ಸಾಂಸ್ಕøತಿಕ ನಗರಿ ಮೈಸೂರಲ್ಲಿ ಮಳೆ ಸಿಂಚನ
ಮೈಸೂರು

ಸಾಂಸ್ಕøತಿಕ ನಗರಿ ಮೈಸೂರಲ್ಲಿ ಮಳೆ ಸಿಂಚನ

April 14, 2022

ಮೈಸೂರು, ಏ.13(ಆರ್‍ಕೆ)-ಮೈಸೂರಲ್ಲಿ ಇಂದು ಸಂಜೆ ಮಳೆ ಸಿಂಚನವಾಯಿತು. ಮಧ್ಯಾಹ್ನದ ನಂತರ ಮೋಡ ಮುಸು ಕಿದ ವಾತಾವರಣ ನಿರ್ಮಾಣವಾಗಿ ಸಂಜೆ ವೇಳೆಗೆ ಮಳೆ ಆರಂಭವಾಯಿತು. ಇದರಿಂದ ಅಗ್ರಹಾರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ವಿವಿ. ಮೊಹಲ್ಲಾ, ಬನ್ನಿಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಸಾಧಾರಣ ಮಳೆ ಸುರಿಯಿತು.

ಸಂಜೆಯಾಗಿದ್ದರಿಂದ ಕಚೇರಿಯಿಂದ ಮನೆಗೆ ಹಿಂತಿರುಗುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮನೆಗೆ ಸೇರಲು ಹೆಣಗಾಡಬೇಕಾಯಿತು. ರಸ್ತೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತಲ್ಲದೆ, ದೇವರಾಜ, ಮಂಡಿ ಮಾರುಕಟ್ಟೆ, ಎಪಿಎಂಸಿಗಳಲ್ಲಿ ವ್ಯಾಪಾರಕ್ಕೆ ಕೆಲಕಾಲ ತೊಡಕಾಯಿತು.

ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮಳೆಯಿಂದಾಗಿ ಪರದಾಡುತ್ತಿದ್ದರು. ರಾತ್ರಿವರೆಗೂ ತುಂತುರು ಮಳೆ ಸುರಿಯುತ್ತಿದ್ದ ಕಾರಣ, ಸಂಜೆಯ ಬೀದಿಬದಿ ವ್ಯಾಪಾರ, ಚಾಟ್ಸ್ ಸೆಂಟರ್, ಪಾನಿಪುರಿ, ಗೋಬಿ ಅಂಗಡಿಗಳ ವ್ಯಾಪಾರಕ್ಕೂ ಅಡ್ಡಿಯುಂಟಾಯಿತು. ಆದರೆ ಮಿಂಚು, ಸಿಡಿಲುಗಳಂತಹ ಆರ್ಭಟವಿಲ್ಲದಿದ್ದರೂ ಭಾರೀ ಗಾಳಿಯಿಂದ ಮೇಟಗಳ್ಳಿ ಮಥುರಾನಗರದ ಪಾಸ್‍ಪೋರ್ಟ್ ಸೇವಾ ಕೇಂದ್ರದ ಬಳಿಯ 1-ಎ ಮುಖ್ಯ ರಸ್ತೆಯಲ್ಲಿ ತೆಂಗಿನಮರ ಬುಡಸಹಿತ ಉರುಳಿ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.

Translate »