ಹಂಚ್ಯಾಗೆ ನೂತನ ಗ್ರಂಥಾಲಯ, ಪಬ್ಲಿಕ್ ಶಾಲೆ ಮಂಜೂರಿಗೆ ಪ್ರಯತ್ನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ
ಮೈಸೂರು

ಹಂಚ್ಯಾಗೆ ನೂತನ ಗ್ರಂಥಾಲಯ, ಪಬ್ಲಿಕ್ ಶಾಲೆ ಮಂಜೂರಿಗೆ ಪ್ರಯತ್ನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ

January 1, 2022

ಮೈಸೂರು, ಡಿ.೩೧(ಎಂಟಿವೈ)- `ಹಂಚ್ಯಾ ಗ್ರಾಮಕ್ಕೆ ನೂತನವಾಗಿ ಗ್ರಂಥಾಲಯ ಹಾಗೂ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸಲು ಪ್ರಯತ್ನಿಸುತ್ತಿರು ವುದಾಗಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ತಿಳಿಸಿದ್ದಾರೆ.

ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಾನುವಾರು ಆರೋಗ್ಯ ತಪಾಸಣೆ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹಕಾರದಿಂದ ಹಂಚ್ಯಾ ಗ್ರಾಮಕ್ಕೆ ಪಶುಚಿಕಿತ್ಸಾಲಯ ಮಂಜೂರಾಯಿತು ಎಂದರು.

ಹಂಚ್ಯಾ ಗ್ರಾಮಕ್ಕೆ ಪಶುಚಿಕಿತ್ಸಾಲಯ ಅಗತ್ಯವಾಗಿತ್ತು. ಈ ವಿಷಯವನ್ನು ಬಿ.ವೈ.ವಿಜಯೇಂದ್ರ ಅವರ ಗಮನಕ್ಕೆ ತಂದಾಗ ಅವರು ಪಶು ಇಲಾಖೆ ರಾಜ್ಯ ಮುಖ್ಯ ಅಧಿಕಾರಿಯಾಗಿದ್ದ ಪಿ.ಮಣ ವಣ್ಣನ್ ಅವರಿಗೆ ತಿಳಿಸುವ ಮೂಲಕ ಆಸ್ಪತ್ರೆ ಮಂಜೂರು ಮಾಡಿಸಿ ಕೊಟ್ಟರು. ಹಂಚ್ಯಾ ಗ್ರಾಮಕ್ಕೆ ಗ್ರಂಥಾಲಯ, ಪಬ್ಲಿಕ್ ಶಾಲೆ ತರುವ ಪ್ರಯತ್ನ ನಡೆಸುತ್ತಿದ್ದೇನೆ. ಅದು ಶೀಘ್ರದಲ್ಲೇ ಕಾರ್ಯ ರೂಪಕ್ಕೆ ಬರಲಿವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನ, ಕಾಲುಬಾಯಿ ಜ್ವರ ರೋಗದ ಬಗ್ಗೆ ಜಾಗೃತಿ ಅಭಿಯಾನ, ಮೇವಿನ ಬೀಜ ವಿತರಣೆ, ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ, ಪಶು ಚಿಕಿತ್ಸಾಲಯಕ್ಕೆ ಉಚಿತ ಔಷಧ ನೀಡಿದ ದಾನಿಗಳಿಗೆ ಕೃತಜ್ಞತೆ ಸಮರ್ಪಿಸಲಾಯಿತು. ಕಾಲು ಬಾಯಿ ಜ್ವರರೋಗದ ಪರಿಣಾಮ, ತಡೆಗಟ್ಟುವಿಕೆ ಮತ್ತು ರೈತರ ಜವಾಬ್ದಾರಿ ಎಂಬ ವಿಷಯ ಕುರಿತು ಪಶು ಸೂಕ್ಷಾ÷್ಮಣು ಜೀವಿ ತಜ್ಞ ಕ್ಯಾಪ್ಟನ್ ಡಾ.ತಿಮ್ಮಯ್ಯ ಅವರು ವಿಚಾರ ಮಂಡಿಸಿ, ರೈತರಿಗೆ ಅರಿವು ಮೂಡಿಸಿದರು.

ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ಪಶುವೈದ್ಯರಾದ ಡಾ.ಅನಿಲ್‌ಕುಮಾರ್, ಡಾ.ಮಲ್ಲಿಕಾರ್ಜುನ, ಡಾ.ರಾಜಶೇಖರ ಮುಡಬಾಗಿಲು ಹಾಗೂ ಡಾ.ನಿಖಿತ್ ಅವರುಗಳು ಜಾನುವಾರುಗಳಿಗೆ ಚಿಕಿತ್ಸೆಗೆ ನೀಡಿದರು. ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ವಿಜೇತರಾದ ಜಾನುವಾರುಗಳ ಮಾಲೀಕರಿಗೆ ಮೊದಲನೇ ಬಹು ಮಾನ ೩೦೦೦ರೂ., ಎರಡನೇ ಬಹುಮಾನ ೨೦೦೦ ರೂ., ಮೂರನೇ ಬಹುಮಾನ ೧೦೦೦ ರೂ. ಮೌಲ್ಯದ ಹಸುವಿನ ತಿಂಡಿ ಮತ್ತು ಹಾಲಿನ ಕ್ಯಾರಿಯರ್ ನೀಡಲಾಯಿತು. ಆಯ್ದ ೮ ಮಂದಿಗೆ ತಲಾ ೫೦೦ ರೂ. ಬೆಲೆ ಬಾಳುವ ಹಸುವಿನ ತಿಂಡಿ ಮತ್ತು ಹಾಲು ಕ್ಯಾರಿಯರ್ ಅನ್ನು ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಅಪರ ನಿರ್ದೇಶಕ ಡಾ.ಪ್ರಸಾದಮೂರ್ತಿ, ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ, ಇಲಾಖೆಯ ಮೈಸೂರು ಜಿಲ್ಲಾ ಉಪನಿರ್ದೇಶಕ ಡಾ.ಷಡಕ್ಷರಮೂರ್ತಿ, ಸಹಾಯಕ ನಿರ್ದೇಶಕ ಡಾ.ಬಾಲರಾಜ್, ರೆಮಿನಿಸೆನ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಕರ್ನಲ್ ಡಾ.ಜಗದೀಶ್, ಉಪಾಧ್ಯಕ್ಷ ಡಾ.ಲಕ್ಷಿ÷್ಮÃನಾರಾಯಣ ಸ್ವಾಮಿ, ಪ್ರಧಾನ ಕಾರ್ಯ ದರ್ಶಿ ಡಾ.ಕಾಂತರಾಜ್, ಖಜಾಂಚಿ ಡಾ.ಚಂದ್ರಶೇಖರ್, ವೆಸ್ಟರ್ ಔಷಧ ಕಂಪನಿ ಮಾಲೀಕ ಡಾ.ಧೀರೇಂದ್ರ ಕುಮಾರ್, ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಮ್ಮೇಗೌಡ, ಗ್ರಾಮದ ಮುಖಂಡ ಕೆ.ಸಣ್ಣಸ್ವಾಮಿ, ಬೋರೇಗೌಡ, ವೆಂಕಟೇಶ್ ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »