ಮಸ್ತ್ ಮಜಾ ಇಲ್ಲದ ಹೊಸ ವರ್ಷಾಚರಣೆ ೨೦೨೨
News, ಮೈಸೂರು

ಮಸ್ತ್ ಮಜಾ ಇಲ್ಲದ ಹೊಸ ವರ್ಷಾಚರಣೆ ೨೦೨೨

January 1, 2022
  • ಕೊರೊನಾಗೆ ಶಪಿಸುತ್ತಾ ಹೊಸ ವರ್ಷದ ಹೊಸ ನಿರೀಕ್ಷೆ ಜಪ
  • ನಿರ್ಬಂಧದ ನಡುವೆಯೂ ವರ್ಷಾಚರಣೆಗೆ ನಾನಾ ಹೊಸ ಮಾರ್ಗ ಕಂಡುಕೊAಡ ಯುವ ಜನತೆ
  • ಹೋಟೆಲ್‌ಗಳ ರೂಂ ಬುಕ್ ಮಾಡಿ ನಾಲ್ಕು ಗೋಡೆ ನಡುವೆಯೇ `ಸೇವನೆ’ ಸಂತಸಕ್ಕೆ ಸೀಮಿತ
  • ೧೦ ಗಂಟೆಗೆಲ್ಲಾ ಅಂಗಡಿ-ಮುAಗಟ್ಟು ಬಂದ್ ಮಾಡಿಸಿದ ಪೊಲೀಸರು: ನಿರಾಸೆಯಿಂದಲೇ ಮರಳಿದ ಜನ
  • ಮಧ್ಯಾಹ್ನದಿಂದಲೇ ಮದ್ಯ, ಮಾಂಸ, ಮೊಟ್ಟೆ, ಮೀನು ಇನ್ನಿತರೆ ಖಾದ್ಯ ಖರೀದಿ ಭರಾಟೆ
  • ಅಬ್ಬರದ ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ; ಬಿಕೋ ಎನ್ನುತ್ತಿದ್ದ ಮೈಸೂರಿನ ರಸ್ತೆಗಳು

ಮೈಸೂರು, ಡಿ.೩೧(ಆರ್‌ಕೆ)-ಈ ಬಾರಿಯ ಹೊಸ ವರ್ಷಾಚರಣೆ ಸಂಭ್ರಮಕ್ಕೆ ನೈಟ್ ಕರ್ಫ್ಯೂ ನಿರ್ಬಂಧ ಅಡ್ಡಿಯಾಗಿ ಯುವ ಪೀಳಿಗೆಗೆ ಭಾರೀ ನಿರಾಶೆಯನ್ನುಂಟು ಮಾಡಿದೆ. ಆದರೂ ಇಂದಿನ ಯುವ ಪೀಳಿಗೆಯು ತಮ್ಮದೇ ಆದ ಹೊಸ ಶೈಲಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಸರ್ಕಾರವು ರಾಜ್ಯಾದ್ಯಂತ ರಾತ್ರಿ ೧೦ ರಿಂದ ಮುಂಜಾನೆ ೫ರವರೆಗೆ ಕರ್ಫ್ಯೂ ವಿಧಿಸಿರುವುದರಿಂದ, ಸಾಮಾನ್ಯವಾಗಿ ಮಧ್ಯ ರಾತ್ರಿವರೆಗೆ ಅಬ್ಬರದಿಂದ ವರ್ಷಾಚರಣೆ ಮಾಡಿ ಸಂಭ್ರಮಿ ಸುತ್ತಿದ್ದ ಯುವ ಪೀಳಿಗೆಯ ಉತ್ಸಾಹಕ್ಕೆ ತಣ ್ಣÃರೆರಚಿದಂತಾಗಿದೆ. ಆದರೆ ಮೈಸೂರಿನ ಬಹುತೇಕ ಯುವಕ-ಯುವತಿಯರು ತಮ್ಮ ಸ್ನೇಹಿತರೊಡಗೂಡಿ ಹೋಟೆಲ್‌ಗಳಲ್ಲಿ ರೂಮ್‌ಗಳನ್ನು ಬುಕ್ ಮಾಡಿಕೊಂಡು ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ರಾತ್ರಿ ೧೦ ಗಂಟೆಯವರೆಗೆ ಸರಳವಾಗಿ ಹೊಸ ವರ್ಷವನ್ನು ಆಚರಿ ಸಿದ ನಂತರ ಬೇಕಾದ ಆಹಾರ ಪದಾರ್ಥ ಹಾಗೂ ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಟೆಲ್‌ನ ಕೊಠಡಿಯಲ್ಲಿ ಹೊಸ ವರ್ಷ ಆಚರಿಸಿ, ಸಂಭ್ರಮಿಸಿದ್ದಾರೆ. ಇದಕ್ಕೆ ಪೂರಕವೆಂಬAತೆ ಮೈಸೂರಿನ ಹೋಟೆಲ್‌ಗಳಲ್ಲಿ ಶೇ.೮೦ಕ್ಕೂ ಹೆಚ್ಚು ರೂಮ್‌ಗಳು ಸ್ಥಳೀಯರಿಂದಲೇ ಬುಕ್ ಆಗಿದ್ದವುಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ. ಸಾಮಾನ್ಯವಾಗಿ ಸಂಜೆ ೭.೩೦ರ ನಂತರ ಹೊಸ ವರ್ಷ ಆಚರಣೆಯ ಕಾರ್ಯಕ್ರಮಗಳು ಹೋಟೆಲ್, ರೆಸಾರ್ಟ್, ಪಬ್, ಕ್ಲಬ್ ಮುಂತಾದೆಡೆ ಆರಂಭವಾಗುತ್ತಿದ್ದವು. ಆದರೆ ಈ ಬಾರಿ ನೈಟ್ ಕರ್ಫ್ಯೂ ಎಫೆಕ್ಟ್ನಿಂದಾಗಿ ಮಧ್ಯಾಹ್ನ ೩ ಗಂಟೆಯಿAದಲೇ ಹೊಸ ವರ್ಷದ ಪಾರ್ಟಿಗಳು ಆರಂಭವಾದವು. ಆದರೆ ಎಂದಿನAತೆ ಡಿಜೆ, ಆರ್ಕೆಸ್ಟಾç ಸೇರಿದಂತೆ ಯಾವುದೇ ರೀತಿಯ ಅಬ್ಬರದ ಸಂಗೀತ ಇರಲಿಲ್ಲ. ಸದ್ದು-ಗದ್ದಲವಿಲ್ಲದೆ ರಾತ್ರಿ ೧೦ ಗಂಟೆಯವರೆಗೆ ವರ್ಷಾಚರಣೆ ನಡೆಯಿತು. ಪೊಲೀಸರು ಗರುಡ ಹಾಗೂ ಪಿಸಿಆರ್ ವಾಹನಗಳ ಧ್ವನಿವರ್ಧಕಗಳ ಮೂಲಕ ತಿಳುವಳಿಕೆ ನೀಡಿ ಹೋಟೆಲ್, ರೆಸಾರ್ಟ್ ಸೇರಿದಂತೆ ಅಂಗಡಿ-ಮುAಗಟ್ಟುಗಳನ್ನು ರಾತ್ರಿ ೯.೩೦ರಿಂದಲೇ ಮುಚ್ಚಿಸುತ್ತಿದ್ದ ದೃಶ್ಯ ಕಂಡು ಬಂತು.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ.೫೦ರಷ್ಟು ಪ್ರವೇಶಕ್ಕೆ ಮಾತ್ರ ಅವಕಾಶ ವಿದ್ದುದರಿಂದ ವರ್ಷಾಚರಣೆ ಮಂಕಾಗಿತ್ತು. ಆದರೆ ವರ್ಷಾಚರಣೆ ದಿನ ಯುವ ಪೀಳಿಗೆ ಬಳಸುವ ಕೇಕ್, ಮಾಂಸಾಹಾರ ಹಾಗೂ ಮದ್ಯ ಮಾರಾಟವಂತೂ ಎಂದಿನAತೆ ಜೋರಾಗೇ ಇತ್ತು. ಬೇಕರಿಗಳಲ್ಲಿ ವಿಧ-ವಿಧವಾದ ಕೇಕ್‌ಗಳಿಗೆ ಆರ್ಡರ್ ಮಾಡಿದ್ದ ಯುವ ಪೀಳಿಗೆ ಅವುಗಳನ್ನು ಹೋಟೆಲ್ ರೂಮ್‌ಗಳಿಗೆ ಕೊಂಡೊಯ್ಯುತ್ತಿದ್ದ ದೃಶ್ಯ ಕಂಡು ಬಂತು. ಅಲ್ಲದೇ ಹೋಂ ಸ್ಟೇ ಹಾಗೂ ಫಾರಂ ಹೌಸ್‌ಗಳಲ್ಲೂ ಸ್ನೇಹಿತರು ಸೇರಿ ಹೊಸ ವರ್ಷದ ಪಾರ್ಟಿ ನಡೆಸಿದ ಬಗ್ಗೆ ವರದಿಯಾಗಿದೆ. ನೈಟ್ ಕರ್ಫ್ಯೂ ಇದ್ದರೂ ಹೋಂ ಡೆಲಿವರಿಗೆ ಅವಕಾಶವಿದ್ದ ಕಾರಣ ಅಪಾರ್ಟ್ಮೆಂಟ್, ಫಾರಂ ಹೌಸ್ ಹಾಗೂ ಪಿಜಿಗಳಲ್ಲಿನ ಯುವ ಪೀಳಿಗೆ ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಮಾಂಸಾಹಾರ ತರಿಸಿಕೊಂಡ ಬಗ್ಗೆ ವರದಿಯಾಗಿದೆ. ಅದಕ್ಕೆ ಪೂರಕವೆಂಬAತೆ ಸ್ವಿಗ್ಗಿ ಹಾಗೂ ಜಮೋಟೋದಂತಹ ಆಹಾರ ಸರಬರಾಜು ಸಂಸ್ಥೆಯ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿಯೇ ಕಂಡು ಬಂತು. ಅದೇ ರೀತಿ ಮಾಂಸಾಹಾರ ಹೋಟೆಲ್‌ಗಳ ಮುಂದೆ ಈ ಸಂಸ್ಥೆಗಳ ವಾಹನಗಳ ದಟ್ಟಣೆ ಕಂಡು ಬಂತು.
ಇಂದು ಮಧ್ಯಾಹ್ನದಿಂದಲೇ ಕೇಕ್, ಮದ್ಯ ಹಾಗೂ ನಾನಾ ಖಾದ್ಯಗಳನ್ನು ಮನೆಗೆ ಪಾರ್ಸಲ್ ಕೊಂಡೊಯ್ಯುತ್ತಿದ್ದುದು ಕಂಡು ಬಂತು. ವೈನ್ ಸ್ಟೋರ್‌ಗಳಲ್ಲಿ ರಾತ್ರಿ ೯.೩೦ ರಲ್ಲಿಯೂ ಮದ್ಯ ಖರೀದಿಗೆ ಯುವ ಪೀಳಿಗೆ ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು. ಬೇಕರಿ ಹಾಗೂ ಬೇಕ್ ಪಾಯಿಂಟ್‌ಗಳಲ್ಲಿ ಎರಡು ದಿನ ಮುಂಚಿತವಾಗಿಯೇ ಕೇಕ್‌ಗೆ ಆರ್ಡರ್ ಮಾಡಿದ್ದ ಯುವ ಪೀಳಿಗೆಗೆ ಇಂದು ಸಂಜೆಯಿAದಲೇ ಅವುಗಳನ್ನು ಸಪ್ಲೆöÊ ಮಾಡಲು ಅಂಗಡಿಗಳವರು ಆರಂಭಿಸಿದ್ದರು. ಸಾಫ್ಟ್ ಡ್ರಿಂಕ್ಸ್, ತಿಂಡಿ-ತಿನಿಸು ಮಾರಾಟವು ಹೆಚ್ಚಾಗಿ ಕಂಡು ಬಂತು. ಮಾಂಸ, ಮೀನು, ಮೊಟ್ಟೆ, ಕೋಳಿ ಮಾರಾಟವೂ ಜೋರಾಗಿತ್ತು.

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ತಪಾಸಣೆಯಲ್ಲಿ ತೊಡಗಿದ್ದರು. ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಹೋಟೆಲ್, ರೆಸಾರ್ಟ್, ಕ್ಲಬ್‌ಗಳಿಗೆ ಭೇಟಿ ನೀಡಿ ಕೋವಿಡ್ ನಿಯಮ ಪಾಲಿಸಲಾಗುತ್ತಿದೆಯೇ? ಎಂಬುದರ ಬಗ್ಗೆ ಪರಿಶೀಲನೆ ನಡೆಸಿದರು. ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸರು ಮಾತ್ರವಲ್ಲದೇ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿಗಳನ್ನೂ ಕೂಡ ಬಂದೋಬಸ್ತ್ಗೆ ಬಳಸಿಕೊಳ್ಳಲಾಗಿತ್ತು.

ಹೊಸ ವರ್ಷಾಚರಣೆ ವೇಳೆ ಭಾರೀ ಆದಾಯ ಗಳಿಸುತ್ತಿದ್ದ ಪ್ರವಾಸಿ ವಾಹನ ಮಾಲೀಕರು ಹಾಗೂ ಟೂರಿಸ್ಟ್ ಗೈಡ್‌ಗಳಿಗೆ ಈ ಬಾರಿಯೂ ಕರ್ಫ್ಯೂನಿಂದಾಗಿ ನಿರಾಸೆ ಉಂಟಾಯಿತು. ತಮಿಳುನಾಡು, ಕೇರಳದಿಂದ ಬರುತ್ತಿದ್ದ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಲಿಲ್ಲ. ಅನುಕೂಲಸ್ಥ ಯುವ ಪೀಳಿಗೆ ವರ್ಷಾಚರಣೆಗಾಗಿ ಗೋವಾ, ಕೇರಳ ಹಾಗೂ ತಮಿಳುನಾಡಿನ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಂಡಿದ್ದರು.

Translate »