ವಾರ್ ಫುಟ್ ಸ್ಟುಡಿಯೋಸ್ ಹಾಗೂ ಸುಮುಖ ಎಂಟರ್ ಟೈನರ್ ಲಾಂಛನವನದಲ್ಲಿ ರೆಡ್ಡಿ ಕೃಷ್ಣ ಹಾಗೂ ರವಿ ಗೌಡ ಅವರು ನಿರ್ಮಿಸಿರುವ ರೌಡಿ ಬೇಬಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.. ನಿರ್ಮಾಪಕರಲೊಬ್ಬರಾದ ರೆಡ್ಡಿ ಕೃಷ್ಣ ಈ ಚಿತ್ರದ ನಿರ್ದೇಶಕರು ಕೂಡ..
ಅರ್ಮಾನ್ ಮೆರುಗು ಸಂಗೀತ ನಿರ್ದೇಶನ, ಅಭಿಷೇಕ್ ಅವರ ಹಿನ್ನೆಲೆ ಸಂಗೀತ, ಸಾಮ್ರಾಟ್ ಛಾಯಾಗ್ರಹಣ ಹಾಗು ವೆಂಕಿ ಯು ಡಿ ವಿ ಸಂಕಲನ ಈ ಚಿತ್ರಕ್ಕಿದೆ..
ಸಿಂಪಲ್ ಸುನಿ, ಕಿನಾಲ್ ರಾಜ್ ಹಾಗೂ ಡಾ.ವಿ. ನಾಗೇಂದ್ರ ಪ್ರಸಾದ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಕಾಲಭೈರವ(ಕೀರವಾಣಿ ಅವರ ಪುತ್ರ), ಚಂದನ್ ಶೆಟ್ಟಿ, ಅಪೂರ್ವ ಶ್ರೀಧರ್, ಮಾನಸ ಹೊಳ್ಳ, ಸಾಕೇತ್ ಹಾಗೂ ಹರಿಣಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಎಸ್.ಎಸ್.ರವಿಗೌಡ, ದಿವ್ಯಾ ರಾವ್, ಹೀರ್ ಕೌರ್, ಅಮಿತ್ ವಿ ರಾಜ್, ಕೆಂಪೇಗೌಡ, ಅರುಣಾ ಬಾಲರಾಜ್, ಶ್ರೀನಾಥ್ ವಸಿಷ್ಠ ಮುಂತಾದವರ ತಾರಾಬಳಗ ರೌಡಿ ಬೇಬಿ ಚಿತ್ರಕ್ಕಿದೆ..