ಜು.22, ಕೊಡವ ಸಮಾಜಗಳಿಂದ ಪ್ರತಿಭಟನೆ
ಕೊಡಗು

ಜು.22, ಕೊಡವ ಸಮಾಜಗಳಿಂದ ಪ್ರತಿಭಟನೆ

July 14, 2022

ಮಡಿಕೇರಿ,ಜು.13- ಸಾಮಾಜಿಕ ಜಾಲ ತಾಣಗಳಲ್ಲಿ ಕೊಡವ ಕುಲದೇವಿ ಕಾವೇರಿ ಹಾಗೂ ಜನಾಂಗದ ಬಗ್ಗೆ ಕಿಡಿಗೇಡಿಗಳು ಅವಹೇಳನಕಾರಿ ಹೇಳಿಕೆಯನ್ನು ಹಾಕಿರುವ ಕುರಿತು ವಿವಿಧ ಕೊಡವ ಸಮಾಜಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. ಈ ಕಿಡಿಗೇಡಿ ಕೃತ್ಯದ ವಿರುದ್ಧ ಕೊಡವ ಸಮಾಜಗಳು ಹಾಗೂ ವಿವಿಧ ಸಂಘಟನೆಗಳು ದೂರು ನೀಡಿದ್ದರೂ ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದರ ವಿರುದ್ಧ ಕೊಡವ ಸಮಾಜಗಳ ಒಕ್ಕೂಟ, ಅಖಿಲ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಂಘಟನೆಗಳ ಸಹಭಾಗಿತ್ವದಲ್ಲಿ ಜು.22ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಮಡಿ ಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಈ ಕುರಿತು ತುರ್ತು ಪೂರ್ವಭಾವಿ ಸಭೆ ನಡೆಸಿ ಪ್ರತಿಭಟನೆ ನಡೆಸಲು ತೀರ್ಮಾನಿ ಸಲಾಯಿತು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆ ಕರೆದು ಹೋರಾಟದ ರೂಪು ರೇಷೆಗಳನ್ನು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಡಿಕೇರಿ ನಗರಸಭೆಯ ಅಧ್ಯಕ್ಷ ನೆರವಂಡ ಅನಿತಾ ಪೂವಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಸೇರಿದಂತೆ ವಿವಿಧ ಕೊಡವ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Translate »