ಕರ್ನಾಟಕಕ್ಕೆ ಜನವರಿ ಅಂತ್ಯದಲ್ಲಿ ಅಪ್ಪಳಿಸಲಿದೆ ಕೊರೊನಾ ಮೂರನೇ ಅಲೆ
News, ಮೈಸೂರು

ಕರ್ನಾಟಕಕ್ಕೆ ಜನವರಿ ಅಂತ್ಯದಲ್ಲಿ ಅಪ್ಪಳಿಸಲಿದೆ ಕೊರೊನಾ ಮೂರನೇ ಅಲೆ

January 1, 2022
  • ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ
  • ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯಕೀಯ ಪರಿಕರ ಸಿದ್ಧಪಡಿಸಿಕೊಳ್ಳಲು ಸೂಚನೆ
  • ಮೈಸೂರು, ಚಾ.ನಗರ, ಕೊಡಗು ಸೇರಿ ಗಡಿ ಜಿಲ್ಲೆಯ ಡಿಸಿಗಳಿಗೆ ಕಟ್ಟೆಚ್ಚರ ವಹಿಸಲು ತಾಕೀತು
  • ಜನವರಿ ೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ

ಬೆಂಗಳೂರು, ಡಿ. ೩೧(ಕೆಎಂಶಿ)-ಕೊರೊನಾ ಸೋಂಕಿನ ಮೂರನೇ ಅಲೆ ಜನವರಿ ಅಂತ್ಯಕ್ಕೆ ಹೆಚ್ಚಳವಾಗಲಿದೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿ ಕಾರಿಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯ ವರು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆ ಉಂಟಾಗದAತೆ ಎಚ್ಚರಿಕೆ ವಹಿಸಿ. ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಲ್ಲಿ ೩ನೇ ಅಲೆ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಸೂಚನೆ ಮೇರೆಗೆ
೩ನೇ ಅಲೆ ತಡೆಯಲು ಸಾಧ್ಯವಾದಷ್ಟು ಪ್ರಯತ್ನ ಮಾಡಿ. ಮಾರ್ಚ್ ಅಥವಾ ಏಪ್ರಿಲ್ ತಿಂಗಳವರೆಗೂ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ನಿಮ್ಮ ಜವಾಬ್ದಾರಿ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಿಮಗೆ ಎಲ್ಲಾ ರೀತಿಯ ನೆರವನ್ನು ಸರ್ಕಾರ ನೀಡಲಿದೆ. ನೆರೆಯ ತಮಿಳುನಾಡು, ಕೇರಳ, ಮಹಾರಾಷ್ಟç ರಾಜ್ಯಗಳಲ್ಲಿ ಈಗಾಗಲೇ ಸೋಂಕಿನ ತೀವ್ರತೆ ಹೆಚ್ಚಿದೆ.

ಈ ರಾಜ್ಯಗಳ ಗಡಿಯಲ್ಲಿರುವ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ ಜಿಲ್ಲಾಧಿಕಾರಿಗಳು, ತೀವ್ರ ಎಚ್ಚರಿಕೆ ವಹಿಸಬೇಕು. ನೀವು ಗಡಿಗಳಲ್ಲಿ ರಾಜ್ಯ ಪ್ರವೇಶಿಸುವವರ ಮೇಲೆ ನಿಗಾ ವಹಿಸಿ. ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಗಡಿ ಪ್ರವೇಶಕ್ಕೆ ಅನುಮತಿ ನೀಡಿ. ಜೊತೆಯಲ್ಲೇ ೭೪ ಗಂಟೆ ಮೊದಲು ಕೊರೊನಾ ನೆಗೆಟಿವ್ ವರದಿ ಇರಲಿ. ಬೆಂಗಳೂರಿನಲ್ಲಿ ಈಗಿನಿಂದಲೇ ಎಚ್ಚೆತ್ತುಕೊಳ್ಳಲು ಸೂಚನೆ ನೀಡಿದ್ದೇನೆ.
ಒಮಿಕ್ರಾನ್ ಭೀತಿ ಜೊತೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿದೆ. ಈಗಾಗಲೇ ಎರಡು ಅಲೆಗಳಿಂದ ಸಮಸ್ಯೆ ಎದುರಿಸಿದ್ದೇವೆ.
ಮೂರನೇ ಅಲೆ ಪ್ರಾಥಮಿಕ ಹಂತದಲ್ಲೇ ತಡೆಯಲು ನೀವು ಟೊಂಕಕಟ್ಟಿ ನಿಲ್ಲಿ. ನಿಮ್ಮ ಆದ್ಯತೆ ಮೊದಲು ಕೊರೊನಾಗೆ ಕೊಡಿ. ಹಾಗೆಂದು ಬೇರೆ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಅಳವಡಿಸಿರುವ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿ. ಜನವರಿ ೩ ರಿಂದ ೧೫ ರಿಂದ ೧೮ ವರ್ಷದ ಮಕ್ಕಳಿಗೆ ಲಸಿಕೆ ವಿತರಣೆಯನ್ನು ಜಾಗ್ರತೆಯಿಂದ ಮಾಡಿ. ಈ ವಯೋಮಿತಿಯ ಎಲ್ಲ ಮಕ್ಕಳಿಗೂ ಲಸಿಕೆ ಕೊಡಿಸಿ, ಅವರ ಆರೋಗ್ಯ ಕಾಪಾಡಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜನಸ್ನೇಹಿ, ಜನಪರ ಡಿಸಿಗಳಾಗಿ ಕಾರ್ಯನಿರ್ವಹಿಸಿ
ಬೆಂಗಳೂರು, ಡಿ. ೩೧(ಕೆಎಂಶಿ)- ದಬ್ಬಾಳಿಕೆ ಬಿಟ್ಟು ಜನರ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೆಳ ಹಂತದ ಅಧಿಕಾರಿಗಳು ಜಿಲ್ಲಾಧಿಕಾರಿಗಳಂತೆ ವರ್ತಿಸಲು ಅವಕಾಶ ಮಾಡಿಕೊಡಬೇಡಿ. ನಿಮ್ಮ ಸ್ವಂತಿಕೆ ವಿವೇಚನೆ ಬಳಸಿ ಕೆಲಸ ಮಾಡಿ ಎಂದರು.

ನೀವು ಜನರಿಗೆ ಸ್ಪಂದಿಸುವAತೆ ಕೆಲಸ ಮಾಡಬೇಕು. ಅದು ಬಿಟ್ಟು ಕೆಲವರ ಹಿತಾಸಕ್ತಿಗೆ ಕೆಲಸ ಮಾಡಿದರೆ, ಜಿಲ್ಲಾಧಿಕಾರಿಯ ಘನತೆ ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು. ಇತರ ಐಎಎಸ್ ಅಧಿಕಾರಿಗಳಿಗೂ ನಿಮಗೂ ವ್ಯತ್ಯಾಸವಿದೆ. ನಿಮಗೆ ಅಧಿಕಾರ ಮತ್ತು ಜವಾಬ್ದಾರಿ ಇದೆ. ಇದನ್ನು ಅರಿತು ಕೆಲಸ ಮಾಡಬೇಕು ಎಂದರು. ನಿಮ್ಮಲ್ಲಿ ಇನ್ನಷ್ಟು ಮೃದುತ್ವ ವಿನಯತೆ ಇರಬೇಕು. ಎಚ್ಚರಿಕೆಯಿಂದ ಆಡಳಿತ ಮಾಡಿ. ಜನರ ನಡುವೆ ಹೋಗಿ ಅವರ ಸಮಸ್ಯೆ ಆಲಿಸಿ ಕೆಲಸ ಮಾಡಿದರೆ, ಸರ್ಕಾರದ ಕಾರ್ಯಕ್ರಮ ಗಳು ಅವರ ಮನೆ ಬಾಗಿಲಿಗೆ ತಲುಪುತ್ತವೆ. ಪ್ರತಿ ಜಿಲ್ಲಾಧಿ ಕಾರಿಗಳ ಸಭೆಯಲ್ಲೂ ಕಚೇರಿ ಬಿಟ್ಟು ಜನರ ಬಳಿಗೆ ತೆರಳಿ ಎಂದು ಹೇಳುತ್ತಲೇ ಇದ್ದೇವೆ. ಆದರೆ ಅದು ಅನುಷ್ಠಾನಗೊಳ್ಳು ತ್ತಿಲ್ಲ. ಸಬೂಬು ಹೇಳುವುದನ್ನು ನಿಲ್ಲಿಸಿ, ಸರ್ಕಾರದ ಕಾರ್ಯ ಕ್ರಮಗಳನ್ನು ಅಡೆತಡೆ ಇಲ್ಲದೆ ಜನರಿಗೆತಲುಪಿಸುವಂತೆ ಮಾಡಿ. ಕೆಲಸ ಆಗಿಲ್ಲ ಎಂದು ಕೆಳಗಿನ ಅಧಿಕಾರಿಗಳ ಮೇಲೆ ಹಾಕಬೇಡಿ. ಅಭಿವೃದ್ಧಿಯಾಗದಿದ್ದರೆ ನೀವೇ ಹೊಣೆ, ನಿಮ್ಮದೇ ಹೊಣೆಗಾರಿಕೆ. ಅತಿವೃಷ್ಟಿಯಿಂದ ಬೆಳೆ, ಮನೆ ಹಾನಿಯಾಗಿದೆ. ಕೆಲವು ಜಿಲ್ಲಾಧಿಕಾರಿಗಳು, ತಕ್ಷಣವೇ ಸ್ಪಂದಿಸಿ, ಸರ್ಕಾರದ ನಿಯಮಾವಳಿಯಂತೆ ಪರಿಹಾರ ನೀಡಿದ್ದಾರೆ. ಆದರೆ ನಾಲ್ಕು ಜಿಲ್ಲಾಧಿಕಾರಿಗಳು ಇದರಿಂದ ನುಣುಚಿಕೊಂಡಿದ್ದೀರಿ. ಪರಿಹಾರ ನೀಡಲು ನಿಮಗೇನು ದಾಡಿ. ಏತಕ್ಕೆ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ನೀವು ಜನಸೇವಕರು. ಜನಸೇವೆ ಮಾಡಿ, ಜಿಲ್ಲಾ ಮ್ಯಾಜಿಸ್ಟೆçÃಟ್ ಅಂತ ವರ್ತಿಸಬೇಡಿ ಎಂದು ಕಿಡಿಕಾರಿದರು.

Translate »