ಕನ್ನಡ ರಾಜ್ಯೋತ್ಸವದಂದು ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ
ಮೈಸೂರು

ಕನ್ನಡ ರಾಜ್ಯೋತ್ಸವದಂದು ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ

November 3, 2018

ನಂಜನಗೂಡು: ನಗರದ ಸಮೀಪ ವಿರುವ ವಿದ್ಯಾನಗರ ಬಡಾವಣೆಯ ನಿವಾಸಿ ಗಳು ಒಗ್ಗಟ್ಟಾಗಿ ಸೇರಿ ಕನ್ನಡ ರಾಜ್ಯೋತ್ಸವ ದಂದು ಬಡಾವಣೆಯ ಅಭಿವೃದ್ಧಿ ಸಮಸ್ಯೆಗೆ ಸಹಕರಿಸುವ ನಿಟ್ಟಿನಲ್ಲಿ ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ ಬಂದಿದೆ.
ಇದೇ ಸಂದರ್ಭದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಜಿಪಂ ಸದಸ್ಯೆ ಮಧು ಸುಬ್ಬಣ್ಣ ಉದ್ಘಾಟಿಸಿ ಮಾತನಾಡಿ, ಬಡಾ ವಣೆಯವರು ಸಂಘಟಿತರಾಗಿ ಸೇರಿಕೊಂಡಿ ರುವುದು ಉತ್ತಮ ಬೆಳವಣಿಗೆ, ಸ್ಥಳೀಯ ಶಾಸಕರ ಗಮನ ಸೆಳೆದು ಬಡಾವಣೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ದೇವಿರಮ್ಮನಹಳ್ಳಿ ಗ್ರಾಪಂ ಪಿಡಿಓ ಶ್ರೀಧರ್ ಮಾತನಾಡಿ, ಬಡಾವಣೆಯ ಮೂಲ ಸೌಕರ್ಯದ ಬಗ್ಗೆ ಸಮಸ್ಯೆಯನ್ನು ಆಲಿಸಿದ್ದೇವೆ. ಗ್ರಾಪಂ ಸಭೆಯಲ್ಲಿ ಚರ್ಚಿಸಿ ಬಗೆ ಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಬಡಾವಣೆಯ ನಿವಾಸಿ ಆಶಾ ಕೆ.ದಾಸ್ ಮಾತನಾಡಿ, ವಿವಿಧ ಸಮಸ್ಯೆಗಳು ಬಗ್ಗೆ ಹರಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಕರವೇ ಅಧ್ಯಕ್ಷ ಪ್ರವೀಣ್ ಮಾತ ನಾಡಿದರು. ಸಭೆಯಲ್ಲಿ ತಾಲೂಕು ಕರವೇ ಅಧ್ಯಕ್ಷೆ ಸುಧಾ ಶಿವಕುಮಾರ್, ಗ್ರಾಪಂ ಸದಸ್ಯ ಮಹದೇವು, ಗುರು ಮಲ್ಲೇಶ್ವರ ಮಹಿಳಾ ಸೌರ್ಹಾದತ ಸೊಸೈಟಿ ಉಪಾಧ್ಯಕ್ಷೆ ಕೋಮಲಾ, ಅಧÀ್ಯಕ್ಷೆ ನಂದಿನಿ ಉಪಸ್ಥಿತರಿದ್ದರು.

Translate »