ಕೊಡಗಲ್ಲಿ ಮುಂದುವರೆದ ಮಳೆ
ಕೊಡಗು

ಕೊಡಗಲ್ಲಿ ಮುಂದುವರೆದ ಮಳೆ

July 14, 2022

ಮಡಿಕೇರಿ ಜು.13- ಕೊಡಗು ಎಂದರೆ ಮಳೆ, ಮಳೆ ಎಂದರೆ ಕೊಡಗು ಎಂಬಾಂತಾ ಗಿದೆ. ಪಶ್ಚಿಮಘಟ್ಟ ಸಾಲಿನ ಎತ್ತರ ಪ್ರದೇಶದ ಲ್ಲಿರುವ ಕೊಡಗು ಜಿಲ್ಲೆ ಅರಬ್ಬಿ ಸಮುದ್ರದಿಂದ ಬೀಸುವ ನೈಋತ್ಯ ಮಾನ್ಸೂನ್ ಮಾರುತ ವನ್ನು ತಡೆದು ಧಾರಾಕಾರ ಮಳೆ ಸುರಿಯು ತ್ತದೆ. ವ್ಯಾಪಕ ಮಳೆಯಾಗುವುದರಿಂದ ಜಿಲ್ಲೆಯಲ್ಲಿನ ನದಿ, ತೊರೆ, ಹಳ್ಳ, ಕೊಳ್ಳ, ಜಲಪಾತಗಳು ತುಂಬಿ ಹರಿಯುತ್ತಿವೆ.

ಜು.9 ರಂದು 52, 10 ರಂದು 98, 11 ರಂದು 66.71, 12 ರಂದು 72.70 ಮತ್ತು 13 ರಂದು 49.28 ಮಿ.ಮೀ. ಮಳೆಯಾಗಿದೆ.
ಜು.1 ರಿಂದ ಸುರಿದ ವ್ಯಾಪಕ ಮಳೆಯಿಂ ದಾಗಿ ಕೊಡಗು ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಹಾನಿಯಾಗಿದೆ. 15 ಮನೆಗಳು ತೀವ್ರವಾಗಿ ಮತ್ತು 63 ಮನೆಗಳು ಭಾಗಶಃ ಹಾನಿಯಾಗಿದೆ. (ಮಡಿಕೇರಿ ಮತ್ತು ವಿರಾಜ ಪೇಟೆ ಎರಡು ಮನೆಗಳು ಸಂಪೂರ್ಣ ಹಾನಿ ಯಾಗಿದೆ. ತೀವ್ರವಾಗಿ ಮಡಿಕೇರಿ ತಾಲೂಕಿ ನಲ್ಲಿ 4, ಸೋಮವಾರಪೇಟೆ ತಾಲೂಕಿನಲ್ಲಿ 2, ಕುಶಾಲನಗರ ತಾಲೂಕಿನಲ್ಲಿ 5, ವಿರಾಜ ಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ತಲಾ 2 ಮನೆಗಳು ಹಾನಿಯಾಗಿವೆ).

ಈ ಸಂಬಂಧ ಸಂಪೂರ್ಣ ಮನೆ ಹಾನಿ ಯಾದ ಕುಟುಂಬಗಳಿಗೆ ತಲಾ 95,100 ರೂ. ವಿತರಿಸಲಾಗಿದೆ. ತೀವ್ರವಾಗಿ ಹಾನಿಯಾದ ಮನೆಗಳಿಗೆ 15 ರಲ್ಲಿ 14 ಕುಟುಂಬದವರಿಗೆ ಒಟ್ಟು 10,53,708 ರೂ., ಹಾಗೆಯೇ ಭಾಗಶಃ ಹಾನಿಯಾದ 63 ಮನೆಗಳ ಪೈಕಿ 51 ಕುಟುಂಬದವರಿಗೆ ಒಟ್ಟು 2,65,200 ರೂ. ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ಭಾಗಶಃ ಮನೆ ಹಾನಿ ಸಂಬಂಧ ಮಡಿಕೇರಿ ತಾಲೂಕಿನಲ್ಲಿ 20, ಸೋಮವಾರಪೇಟೆ ತಾಲೂಕಿನಲ್ಲಿ 3, ಕುಶಾಲನಗರ ತಾಲೂಕಿ ನಲ್ಲಿ 23, ವಿರಾಜಪೇಟೆ ತಾಲೂಕಿನಲ್ಲಿ 9, ಪೊನ್ನಂಪೇಟೆ ತಾಲೂಕಿನಲ್ಲಿ 8 ಮನೆಗಳು ಹಾನಿಯಾಗಿದೆ. ಹಾಗೆಯೇ 4 ಜಾನುವಾರುಗಳು ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಯಿಂದ ಪ್ರವಾಹ ಸಂಭವಿಸಬಹುದಾದ ಸ್ಥಳದ ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂ ತರಿಸಲು ಜಿಲ್ಲಾಡಳಿತ ಮುಂದಾಗಿದೆ. ಆ ನಿಟ್ಟಿನಲ್ಲಿ 5 ಪರಿಹಾರ ಕೇಂದ್ರಗಳನ್ನು ತೆರೆಯ ಲಾಗಿದೆ. ಮಡಿಕೇರಿಯಲ್ಲಿ ರೆಡ್‍ಕ್ರಾಸ್ ಭವನ, ಕೊಯನಾಡು ಮಹಾಗಣಪತಿ ದೇವಾಲ ಯದ ಸಭಾಂಗಣ, ವಿರಾಜಪೇಟೆ ತಾಲೂ ಕಿನ ಸೆಂಟ್ ಆನ್ಸ್ ಮತ್ತು ತೋಮಾರ ಶಾಲೆ, ಕುಶಾಲನಗರ ತಾಲೂಕಿನ ಪೊನ್ನತ್ ಮೊಟ್ಟೆ ಪರಿಹಾರ ಕೇಂದ್ರ ತೆರೆಯಲಾಗಿದೆ ಎಂದು ಡಿಸಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

ಹಾಗೆಯೇ ರಸ್ತೆ, ಸೇತುವೆ ಹಾನಿ ಸಂಬಂಧಿ ಸಿದಂತೆ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆಗಳು ಹಲವು ಕಡೆಗಳಲ್ಲಿ ಹಾನಿಯಾಗಿವೆ. ಸೇತುವೆಗಳು ಹಾನಿಯಾಗಿದೆ. 84 ಶಾಲೆಗಳು, 2 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ.

ಸೆಸ್ಕ್ ಸಂಬಂಧಿಸಿದಂತೆ 1116 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 132 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಕಳೆದ 3 ವರ್ಷದ ಇದೇ ಅವಧಿಯಲ್ಲಿ ಮಳೆಯನ್ನು ಗಮನಿಸಿದಾಗ 2019 ರಲ್ಲಿ ಶೇ.116.73 ರಷ್ಟು, 2020 ರಲ್ಲಿ 105.86 ರಷ್ಟು ಮಳೆಯಾಗಿತ್ತು, 2021 ರಲ್ಲಿ 97.32 ರಷ್ಟು ಮಳೆಯಾಗಿತ್ತು. ಪ್ರಸಕ್ತ ವರ್ಷ (2022) ಇದುವರೆಗೆ ಶೇ.114.26 ರಷ್ಟು ಮಳೆಯಾಗಿದೆ. ಜಿಲ್ಲಾಡಳಿತ ವತಿಯಿಂದ ದಿನದ 24 ಗಂಟೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ 0872-221077, ವಾಟ್ಸ್‍ಆಫ್ ಸಂಖ್ಯೆ 8550001077 ಗೆ ಮಳೆ ಹಾನಿ ಸಂಬಂಧ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

ಹಾಗೆಯೇ ತಾಲೂಕುವಾರು ಸಹಾಯ ವಾಣಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಮಡಿಕೇರಿ ತಾಲೂಕು 08272-228396, ಮಡಿಕೇರಿ ನಗರಸಭೆ ವ್ಯಾಪ್ತಿ 08272-220111, ವಿರಾಜಪೇಟೆ ತಾಲೂಕು 08274- 256328, ಸೋಮವಾರಪೇಟೆ ತಾಲೂಕು 08276-282045 ಅನ್ನು ಸಂಪರ್ಕಿಸಬಹುದು.

Translate »