ನೀರಿನ ಬಾಕಿ ಪಾವತಿಸುವವರಿಗೆ ಆರು ತಿಂಗಳು `ಬಡ್ಡಿ ನಿಶ್ಚಲತೆ’
ಮೈಸೂರು

ನೀರಿನ ಬಾಕಿ ಪಾವತಿಸುವವರಿಗೆ ಆರು ತಿಂಗಳು `ಬಡ್ಡಿ ನಿಶ್ಚಲತೆ’

July 13, 2022

ಮೈಸೂರು,ಜು.12(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 74 ಕೋಟಿ ಬಡ್ಡಿಯೂ ಸೇರಿದಂತೆ 220 ಕೋಟಿ ರೂ. ನೀರಿನ ಶುಲ್ಕ ಬಾಕಿ ಯಿದ್ದು, ಸದ್ಯಕ್ಕೆ ಪಾಲಿಕೆ ಆದಾಯ ವೃದ್ಧಿಸು ವುದು ಹಾಗೂ ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಜು.15ರಿಂದ 6 ತಿಂಗಳು `ಬಡ್ಡಿ ನಿಶ್ಚಲತೆ ಯೋಜನೆ’ (ಹಾಲಿ ಬಡ್ಡಿ ಕಾಯ್ದುಕೊಳ್ಳುವುದು) ಸದವಕಾಶ ಕಲ್ಪಿಸಲಾಗುತ್ತಿದೆ ಎಂದು ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್(ಹಳೆ ಕೌನ್ಸಿಲ್) ಸಭಾಂಗ ಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ 1.80 ಲಕ್ಷ ಮನೆಗಳಿಗೆ ಕೊಳಾಯಿ ಕುಡಿಯುವ ನೀರಿನ ಸಂಪರ್ಕವಿದೆ. ಅದರಲ್ಲಿ ಅನಧಿಕೃತ ಹಾಗೂ ದೋಷಪೂರಿತ ಮೀಟರ್ ಹೊಂದಿ ರುವ 52 ಸಾವಿರ ಸಂಪರ್ಕ ಪತ್ತೆಯಾಗಿದೆ. ಇಂತಹ ಗ್ರಾಹಕರು ಹಲವು ವರ್ಷಗಳಿಂದ ಪಾಲಿಕೆ ನೀರಿನ ಶುಲ್ಕ ಪಾವತಿಸಿಲ್ಲ. ಹಾಗಾಗಿ 146 ಕೋಟಿ ರೂ. ಅಸಲು ಹಾಗೂ 74 ಕೋಟಿ ರೂ. ಬಡ್ಡಿ ಸೇರಿ 220 ಕೋಟಿ ಬಾಕಿ ಇದೆ. ಬಾಕಿಯಿರುವ 146 ಕೋಟಿ ರೂ.ನಲ್ಲಿ 108 ಕೋಟಿ ಗೃಹಬಳಕೆಯ ಗ್ರಾಹಕರು, ಉಳಿದ ಪಾಲು ವಾಣಿಜ್ಯ ಗ್ರಾಹಕ ರದ್ದು. 74 ಕೋಟಿ ಬಡ್ಡಿ ಹಣದಲ್ಲಿ 50 ಕೋಟಿ ಗೃಹಬಳಕೆಯ ಗ್ರಾಹಕರು, ಉಳಿದ ಮೊತ್ತ ವಾಣಿಜ್ಯ ಬಳಕೆಯ ಗ್ರಾಹಕರು. ಈಗಾಗಲೇ ಕೌನ್ಸಿಲ್ ಸಭೆ ಒಪ್ಪಿಗೆ ಪಡೆದು ಬಡ್ಡಿ ಮನ್ನಾ ಮಾಡು ವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸರ್ಕಾರದಿಂದ ಇನ್ನು ಯಾವುದೇ ನಿರ್ಧಾರ ವಾಗಿಲ್ಲ ಎಂದರು. ನೀರಿನ ಶುಲ್ಕ ಬಾಕಿ ಉಳಿಸಿ ಕೊಂಡಿರುವ ಗ್ರಾಹಕರಿಗೆ ಪಾಲಿಕೆ ಮತ್ತೊಂದು ಸದವಕಾಶ ಕಲ್ಪಿಸುತ್ತಿದೆ. ಅದೇ `ಬಡ್ಡಿ ನಿಶ್ಚಲತೆ ಯೋಜನೆ’. ಇದು ಜು.15ರಿಂದ ಮುಂದಿನ ಆರು ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ. ಅದರ ಸದುಪಯೋಗವನ್ನು ಗ್ರಾಹಕರು ಬಳಸಿಕೊಳ್ಳಬೇಕು ಎಂದು ಕೋರಿದರು. ನಗರಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಹಿತದೃಷ್ಟಿಯಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಬಳಕೆದಾರರು ಒಂದೇ ಬಾರಿ ಅಸಲು ಮೊತ್ತವನ್ನು ಸಂಪೂರ್ಣ ಪಾವತಿಸಿದಲ್ಲಿ ಅಂತಹ ಬಳಕೆದಾರರ ಬಡ್ಡಿಯನ್ನು ನಿಶ್ಚಲಗೊಳಿಸಲಾಗುವುದು. ಒಂದು ವೇಳೆ ಗ್ರಾಹಕರು ಪಾಲಿಕೆಗೆ ಬಾಕಿ ಇರುವ ಅಸಲು ವÉೂತ್ತವನ್ನು ಪಾವತಿಸದಿದ್ದರೆ ಬಡ್ಡಿ ಬೆಳೆಯುತ್ತಲೇ ಇರುತ್ತದೆ. ಈ ಯೋಜನೆ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದರು.

ನೀರಿನ ಶುಲ್ಕವನ್ನು ಪಾಲಿಕೆಯ ವಲಯ ಕಚೇರಿಯ ನಗದು ಕೇಂದ್ರಗಳಲ್ಲಿ ಪಾವತಿಸಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರೆವಿನ್ಯೂ ಮ್ಯಾನೇಜ್ಮೆಂಟ್ ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಬಳಕೆದಾರರು ನೀರಿನ ಶುಲ್ಕವನ್ನು ಪಾಲಿಕೆಯ ಸಿಬ್ಬಂದಿಗೆ ಮನೆ ಬಾಗಿಲಲ್ಲೇ ಪಾವತಿಸಿ ಪ್ರಿಂಟೆಡ್ ರಶೀದಿ ಪಡೆಯುವಂತೆ ಸಲಹೆ ನೀಡಿದರು.

ಇದೇ ವೇಳೆ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24 ಸಾವಿರ ಮಂದಿ ನಿಯಮಬಾಹಿರವಾಗಿ ಕುಡಿಯುವ ನೀರಿನ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, 26 ಸಾವಿರ ನೀರಿನ ಸಂಪರ್ಕದÀ ಮೀಟರ್‍ಗಳು ಕೆಟ್ಟು ಹೋಗಿವೆ. ದೋಷಪೂರಿತ ಮೀಟರ್ ಹೊಂದಿರುವವರಿಗೆ ನೋಟಿಸ್ ನೀಡಲಾಗಿದ್ದರೂ ದುರಸ್ತಿ ಮಾಡಿಸಿಕೊಂಡಿಲ್ಲ. ಇಂತಹವರಿಗೆ ಮೂರು ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಬಿಲ್ ಬಾಕಿ ಉಳಿಸಿಕೊಂಡಿರುವವರ, ಅನಧಿಕೃತ ಸಂಪರ್ಕ ಪಡೆದಿರುವವರ ಮನೆಯ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು 2 ಸಾವಿರ ಮಂದಿ ಹೊಸದಾಗಿ ನೀರಿನ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ 7500 ಮನೆಗಳಿಗೆ ಹೊಸದಾಗಿ ನೀರಿನ ಸಂಪರ್ಕ ನೀಡಲಾಗಿದೆ ಎಂದರು.

ಈಗಾಗಲೇ ಪಾಲಿಕೆಯಿಂದ ನಗರದ 65 ವಾರ್ಡ್‍ಗಳಲ್ಲೂ ತಿಂಗಳಿಗೆ 2 ಸಾವಿರ ದಂತೆ ಈವರೆಗೆ 34 ಸಾವಿರ ಹೊಸ ಮೀಟರ್ ಅಳವಡಿಸಲಾಗಿದೆ. ಪಾಲಿಕೆಯಿಂದ ಇಂತಹz್ದÉ ಮೀಟರ್ ಹಾಕುವಂತೆ ನಿರ್ದೇಶನ ನೀಡುವುದಿಲ್ಲ. ಗ್ರಾಹಕರು ಐಎಸ್‍ಐ ಮಾರ್ಕ್ ಇರುವ ಮೀಟರ್‍ಗಳನ್ನು ಖರೀದಿಸಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೂಪರಿಟೆಂಡೆಂಟ್ ಇಂಜಿನಿಯರ್ ಮಹೇಶ್, ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಇಇ ಸುವರ್ಣ ಇದ್ದರು.

Translate »