ಕೊರೊನಾ ವೈರಸ್ ಎಂಬ ಮಹಾಮಾರಿ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಮಮದ್ಯಮ ವರ್ಗದವರ, ಕಾರ್ಮಿಕ ವರ್ಗದವರ ಪರಿಸ್ಥಿತಿ ಹೇಳತೀರದಾಗಿದೆ. ಅದಕ್ಕೆ ನಮ್ಮ ಸಿನಿಮಾ ರಂಗವೂ ಹೊರತಾಗಿಲ್ಲ. ಈಗಾಗಲೇ ಚಲನಚಿತ್ರ, ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಸೇರಿದಂತೆ ಸಿನಿಮಾ, ಟಿವಿ ರಂಗದ ಎಲ್ಲ ರೀತಿಯ ಚಟುವಟಿಕೆಗಳು ಸ್ಥಬ್ದವಾಗಿದೆ. ಒಂದು ತಿಂಗಳು ಪೂರ್ತಿ ರಾಜ್ಯಾದ್ಯಂತ ಥಿಯೇಟರ್‍ಗಳು ಕೂಡ ಬಂದ್ ಆಗಿವೆ. ಇದರಿಂದ ಚಿತ್ರೋದ್ಯಮ ಮೂವತ್ತರಿಂದ ನಲವತ್ತು ಕೋಟಿ ರೂ.ಗಳ ನಷ್ಟವನ್ನು ಅನುಭವಿಸಬೇಕಾ ಗಿದೆ. ಸಾಲ ಸೂಲ ಮಾಡಿ ಚಿತ್ರ ನಿರ್ಮಿಸಿ, ರಿಲೀಸ್ ಮಾಡಲು ರೆಡಿಯಾಗಿದ್ದ ನಿರ್ಮಾಪಕರು ವೃಥಾ ಹೆಚ್ಚಿನ ಬಡ್ಡಿ ಕಟ್ಟಬೇಕಾಗಿದೆ. ಇನ್ನು ಥಿಯೇಟರ್ ಓಪನ್ ಆದರೂ ತಕ್ಷಣ ಯಾವ ಪ್ರೇಕ್ಷಕರೂ ಚಿತ್ರಮಂದಿರಗಳಿಗೆ ಬರೋದಿಲ್ಲ, ಅವರು ಮತ್ತೆ ಹೊಂದಿ ಕೊಳ್ಳೋಕೆ ಕನಿಷ್ಟ 2 ವಾರವಾದರೂ ಬೇಕಾಗುತ್ತದೆ. ಅಲ್ಲೀವರೆಗೆ ಹತ್ತಿಪ್ಪತ್ತು ಜನರಿಗೆ ಷೋ ಏರ್ಪಡಿಸ ಬೇಕಾದ ಅನಿವಾರ್ಯತೆಯೂ ನಮಗಿದೆ. ಇದನ್ನೆಲ್ಲ ನೇರವಾಗಿ ನಿರ್ಮಾಪಕನೇ ಭರಿಸಬೇಕಾಗುತ್ತದೆ.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಚಿತ್ರೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಸಾವಿರಾರು ಕಾರ್ಮಿಕ ವರ್ಗದ ಕುಟುಂಬಗಳು ಬೀದಿಗೆ ಬಂದಿವೆ. ಅವರ ಪರಿಸ್ಥಿತಿಯಂತೂ ಹೇಳತೀರ ದಾಗಿದೆ. ಸಹ ಕಲಾವಿದರು, ಸಹ ನಿರ್ದೇಶಕರು, ನೃತ್ಯ ಕಲಾವಿದರು, ಸೆಟ್, ಲೈಟ್‍ಬಾಯ್ಸ್ ಹೀಗೆ ಹಲವಾರು ವಿಭಾಗಗಳ ಕೆಲಸಗಾರರು ಜೀವನ ನಡೆಸುವುದು ಕಷ್ಟಕರವಾಗಿದೆ. ಇವರೆಲ್ಲ ದಿನಗೂಲಿಗೆ ಕೆಲಸ ಮಾಡುವವರು. ಇಂಥ ಚಲನಚಿತ್ರ ಕಾರ್ಮಿಕ ವರ್ಗ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರುಗಳು, ಸೆಲಬ್ರಿಟಿಗಳು ತಮ್ಮ ಕಾರ್ಮಿಕ ವರ್ಗದ ಸಂಕಷ್ಟಕ್ಕೆ ಮರುಗಿ ತಮ್ಮ ಕೈಲಾದ ನೆರವನ್ನು ನೀಡಿz್ದÁರೆ. ಆದರೆ ಕನ್ನಡ ಚಿತ್ರರಂಗದ ಯಾವುದೇ ಸೆಲಬಬ್ರಿಟಿಗಳು ಅಂಥ ಯೋಚನೆ ಯಾಕೆ ಮಾಡುತ್ತಿಲ್ಲ ಎಂಬ ಮಾತು ಕೇಳಿಬರು ತ್ತಿತ್ತು. ಅದಕ್ಕುತ್ತರ ವೆಂಬಂತೆ ಈಗಾಗಲೇ ನಟ ನಿಖಿಲ್ ಕುಮಾರಸ್ವಾಮಿ ಚಲನಚಿತ್ರ ಕಾರ್ಮಿಕ ಒಕ್ಕೂಟದ ಎಲ್ಲಾ ವಿಭಾಗಗಳ ಸದಸ್ಯರಿಗೆ ತಲಾ 3 ಸಾವಿರ ರೂ.ಗಳನ್ನು ನೀಡಿದ್ದಾರೆ. ಇದರ ಮೊತ್ತ 32 ಲಕ್ಷ ರೂ. ಗಳಾಗಿದ್ದು, ಜೊತೆಗೆ ಕಿರುತೆರೆ ವಿಭಾಗಕ್ಕೂ 5 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇನ್ನು ಇಡೀ ಕನ್ನಡ ಚಿತ್ರರಂಗವೇ ತಮ್ಮ ಶ್ರಮಿಕ ವರ್ಗದ ನೆರವಿಗೆ ಮುಂದಾಗಿದೆ. ಈ ಕುರಿತಂತೆ ಒಂದಷ್ಟು ಮಾತುಕತೆ ಕೂಡ ನಡೆದಿದ್ದು, ಸದ್ಯದಲ್ಲೇ ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬರುವ ಸೂಚನೆ ಕಂಡುಬಂದಿದೆ.
ಈ ಕುರಿತಂತೆ ಮಾತನಾಡಿರುವ ನಟ ಶಿವರಾಜ್‍ಕುಮಾರ್, ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೆಲಸಗಾರರಿದ್ದಾರೆ. ಅವರೆಲ್ಲ ನಮ್ಮ ಜೊತೆ ನಿಂತು ದುಡಿದವರು. ಅವರಿಗೆ ಕಷ್ಟ ಅಂತ ಬಂದಾಗ, ತೊಂದರೆಯಾದಾಗ ನಾವು ನೆರವಾಗಬೇಕಾದ್ದು ನಮ್ಮ ಕರ್ತವ್ಯ. ನಾನು ಕಾರ್ಮಿಕರ ಒಕ್ಕೂಟದ ಜೊತೆಗೆ ಈಗಾಗಲೇ ಚರ್ಚೆ ಮಾಡಿz್ದÉೀನೆ. ನಾವೆಲ್ಲ ಸೇರಿ ಆದಷ್ಟು ಬೇಗನೇ ನಮ್ಮ ಕಾರ್ಮಿಕರಿಗೆ ನೆರವಾಗುವಂತಹ ಒಂದು ತೀರ್ಮಾನವನ್ನು ಕೈಗೊಳ್ಳಲಿz್ದÉೀವೆ ಎಂದು ಹೇಳಿz್ದÁರೆ. ಇನ್ನು ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಸಹ ಅದನ್ನೇ ಹೇಳಿದ್ದು, ನಾವೆಲ್ಲರೂ ಒಟ್ಟಾಗಿ ನಮ್ಮ ಜೊತೆ ದುಡಿದಂಥ ಕಾರ್ಮಿಕರ ನೆರವಿಗೆ ನಿಲ್ಲುವ ಆಲೋಚನೆಯಿದೆ. ನಾನು ಸಹ ಇದಕ್ಕೆ ಕೈಜೋಡಿಸುತ್ತಿz್ದÉೀನೆ ಎಂದು ಹೇಳಿz್ದÁರೆ. ಇನ್ನು ನಟ ಶ್ರೀಮುರುಳಿ ಸಹ ಈ ಬಗ್ಗೆ ಮಾತನಾಡಿದ್ದಾರೆ. ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಸುಮಾರು ಐದು ಸಾವಿರ ಜನ ಸದಸ್ಯರಿದ್ದು, ಅವರೆಲ್ಲರೂ ಈಗ ತುಂಬಾ ತೊಂದರೆಯಲ್ಲಿ ಸಿಲುಕಿz್ದÁರೆ. ಅವರಿಗೆ ನೆರವಾಗುವ ಕೆಲಸದ ಜವಾಬ್ದಾರಿಯನ್ನು ಶಿವಣ್ಣ ಹೊತ್ತುಕೊಂಡಿz್ದÁರೆ. ಇಡೀ ಚಿತ್ರರಂಗ ಒಟ್ಟಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ನಮ್ಮವರ ಕಷ್ಟ ಸುಖಕ್ಕೆ ಆಗಲೇಬೇಕು. ಹಿರಿಯರೆಲ್ಲ ಸೇರಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿz್ದÁರೆ. ಇದಲ್ಲದೆ ನಟ ಧನಂಜಯ್, ಚೇತನ್, ನಿರ್ದೇಶಕ ಪವನ್‍ಕುಮಾರ್ ಸೇರಿದಂತೆ ಚಿತ್ರರಂಗದ ಬಹುತೇಕ ಸೆಲಬ್ರಿಟಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕಾರ್ಮಿಕರ ಹಿತ ಕಾಯಲು ಮುಂದಾಗಿದ್ದಾರೆ.