ತ್ರಿಚಕ್ರ ವಾಹನದಲ್ಲಿ ಕನ್ನಡದ ಅಂಬಾರಿ
ಮೈಸೂರು

ತ್ರಿಚಕ್ರ ವಾಹನದಲ್ಲಿ ಕನ್ನಡದ ಅಂಬಾರಿ

November 3, 2018

ಮೈಸೂರು: ಮೈಸೂರು ಜಿಲ್ಲಾಡಳಿತ ಗುರುವಾರ ಮೈಸೂ ರಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋ ತ್ಸವದ ಮೆರವಣಿಗೆಯಲ್ಲಿ ಮೈಸೂರಿನ ಬೆಮೆಲ್ ಉದ್ಯೋಗಿ, ವಿಕಲಚೇತನ ರಮೇಶ್ ಶೆಟ್ಟಿ ಎಂಬುವರು ತಮ್ಮ ತ್ರಿಚಕ್ರ ವಾಹನ ವನ್ನು ಕರುನಾಡ ಅಂಬಾರಿಯಾಗಿ ಮಾರ್ಪ ಡಿಸಿ ಸಂಭ್ರಮಿಸಿದರು. ಕರುನಾಡ ಅಂಬಾರಿ ಯಲ್ಲಿ ಭುವನೇಶ್ವರಿ ಭಾವಚಿತ್ರ, ವಾಹನದ ಹೊರಭಾಗದ ಸುತ್ತಲೂ ಕನ್ನಡಕ್ಕಾಗಿ ಹೋರಾ ಡಿದವರು, ಜ್ಞಾನಪೀಠ ಪ್ರಶಸ್ತಿ ಪುರ ಸ್ಕøತರು, ಮೈಸೂರು ರಾಜ ಮಹಾರಾಜರ ಭಾವಚಿತ್ರಗಳನ್ನು ಹಾಕಿದ್ದರು. ಕಳೆದ 11 ವರ್ಷದಿಂದಲೂ ಅವರು ಕನ್ನಡ ರಾಜ್ಯೋ ತ್ಸವ ಸಂದರ್ಭದಲ್ಲಿ ಭಾಗವಹಿಸಿ ಅಭಿ ಮಾನ ಮೆರೆಯುತ್ತಾ ಬಂದಿದ್ದಾರೆ.

Translate »