ರಾಬರ್ಟ್ ಹಾಡಿನ ಸಿಗ್ನೇಚರ್ ಸ್ಟೆಪ್
ಸಿನಿಮಾ

ರಾಬರ್ಟ್ ಹಾಡಿನ ಸಿಗ್ನೇಚರ್ ಸ್ಟೆಪ್

April 3, 2020

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರಗಳು ಎಂದರೆ ಅಲ್ಲೊಂದು ಕುತೂಹಲ, ಕೌತುಕ ಮನೆ ಮಾಡಿರುತ್ತದೆ. ಸಿನಿಮಾ ಆರಂಭವಾಗಿ ಬಿಡುಗಡೆಯಾಗುವವರೆಗೂ ಅಭಿಮಾನಿಗಳೇ ಚಿತ್ರದ ಪ್ರಚಾರ ಮಾಡುತ್ತಾರೆ. ಹಾಗೇ ದರ್ಶನ್ ಅಭಿನಯಿಸಿರುವ, ತರುಣ್ ಸುಧೀರ್ ಆ್ಯಕ್ಷನ್‍ಕಟ್ ಹೇಳಿರುವ ರಾಬರ್ಟ್ ಸಿನಿಮಾ ಕೂಡ ದಿನದಿಂದ ದಿನಕ್ಕೆ ಹೈಪ್ ಪಡೆದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಆಶಾಭಟ್ ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ. ಚಿತ್ರದ ಮೊದಲ ಹಾಡು ರಾಮ ನಾಮ ಹಾಡಿರೋ ರಾಮ ಬರುವನು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿತ್ತು. ಡಾ,ವಿ. ನಾಗೇಂದ್ರ ಪ್ರಸಾದ್ ಬರೆದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಿಲೀಸಾದ ಕೆಲವೇ ಗಂಟೆ ಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಈ ಹಾಡನ್ನು ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಈ ಹಾಡಿನ ಸಿಗ್ನೇಚರ್ ಸ್ಪೆಪ್ಸ್ ಈಗಾಗಲೇ ಎಲ್ಲಾಕಡೆ ವೈರಲ್ ಆಗಿದೆ. ಇದೀಗ ಟಿಕ್‍ಟಾಕ್‍ನಲ್ಲಿ ಕೂಡ ಇದಕ್ಕೆ ಸಖತ್ ಬೇಡಿಕೆ ಬಂದಿದೆ.

ಯಾವುದಾದರೂ ಒಂದು ಹೊಸ ಸಿನಿಮಾ, ಅಥವಾ ಸ್ಟಾರ್‍ಸಿನಿಮಾ ರಿಲೀಸ್ ಆದಮೇಲೆ ಆ ಚಿತ್ರದ ಹಾಡುಗಳು ಸೂಪರ್‍ಹಿಟ್ ಆಗೋದು ಸಾಮಾನ್ಯ. ಅದ್ರಲ್ಲೂ ಒಂದು ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಸಾಮಾಜಿಕ ಜಾಲತಾಣದಲ್ಲಿ, ಟಿಕ್‍ಟಾಕ್‍ನಲ್ಲಿ ಸದ್ದು ಮಾಡುವುದು ಪಕ್ಕಾ. ಈ ಹಿಂದೆ ಬಿಡುಗಡೆಯಾಗಿದ್ದ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್‍ಅಪ್ ಹಾಡು ಸಹ ಇದೇರೀತಿ ಭರ್ಜರಿ ರೆಸ್ಟಾನ್ಸ್ ಪಡೆದುಕೊಂಡಿತ್ತು. ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾದ ಹೀರೋ ಸೋ ಕ್ಯೂಟ್ ಎನ್ನುವ ಹಾಡು ಸಹ ಸಖತ್ ವೈರಲ್ ಆಗಿತ್ತು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ರಾಮ ರಾಮ ಹಾಡೂ ಜನಪ್ರಿಯವಾಗುತ್ತಿದೆ. ಈ ಹಾಡಿನ ಸಾಲಿಗೆ ಅಭಿಮಾನಿಗಳು ಮತ್ತು ಟಿಕ್ ಟಾಕ್ ಪ್ರಿಯರು ಡ್ಯಾನ್ಸ್ ಮಾಡಿ ಅದನ್ನು ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿz್ದÁರೆ.

Translate »