ಮೈಸೂರಿನ ವಿಜಯನಗರ 3ನೇ ಹಂತದಲ್ಲಿ  18 ಕೋಟಿ ರೂ. ವೆಚ್ಚದ ಸುಸಜ್ಜಿತ ಬಂಟ್ಸ್ ಕನ್ವೆನ್ಷನ್ ಹಾಲ್
ಮೈಸೂರು

ಮೈಸೂರಿನ ವಿಜಯನಗರ 3ನೇ ಹಂತದಲ್ಲಿ  18 ಕೋಟಿ ರೂ. ವೆಚ್ಚದ ಸುಸಜ್ಜಿತ ಬಂಟ್ಸ್ ಕನ್ವೆನ್ಷನ್ ಹಾಲ್

November 3, 2018

ಮೈಸೂರು:  ಮೈಸೂರಿನ ವಿಜಯನಗರ 3ನೇ ಹಂತದ ಸಿಎ 1, ಎ ಬ್ಲಾಕ್‍ನಲ್ಲಿ ಬಂಟರ ಸಂಘದಿಂದ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆ ನ್ಷನ್ ಹಾಲ್ ಅನ್ನು ನ.3ರಂದು ಬೆಳಿಗ್ಗೆ 9.30 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಧರ್ಮಸ್ಥಳ ಧರ್ಮಾ ಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ.

ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ ಶೆಟ್ಟಿ ಅವರು ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ದರು. ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅಧ್ಯ ಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಎಂಆರ್‍ಜಿ ಸಮೂಹ ಸಂಸ್ಥೆಯ ಛೇರ್‍ಮನ್ ಕೆ.ಪ್ರಕಾಶ್‍ಶೆಟ್ಟಿ ಇನ್ನಿತರರು ಭಾಗವಹಿಸಲಿದ್ದಾರೆ.

ಉದ್ಘಾಟನೆ ಬಳಿಕ, ಮಧ್ಯಾಹ್ನ 2.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸಿ. ಪುಟ್ಟರಂಗ ಶೆಟ್ಟಿ, ಸಂಸದರಾದ ಪ್ರತಾಪ್ ಸಿಂಹ, ಆರ್. ಧ್ರುವನಾರಾಯಣ್, ಶಾಸಕ ಎಲ್.ನಾಗೇಂದ್ರ, ಲೈಫ್‍ಲೈನ್ ಫೀಡ್ಸ್ ಅಧ್ಯಕ್ಷ ಕಿಶೋರ್ ಕುಮಾರ್ ಹೆಗ್ಡೆ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ, ಎಫ್‍ಕೆಸಿ ಸಿಐ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಅಬುದಾ ಬಿಯ ಯುಎಇ ಎಕ್ಸ್ ಚೇಂಜ್‍ನ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಸುಧೀರ್‍ಕುಮಾರ್ ಶೆಟ್ಟಿ ಇನ್ನಿತರರು ಭಾಗವಹಿಸುವರು ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಸಿಎ ನಿವೇಶನದಲ್ಲಿ ಪಾರಂಪರಿಕ ಶೈಲಿಯಲ್ಲಿ ಭವನ ನಿರ್ಮಿಸಲಾಗಿದ್ದು, ವರಸಿದ್ದಿ ವಿನಾಯಕ ಮಂದಿರ, ಸುಂದರ ಕೆತ್ತನೆಯ ಸಿಂಹದ್ವಾರ, 950 ಆಸನ ಸಾಮ ಥ್ರ್ಯದ ಮಲ್ಟಿಪರ್ಪಸ್ ಸಭಾಂಗಣ, ರಂಗ ಮಂಟಪ, ವಧು-ವರರ ಪ್ರತ್ಯೇಕ ಕೊಠಡಿ, ಸುಸಜ್ಜಿತ ಹವಾನಿಯಂತ್ರಿತ ಕೊಠಡಿ, 1ನೇ ಮಹಡಿಯಲ್ಲಿ ಅತಿಥಿಗಳಿಗೆ 15 ಹವಾ ನಿಯಂತ್ರಿತ ಕೊಠಡಿಗಳು, ಒಂದೇ ಬಾರಿಗೆ 1200 ಮಂದಿ ಕುಳಿತುಕೊಳ್ಳಬಹುದಾದ ಭೋಜನ ಶಾಲೆ, ಅತ್ಯಾಧುನಿಕ ಸೌಲಭ್ಯ ಗಳನ್ನು ಹೊಂದಿರುವ ಪಾಕಶಾಲೆ, ಅಲ್ಲದೆ 700 ಜನರ ಆಸನ ಸಾಮಥ್ರ್ಯದ ಆಕರ್ಷಕ ಹುಲ್ಲುಹಾಸಿನ ಬಯಲು ರಂಗ ಮಂದಿರ, 538 ಚದರಡಿ ವಿಸ್ತಾರದ ಭೂಮಿಕಾ ರಂಗಮಂಟಪ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಯನ್ನು ಒಳಗೊಂಡಿದೆ. ಎಲ್ಲಾ ಸಮು ದಾಯದ ಸಸ್ಯಾಹಾರಿಗಳಿಗೆ ಈ ಭವನ ಲಭ್ಯವಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘ ಚಾರಿಟಬಲ್ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಗಣೇಶ್ ನಾರಾಯಣ ಹೆಗಡೆ, ಪದಾಧಿ ಕಾರಿಗಳಾದ ಎಂ.ನಂದ್ಯಪ್ಪಶೆಟ್ಟಿ, ಸಿ.ಪಿ. ಸುರೇಶ್ ಆಳ್ವ, ಸರ್ವೋತ್ತಮ ಶೆಟ್ಟಿ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

Translate »