ಗುತ್ತಿಗೆದಾರ ಆತ್ಮಹತ್ಯೆ
News

ಗುತ್ತಿಗೆದಾರ ಆತ್ಮಹತ್ಯೆ

April 13, 2022

ಬೆಂಗಳೂರು, ಏ.12 (ಕೆಎಂಶಿ)- ಆಡಳಿತ ನಡೆಸುವವರ ಕಮಿಷನ್ ದಾಹಕ್ಕೆ ಗುತ್ತಿಗೆದಾರ ಬಲಿಯಾಗಿದ್ದಾನೆ.
ಪಂಚಾಯತ್‍ರಾಜ್ ಇಲಾಖೆಯಲ್ಲಿ ತಾನು ಮಾಡಿದ ಕಾಮಗಾರಿಗೆ ಶೇ.40ರಷ್ಟು ಕಮಿ ಷನ್ ನೀಡಲು ಸಾಧ್ಯವಾಗದೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮಾಧ್ಯಮಗಳಿಗೆ ಸಂದೇಶ ರವಾನೆ ಮಾಡಿ, ನನ್ನ ಸಾವಿಗೆ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ನೇರ ಹೊಣೆ ಎಂದು ದೂರಿದ್ದಾನೆ.

ರಾಜ್ಯದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೆ ಆಡಳಿತ ನಡೆಸುವವರಿಗೆ ಶೇ.40ರಷ್ಟು ಕಮಿಷನ್ ನೀಡಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿರುವ ‘ಬಿಜೆಪಿ ಸರ್ಕಾರ ಕಮಿಷನ್ ಸರ್ಕಾರ’ ಎಂದು ಆರೋ ಪಿಸಿ, ಇಡೀ ರಾಷ್ಟ್ರದಲ್ಲಿ ವಿವಾದಕ್ಕೆ ಎಡೆಮಾಡಿ ದ್ದರು. ಕಳೆದ 6 ತಿಂಗಳಿ ನಿಂದ ಕಮಿಷನ್ ವಿಚಾರ ಚರ್ಚೆಯಲ್ಲಿರುವಾಗಲೇ ಗುತ್ತಿಗೆದಾರನ್ನೊಬ್ಬ ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದರ ಆರೋಪ ಕೆ.ಎಸ್.ಈಶ್ವರಪ್ಪ ಅವರ ಕೊರಳಿಗೆ ಸುತ್ತಿಕೊಂಡಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಈಶ್ವರಪ್ಪ ವಿರುದ್ಧ ಶೇ.40 ಕಮಿಷನ್ ಕೇಳಿದ ಬಗ್ಗೆ ದೂರು ನೀಡಿದ್ದರು. ಸಚಿವರಾಗಿರುವುದರಿಂದ ಅವರ ವಿರುದ್ಧ ಮೊಕದ್ದಮೆ ದಾಖಲು ಸಂಬಂಧ ಪೆÇಲೀಸ್ ಮಹಾನಿರ್ದೇಶಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅನುಮತಿ ಕೋರಿದ್ದಾರೆ. ಪ್ರವಾಸದಲ್ಲಿರುವ ಮುಖ್ಯಮಂತ್ರಿಯವರು ಇದುವರೆಗೂ ಯಾವುದೇ ನಿರ್ದೇಶನ ನೀಡಿಲ್ಲ. ಸಂತೋಷ್ ಪಾಟೀಲ್, ವಿಧಾನ ಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲೇ ಈಶ್ವರಪ್ಪ ವಿರುದ್ಧ ಕಮಿಷನ್ ಕೇಳಿದ ಆರೋಪ ಹೊರಿಸಿದ್ದರು.

ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿ ದ್ದಲ್ಲದೆ, ಆರೋಪಿತನ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಂತೋಷ್ ಪಾಟೀಲ್ ಬೆಳಗಾವಿ ಯಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಪಂಚಾಯತ್‍ರಾಜ್ ಇಲಾಖೆಗೆ ಸಂಬಂಧಿಸಿದಂತೆ ಕಾಮಗಾರಿಯನ್ನು ಕೈಗೊಂಡಿದ್ದರು. ಸಂತೋಷ್ ಪಾಟೀಲ್ ಯಾವುದೇ ಕಾಮಗಾರಿಯು ಮಾಡಿಲ್ಲ. ಆತನಿಗೆ ಕಾಮಗಾರಿ ನಡೆಸುವಂತೆ ಸರ್ಕಾರ ಮಂಜೂರಾತಿಯು ನೀಡಿಲ್ಲ. ಕಾಮಗಾರಿಗೆ ಕಾರ್ಯಾದೇಶ ಅಥವಾ ಯಾವುದೇ ಪ್ರಕ್ರಿಯೆಯು ನಡೆದಿರುವುದಿಲ್ಲ. ಹೀಗಿರುವಾಗ ಕಮಿಷನ್ ಕೇಳಿದ್ದಾರೆ ಎಂಬುದು ಎಷ್ಟು ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ರಾಜಕೀಯವಾಗಿ ತಮ್ಮನ್ನು ಮುಗಿಸಲು ಸಂಚು ನಡೆದಿದೆ. ಇಲಾಖೆಯಲ್ಲಿ ಅನು ಮತಿಯೇ ನೀಡದೇ, ನಾನು ಹೇಗೆ ಗುತ್ತಿಗೆದಾರನಿಂದ ಪರ್ಸೆಂಟೇಜ್ ಕೇಳಲಿ ಎಂದು ಪ್ರಶ್ನಿಸಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸಚಿವರ ವಿರುದ್ಧ ಗಂಭೀರವಾಗಿ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪೆÇಲೀಸರು ಮೊದಲು ಎಫ್‍ಐಆರ್ ದಾಖಲಿಸಿ, ಆನಂತರ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಮತ್ತು ಇಬ್ಬರು ಹಿರಿಯ ಪೆÇಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿ, ಸಾವನ್ನಪ್ಪಿದ್ದರು.
ಅಂದು ಬಿಜೆಪಿ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಹಗಲು ರಾತ್ರಿ ಹೋರಾಟ ನಡೆಸಿ, ಜಾರ್ಜ್ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬೊಮ್ಮಾಯಿ ಸರ್ಕಾರ ಇಂತಹದ್ದೇ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಇದೀಗ ಪ್ರತಿಪಕ್ಷ ಕಾಂಗ್ರೆಸ್ ಬಾಯಿ ಮುಚ್ಚಿ ಸಲು ಈಶ್ವರಪ್ಪ ರಾಜೀನಾಮೆ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕು.

ಸಾವಿಗೂ ಮುನ್ನ ಪಾಟೀಲ್ ಮಾಧ್ಯಮಗಳಿಗೆ ರವಾನಿಸಿರುವ ಸಂದೇಶ ಹೀಗಿದೆ: “ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪನವರು. ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ.” ಹೀಗೆಂದು ಸಂತೋಷ್ ಪಾಟೀಲ್ ತನ್ನ ಸಾವಿಗೂ ಮುನ್ನ ಮರಣ ಸಂದೇಶವನ್ನು ಮೊಬೈಲ್ ಮೂಲಕ ಕಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಶ್ವರಪ್ಪ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್, ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂತೊಷ್ ಪಾಟೀಲ್ ಆತ್ಮಹತ್ಯೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದು, ತನ್ನ ಸಾವಿಗೂ ಮುನ್ನ ಮರಣ ಸಂದೇಶವನ್ನು ಮೊಬೈಲ್ ಮೂಲಕ ಕಳಿಸಿ ಆತ್ಮಹತ್ಯೆಗೆ ಶರಣಾಗಿರೋದು ಅಚ್ಚರಿ ಮೂಡಿಸಿದೆ.

ಮುಖ್ಯಮಂತ್ರಿಯವರು ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವಾಗಲೇ ಅಲ್ಲಿನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಹೋಟೆಲ್‍ನ ರೂಮ್‍ವೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ತನ್ನ ಸಾವಿಗೂ ಮುನ್ನ ಕೆಲವು ಮಾಧ್ಯಮ ಮಿತ್ರರಿಗೆ ವಾಟ್ಸಾಪ್ ಮೂಲಕ ಮರಣ ಸಂದೇಶವನ್ನು ಕಳಿಸಿ ತನ್ನ ಪ್ರಾಣಕ್ಕೆ ಸಂಚಕಾರ ತರಲು ನಿರ್ಧರಿಸಿದ್ದಾರೆ.

Translate »