ಡಾ.ಅಂಬೇಡ್ಕರ್ ಪುತ್ಥಳಿ ಭಗ್ನ: ಹಸುವಟ್ಟಿ ಗ್ರಾಮಸ್ಥರ ಪ್ರತಿಭಟನೆ
ಮೈಸೂರು

ಡಾ.ಅಂಬೇಡ್ಕರ್ ಪುತ್ಥಳಿ ಭಗ್ನ: ಹಸುವಟ್ಟಿ ಗ್ರಾಮಸ್ಥರ ಪ್ರತಿಭಟನೆ

November 3, 2018

ತಿ.ನರಸೀಪುರ: ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆತಡೆ ನಡೆಸಿದರು.

ತಾಲೂಕಿನ ಸೋಸಲೆ ಹೋಬಳಿಯ ಹಸುವಟ್ಟಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಪುತ್ಥಳಿಯನ್ನು ಕಳೆದ ಗುರು ವಾರ ರಾತ್ರಿ ಕಿಡಿಗೇಡಿಗಳು ಭಗ್ನಗೊಳಿಸಿರುವ ಕೃತ್ಯ ಬೆಳಿಗ್ಗೆ ಬೆಳಕಿಗೆ ಬರುತ್ತಿದ್ದಂತೆ ತಿ. ನರಸೀಪುರ ಪೂರೀಗಾಲಿ ಮುಖ್ಯ ರಸ್ತೆ ಯಲ್ಲಿ ಜಮಾವಣೆಗೊಂಡ ದಸಂಸ ಮುಖಂಡರು ಹಾಗೂ ಗ್ರಾಮಸ್ಥರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ, ರಸ್ತೆತಡೆ ಆರಂಭಿಸಿದರು.

ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಮಲ್ಲಿಕ ಅವರ ಮನವೊಲಿಕೆಗೆ ಒಪ್ಪದ ಪ್ರತಿಭಟನಾನಿರತರು ಪೊಲೀಸ್ ಉನ್ನತ ಅಧಿಕಾರಿಗಳು, ತಹಶೀಲ್ದಾರ್, ಸಮಾಜ ಕಲ್ಯಾಣಾಧಿಕಾರಿಗಳು ಆಗಮಿಸಿ ತನಿS ಆರಂಭಿಸುವಂತೆ ಪಟ್ಟು ಹಿಡಿದರು.

ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಪೊಲೀಸರು ರಾತ್ರಿಯ ಗಸ್ತನ್ನು ಸಮರ್ಪಕವಾಗಿ ಮಾಡ ದ್ದರಿಂದ ಕೋಮು ಸಾಮರಸ್ಯವನ್ನು ಕದಡಲು ಪುತ್ಥಳಿ ಭಗ್ನಗೊಳಿಸುವ ಕೃತ್ಯಗಳು ನಡೆ ಯಲು ಕಾರಣವಾಗಿದೆ. ದಲಿತ ಸಮು ದಾಯವೇ ಇರುವಂತಹ ಹಸುವಟ್ಟಿ ಗ್ರಾಮ ದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಭಗ್ನ ಗೊಳಿಸುವ ಕೃತ್ಯಕ್ಕೆ ಕೈ ಹಾಕಿರುವ ಆರೋಪಿ ಗಳನ್ನು ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸ ಬೇಕು ಎಂದು ಒತ್ತಾಯಿಸಿದರು. ಎಎಸ್ಪಿ ಸ್ನೇಹ, ತಹಶೀಲ್ದಾರ್ ಹೆಚ್.ಎಸ್. ಪರಮೇಶ್ ಹಾಗೂ ಸಮಾಜ ಕಲ್ಯಾಣಾಧಿಕಾರಿ ಎಸ್.ದಿವಾಕರ್ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಭಟನೆಯಲ್ಲಿ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಾದ ಆಲಗೂಡು ಎಸ್.ಚಂದ್ರಶೇಖರ, ಬನ್ನಹಳ್ಳಿ ಸೋಮಣ್ಣ, ತಾಲೂಕು ಸಂಘಟನಾ ಸಂಚಾಲಕರಾದ ಯರಗನಹಳ್ಳಿ ಸುರೇಶ, ಹೊಸಕೋಟೆ ಕುಮಾರ, ಬನ್ನಹಳ್ಳಿ ದೊರೆ ಸ್ವಾಮಿ, ಮುಖಂಡರಾದ ಮರಿಸ್ವಾಮಿ, ಮನೋಜ್ ಕುಮಾರ್, ಸೋಸಲೆ ರಾಜಣ್ಣ, ಪರಶಿವ ಸೇರಿದಂತೆ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

Translate »