ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ
ಮೈಸೂರು

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ

January 1, 2022

ಮೈಸೂರು.ಡಿ.೩೧(ಎಂಟಿವೈ)- ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿ ನಿಯರು ಕರಾಟೆ ಸೇರಿದಂತೆ ಆತ್ಮ ರಕ್ಷಣೆಗಾಗಿ ಸಮರ ಕಲೆ ಕಲಿಯುವುದು ಅನಿವಾರ್ಯ ಎಂದು ಜಿ.ಪಂ ಉಪಕಾರ್ಯದರ್ಶಿ ಡಾ.ಪ್ರೇಮ್‌ಕುಮಾರ್ ಕರೆ ನೀಡಿದರು.

ಮೈಸೂರಿನ ಕುವೆಂಪುನಗರದ ಹಿಂದು ಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿ ಯರ ವಸತಿ ನಿಲಯದ ಆವರಣ ದಲ್ಲಿ ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೈಸೂರು ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ವಿದ್ಯಾರ್ಥಿನಿ ಯರಿಗಾಗಿ ಆಯೋಜಿಸಿದ್ದ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರö್ಯ ಬರುವ ಮೊದಲು ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಯುವ ಅವ ಕಾಶವಿರಲಿಲ್ಲ. ಆದರೆ ದೇಶಕ್ಕೆ ಸ್ವಾತಂತ್ರö್ಯ ದೊರಕಿದ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ದಿಂದ ಮಹಿಳೆಯರಿಗೆ ಶಿಕ್ಷಣದ ಹಕ್ಕನ್ನು ನೀಡಲಾಗಿದೆ. ಇದರಿಂದಲೇ ಇಂದು ಮಹಿಳೆ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಶಿಕ್ಷಣ ಪಡೆದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಕನಿಷ್ಠ ಇಂಗ್ಲಿಷ್ ಜ್ಞಾನ ಇರಬೇಕಾಗುತ್ತದೆ. ಸಂವಹನದೊAದಿಗೆ ಕೌಶಲ್ಯ ಅಗತ್ಯವಿದೆ. ಆತ್ಮ ವಿಶ್ವಾಸದಿಂದ ಉತ್ತರಿಸಬೇಕು. ಭಾರತದ ಮಹಿಳೆಯರಿಗೆ ಅದ್ಭುತವಾದ ಶಕ್ತಿಯಿದೆ. ಈ ವಯಸ್ಸಿನಲ್ಲಿ ಏನು ಬೇಕಾದರೂ ಸಾಧಿಸ ಬಹುದು ಎಂದು ಅವರು ವಿವರಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್.ಎಸ್. ಬಿಂಧ್ಯಾ ಮಾತನಾಡಿ, ದೈಹಿಕ, ಮಾನಸಿಕ ಹಾಗೂ ಆತ್ಮ ರಕ್ಷಣೆಗೆ ಕರಾಟೆ ಕಲಿಯುವುದು ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಕರಾಟೆ ಕಲಿತುಕೊಂಡು ಸ್ವಯಂ ರಕ್ಷಿಸಿಕೊಳ್ಳಬೇಕು. ಕರಾಟೆ ಕಲಿಯುವುದರಿಂದ ಆರೋಗ್ಯದ ಸುಧಾರಣೆಯೂ ಆಗುತ್ತದೆ ಎಂದರು.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರ ಗಳಲ್ಲೂ ಹಗಲು ರಾತ್ರಿಯೆನ್ನದೆ ಕೆಲಸ ಮಾಡು ತ್ತಿದ್ದು, ಅವರ ಮೇಲೆ ದೌರ್ಜನ್ಯ ನಡೆಯುತ್ತಿ ರುತ್ತವೆ. ಕರಾಟೆ ಕಲಿತಿದ್ದರೆ, ಸ್ವಯಂ ರಕ್ಷಿಸಿ ಕೊಳ್ಳಬಹುದು. ವಾರದಲ್ಲಿ ೨ ದಿನ ೧ ಗಂಟೆಗಳ ಕಾಲ ತರಬೇತಿ ನಡೆಯುತ್ತದೆ. ಒಳ್ಳೆಯ ಆಶಯ ಇಟ್ಟುಕೊಂಡು ಸರ್ಕಾರ ತರಬೇತಿಯನ್ನು ಕೊಡುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿ ಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕರಾಟೆ ತರಬೇತು ದಾರರಾದ ಶಿವದಾಸನ್, ಶಂಕರ್, ಮಹದೇವ ಸ್ವಾಮಿ, ಸಿದ್ದರಾಜು, ನಾಗರಾಜು, ಮಹೇಶ ಪತ್ರಾಂಕಿತ ವ್ಯವಸ್ಥಾಪಕ ವಿಶ್ವನಾಥ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಳಾದ ಚಂದ್ರಕಲಾ, ಸ್ವರ್ಣಲತಾ, ಮಹೇಶ, ರಾಜಣ್ಣ, ಶಶಿಕಲಾ, ವಿಸ್ತರಣಾಧಿಕಾರಿಗಳಾದ ಸತೀಶ್, ಸುಕನ್ಯ, ಜಗದೀಶ್‌ಕೋರಿ, ಪರಶುರಾಮ್, ಎಲ್ಲಾ ನಿಲಯ ಪಾಲಕರು ಪಾಲ್ಗೊಂಡಿದ್ದರು.

Translate »