ್ಲರೂ ನಮ್ಮವರೇ ಎಂದು ಭಾವಿಸಿ, ಮುಂದೆ ಸಾಗೋಣ. -ಎಲ್.ನಾಗೇಂದ್ರ, ಶಾಸಕ

ಮೈಸೂರು, ಡಿ.೩೧(ಎಸ್‌ಬಿಡಿ)- ರಂಗಭೂಮಿಯ ವರು ಸತ್ಯದ ಪರ ಇರಬೇಕು ಎಂದು ಹೆಸರಾಂತ ನಾಟಕಕಾರ, ನಟ ಎಸ್.ಎನ್.ಸೇತುರಾಂ ತಿಳಿಸಿದರು.
ಮೈಸೂರಿನ ರಂಗಾಯಣದಲ್ಲಿ ಶುಕ್ರವಾರ ಏರ್ಪ ಡಿಸಿದ್ದ `ಪ್ಲವರಂಗ-೨೦೨೧, ಒಂದು ಸಂವತ್ಸರದ ಪಕ್ಷಿನೋಟ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಾನು ಯಾವುದೋ ಒಂದು ದಿನ ಯಾರೋ ಒಬ್ಬರಿಗೆ ಮತ ಹಾಕಿ ಎಂದು ಹೇಳಿದ್ದಕ್ಕೆ ನನ್ನನ್ನು ಭಕ್ತ, ಬಾಯಿಬಡುಕ ಎಂದೆಲ್ಲಾ ಜರಿದರು. ಹಾಗೆಯೇ ಲೋಕಾಯುಕ್ತವನ್ನು ಮತ್ತೆ ಏಕೆ ತರಲಿಲ್ಲ ಎಂದು ಪ್ರಶ್ನಿಸಿದ್ದನ್ನೂ ಗಮನಿಸಬೇಕು. ಯಾರು ಯಾವುದೇ ಪ್ರಣಾಳಿಕೆ ಹೊರಡಿಸಲಿ, ಯಾವುದೇ ಫಲಕ ಹಾಕಲಿ ರಂಗಭೂಮಿಯವರು ಸತ್ಯದ ಪರ ಇರೋಣ. ನಾಟಕ ಉಳಿಯುವುದು ಪ್ರೇಕ್ಷಕರಿಂದಲೇ ಹೊರತು ಸರ್ಕಾರ ನೀಡುವ ಹಣದಿಂದಲ್ಲ ಎನ್ನುವು ದನ್ನು ಅರಿತು ನಡೆಯೋಣ ಎಂದು ಹೇಳಿದರು.

ರಂಗಾಯಣದ ವೇದಿಕೆ ಕನಸುಗಳನ್ನು ಬಿತ್ತಬೇಕು. ಕೆಟ್ಟದ್ದು ಮಾತನಾಡಲು ಸಾವಿರ ವಿಚಾರ ಸಿಗುತ್ತವೆ. ಇಲ್ಲವೇ ನೋಡಿದೆಲ್ಲಾ ಕೆಟ್ಟದ್ದಾಗಿ ಕಾಣಲೂಬಹುದು. ಅಭ್ಯಾಸವಾಗಿದ್ದ ದಾಸ್ಯದ ಭಾವನೆಯನ್ನು ಬದಲಾ ಯಿಸುವ, ನಿಜವಾದ ಇತಿಹಾಸ ತಿಳಿಸುವ, ಆತ್ಮಗೌರವ ಬೆಳೆಸಿಕೊಂಡು ಕೀಳರಿಮೆ ತೊಳೆಯುವ, ವಿರೋಧಾ ಭಾಸ ಅಳಿಸುವ ನಿಟ್ಟಿನಲ್ಲಿ ರಂಗಾಯಣ ನಡೆದು ಕೊಳ್ಳಬೇಕು. ಯಾವ ಸಿದ್ಧಾಂತವೂ ಕೆಟ್ಟದ್ದನ್ನು ಹೇಳಿಲ್ಲ. ಸಿದ್ಧಾಂತ ಬೋಧಿಸುವಾಗ ಒಮ್ಮೆ ನಮ್ಮ ಆತ್ಮವನ್ನು ಕೇಳಿಕೊಳ್ಳಬೇಕು ಎಂದು ಕೆಲ ಸಂಗತಿ ಗಳನ್ನು ಉದಾಹರಿಸುವ ಮೂಲಕ ತಿಳಿಸಿದರು.

ಎಲ್ಲರೂ ಮಾನವರಾಗಿ ಬದುಕೋಣ. ನಮ್ಮ ಧರ್ಮ ಅದ್ಭುತವಾದದ್ದು. ನಿಂತಲ್ಲೇ ನೆನಪಿಸಿಕೊಂಡರೂ ದೇವರು ಅನುಗ್ರಹಿಸುತ್ತಾನೆ. ಸಾಯೋವರೆಗೂ ಸಂಭ್ರಮದಿAದ ಬದುಕೋಣ. ಎಲ್ಲವನ್ನೂ ವಿರೋಧಿಸುವುದು ಬೇಡ. ಎಲ್ಲರ ಬಗ್ಗೆಯೂ ನಿರಾಶಾಭಾವ ಬೇಡ. ನಮಗೆ ನಂಬಿಕೆಯೇ ಮೂಲ ಧರ್ಮವಾಗಬೇಕೇ ಹೊರತು, ಅಪನಂಬಿಕೆಯಲ್ಲ. ಕೆಲಸವಿಲ್ಲ ಎಂದು ಬೇರೇನೋ ಮಾಡುವುದು ಬೇಡ. ಜೀವನದಲ್ಲಿ ಕೆಲವೊಂದು ಕಾಮಿಡಿಗೆಂದೇ ಸೃಷ್ಟಿಯಾಗುತ್ತವೆ. ಅದನ್ನು ಕಾಮಿಡಿಯಾಗಿಯೇ ತೆಗೆದುಕೊಳ್ಳಬೇಕು. ದೇಶವನ್ನು ಪ್ರೀತಿಸೋಣ, ದೇಶ ಒಡೆಯುತ್ತೀನಿ ಎನ್ನುವವರು ಮಾತ್ರ ನಮ್ಮ ಶತ್ರುವೆಂದು ತಿಳಿಯೋಣ ಎಂದು ಹೇಳಿದರು.

ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಾನು ವೃತ್ತಿಪರ ಸಾಹಿತಿ ಹಾಗೂ ಕಲಾವಿದನಲ್ಲ. ಒಂದು ರೀತಿಯಲ್ಲಿ ನನ್ನ ಬದುಕೇ ಪ್ರವೃತ್ತಿಯಂತಾ ಗಿದೆ. ಮನುಷ್ಯರ ನಡುವಿನ ಸಂಬAಧ ಮೀರಿ ನಾನು ಏನನ್ನೂ ಮಾಡಿಲ್ಲ. ಎಲ್ಲರೂ ಮಾನವರಾಗಿ ಬದುಕೋಣ ಎಂದು ಕನ್ನಡಿ ಹಿಡಿಯಲು ರಂಗ ಭೂಮಿಗೆ ಬಂದೆ. ನಮ್ಮ ಅರಿವು ಸ್ಪಷ್ಟವಾಗಲು, ಸಮಸ್ಯೆ ಗುರುತಿಸಿಕೊಳ್ಳಲು ರಂಗಭೂಮಿ ಹತ್ತಿರ ವಾಗಬೇಕು ಎನ್ನುವುದನ್ನು ತಿಳಿದಿದ್ದೇನೆ ಎಂದು ಮೈಸೂರಿನಲ್ಲಿ ವೃತ್ತಿ ಹಾಗೂ ಪ್ರವೃತ್ತಿಯ ಸಂದರ್ಭ ವನ್ನು ಸ್ಮರಿಸಿಕೊಂಡ ಸೇತುರಾಂ, ಆದಾಯ ತೆರಿಗೆ ವಿಷಯದಲ್ಲಿ ೪೫ ವರ್ಷಗಳ ಅನುಭವ, ಅರಿವಿದೆ. ಜಿಡಿಪಿ ವಿಚಾರವಾಗಿ ಸರ್ಕಾರವನ್ನು ದೂರುತ್ತಾರೆ, ಆದರೆ ಉತ್ಪತ್ತಿ ಹೆಚ್ಚಾದರೆ ಮಾತ್ರ ಜಿಡಿಪಿ ಹೆಚ್ಚಾಗು ತ್ತದೆ. ಮದ್ಯ, ಸಿಗರೇಟು ಸೇವಿಸುವಾಗ ಇಲ್ಲದ ಆತಂಕ ಕೋವಿಡ್ ವ್ಯಾಕ್ಸಿನ್ ಪಡೆಯುವಾಗ ತೋರುತ್ತಾರೆ. ಮಾತ್ರೆ ತೆಗೆದುಕೊಳ್ಳುವಾಗ ಗೂಗಲ್ ಮಾಡಿ, ಅದರಿಂದಾಗುವ ಅಡ್ಡಪರಿಣಾಮಗಳನ್ನು ಹುಡುಕು ತ್ತಾರೆ. ಇಂತಹ ವಿರೋಧಭಾಸ ಅಳಿದು ನಮ್ಮ ಅರಿವು ಸ್ಪಷ್ಟವಾಗಬೇಕು ಎಂದು ಅಭಿಪ್ರಾಯಿಸಿದರು.

ಭಾರತೀಯ ಪಥೀಕರು: ಕಾರ್ಯಕ್ರಮದಲ್ಲಿ `ಪ್ಲವರಂಗ’ ಪುಸ್ತಿಕೆ ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ಸಾಂಸ್ಕೃತಿಕ ಏಕತೆ ಸಾಧಿಸದ ಹೊರತು ರಾಜಕೀಯ ಏಕತೆ ಸಾಧ್ಯವಿಲ್ಲ ಎಂದು ಮಹನೀಯರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಇತ್ತು. ಈ ಕಾರಣದಿಂದಲೇ ನಾವು ಸಾವಿರ ವರ್ಷಗಳ ಕಾಲ ಗುಲಾಮರಾಗಿದ್ದೆವು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಇದಕ್ಕೆ ಪರಿಹಾರವೇನು ಎನ್ನುವ ಬಗ್ಗೆ ವೈಚಾರಿಕತೆ, ಅರಿವು ಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ನಾಟಕವೂ ಮಾರ್ಗವಾಗಿದೆ. ಎಡಪಂಥ, ಬಲಪಂಥ, ನಡುಪಂಥ ಇದರಲ್ಲಿ ನಾವು ಯಾವ ಪಂಥಕ್ಕೂ ಸೇರಿದವರಲ್ಲ. ನಾವು ಭಾರತೀಯ ಪಥದಲ್ಲಿ ನಡೆಯುವವರು. ಆದರೆ ಅಡ್ಡಂಡ ಕಾರ್ಯಪ್ಪನ ವರನ್ನು ಸಮಾಜವಾದಿಗಳು ವಿರೋಧಿಸುತ್ತಿರುವುದು ವಿಶೇಷ. ಕಾರ್ಯಪ್ಪನವರು ಸಾಂಸ್ಕೃತಿಕ ಏಕತೆ ಸಾಧಿಸುವ ಪ್ರಯತ್ನದಲ್ಲಿದ್ದಾರೆ. ತಪ್ಪಿದ್ದರೆ ಕಿವಿಹಿಂಡಿ ಸರಿಪಡಿಸಿ. ಅದನ್ನು ಬಿಟ್ಟು ಕೆಲಸ ಮಾಡಲಾಗದ ರೀತಿಯಲ್ಲಿ ಮನಸ್ಸು-ಕನಸುಗಳನ್ನು ಕೊಲ್ಲಬೇಡಿ ಎಂದು ಹೇಳಿದರು. ಭಾರತೀಯತೆ ಎನ್ನುವುದು ಒಂದು ಸಿದ್ಧಾಂತ. ಭಾರತೀಯತೆಯಿಂದ ದೂರ ಹೋಗುವುದೇ ವೈಚಾರಿಕತೆ ಎಂದು ಹೇಳಿದರೆ ಅದನ್ನು ನಾಡಿನ ಜನ ಒಪ್ಪಬೇಕಾ?. ಚಕ್ರವರ್ತಿ ಸೂಲಿಬೆಲೆಯನ್ನು ಹಿಂದೆ ಸಿಎಂ ಆಗಿದ್ದವರು ವೇದಿಕೆಯಲ್ಲೇ ವಿರೋಧಿಸಿದ್ದರು. ಅದು ಇನ್ನೂ ಮುಂದುವರೆದಿದೆ. ಪ್ರಸ್ತುತ ಪ್ರತಿಭಟನೆ ನಡೆಸುತ್ತಿರು ವವರು ಅದೇ ಮಾಜಿ ಸಿಎಂಗೆ ಕರೆ ಮಾಡಿ, ತಾವು ಆಯ್ಕೆ ಮಾಡಿಕೊಂಡಿದ್ದ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿರುವು ದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಹಾಗಾದರೆ ಅದು ರಾಜಕೀಯವಲ್ಲವೇ?. ಚಕ್ರವರ್ತಿ ಸೂಲಿಬೆಲೆ ಮಾತನಾಡಬಾರದು ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರö್ಯದ ಹರಣವಾಗುವುದಿಲ್ಲವೇ ? ಎಂದು ಪ್ರಶ್ನಿಸಿದ ಅವರು, ಅಡ್ಡಂಡ ದೈಹಿಕವಾಗಿ ಸೊರಗಿದ್ದಾರೆ. ಆದರೆ ರಂಗಾಯಣ ಬಲಗೊಳಿ ಸಿದ್ದಾರೆ. ಆರ್‌ಎಸ್‌ಎಸ್ ಕಲಿಸಿರುವ ಸಂಸ್ಕೃತಿ ಕಟ್ಟುವ ಕೆಲಸವನ್ನು ಬದ್ಧತೆಯಿಂದ ಮಾಡುವಾಗ ಕೆಲವು ಬಾರಿ ನಿಂದÀನೆ, ಚರ್ಚೆಗೊಳಗಾಗುವುದು ಸಾಮಾನ್ಯ. ಸುಡುವುದಕ್ಕಾಗಿ ಬೆಂಕಿ ಹಚ್ಚಿದರೂ ಅದನ್ನು ಮೊಟ್ಟೆಯೊಡೆಯುವ ಶಾಖ ಎಂದು ತಿಳಿಯಬೇಕು. ಭಾರತೀಯತೆಗೆ ಯಶಸ್ಸು ತಂದುಕೊಡುವ ಪ್ರಯತ್ನ ಮುಂದುವರೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ `ಪರ್ವ’ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ವನರಂಗದಲ್ಲಿ ರಾಮಚಂದ್ರ ಹಡಪದ ಮತ್ತು ಕಿರಿಯ ರೆಪರ್ಟರಿ ಕಲಾವಿದರು `ಪ್ಲವರಂಗ ಗಾನ’ ಪ್ರಸ್ತುತಪಡಿಸಿದರು. ಹಲವು ನಾಟಕಗಳಲ್ಲಿ ಬಳಸಿಕೊಂಡಿರುವ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಈ ವೇಳೆ ಕಿಕ್ಕಿರಿದಿದ್ದ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಯೊಂದಿಗೆ ಪ್ರೋತ್ಸಾಹಿಸಿದರು. ಅಲ್ಲದೆ `ಭಾರತ ಮಾತೆಗೆ ಜೈ’, `ವಂದೇ ಮಾತರಂ’ ಘೋಷಣೆ ಮೊಳಗಿಸಿದರು. ಮಳೆ ಕಾರಣದಿಂದ ಸಭಾ ಕಾರ್ಯಕ್ರಮ ವನ್ನು `ಭೂಮಿಗೀತ’ ವೇದಿಕೆಗೆ ಸ್ಥಳಾಂತರಿಸಲಾಯಿತು.

Translate »