`ಗೋದ್ರಾ’ ತಂಡದಿಂದ ಕೊರೊನಾ ಅರಿವು
ಸಿನಿಮಾ

`ಗೋದ್ರಾ’ ತಂಡದಿಂದ ಕೊರೊನಾ ಅರಿವು

April 3, 2020

ಜಗತ್ತನ್ನೇ ತಲ್ಲಣಕ್ಕೀಡು ಮಾಡಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು  ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೂ ವೈರಸ್ ಹರಡುವುದನ್ನು ತಡೆಗಟ್ಟಲು ಹರ ಸಾಹಸ ಪಡುವಂತಾಗಿದೆ. ಅದಕ್ಕೆ ಕಾರಣ, ಜನರಿಂದ ಸಿಗುತ್ತಿರುವ ಅಸಹಕಾರ.

ಗೋದ್ರಾ ಚಿತ್ರತಂಡ ಕೊರೊನಾ ವೈರಾಣು ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ವೈರಾಣು ಬಗ್ಗೆ ಮಾಹಿತಿ ಸರ್ಕಾರದಿಂದ ಸಿಕ್ಕರೆ ಅದನ್ನು ತಮ್ಮ ಸೋಷಿಯಲ್ ತಾಣಗಳಲ್ಲಿ ಹಂಚಿ ಕೊಳ್ಳಲು ಅನುಕೂಲ ಆಗುತ್ತವೆ. ಟಾಪ್ ಸಿಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ದಿನವೂ ಸರ್ಕಾರ ಅವರಿಂದ ಜಾಗೃತಿ ಕೆಲಸ ಮಾಡಲು ಗೋದ್ರಾ ಸಿನಿಮಾ ಟೀಮ್ ವಿನಂತಿ ಮಾಡುತ್ತಿದೆ.

ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿ, ಪೆÇಲೀಸ್, ಪೌರ ಕಾರ್ಮಿಕರು, ವೈದ್ಯರು, ನರ್ಸ್ ಹೀಗೆ ಕೊರೋನ್ ತಡೆಗಟ್ಟುವಲ್ಲಿ ಶ್ರಮಿಸು ತ್ತಿರುವ ಎಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ತಂಡ ಹೇಳಿದೆ.

ವಿದೇಶದಿಂದ ಬರುವ ಮಂದಿ ತಪಾಸಣೆಗೆ ಒಳಗಾಗದೇ ಇರುವ ಉದಾಹರಣೆಗಳು ಸೋಂಕು ಹೆಚ್ಚಾಗಲು ಕಾರಣವಾಗಿದೆ. ತಪಾಸಣೆಗೆ ಒಳಪಟ್ಟರೆ, ತಮ್ಮಲ್ಲಿ ಕೊರೋನಾ ವೈರಸ್ ಇದೆ ಎಂದು ಸಾಬೀತಾದರೆ, ಚಿಕಿತ್ಸೆ ಕುರಿತು ಜಾಗೃತಿ ಇಲ್ಲದೇ ಇರುವುದು ಅವರ ಆತಂಕಕ್ಕೆ ಕಾರಣವಾಗಿದೆ ಇನ್ನಷ್ಟು ಅರಿವು ಮೂಡಿಸಬೇಕಾಗಿದೆ.

Translate »