ಮೇ 21ಕ್ಕೆ ವಿಶ್ವಾದ್ಯಂತ ತೆರೆಗೆ ಯುವರತ್ನ
ಸಿನಿಮಾ

ಮೇ 21ಕ್ಕೆ ವಿಶ್ವಾದ್ಯಂತ ತೆರೆಗೆ ಯುವರತ್ನ

April 3, 2020

ನಿರ್ದೇಶಕ ಸಂತೋಷ್ ಆನಂದ ರಾಮ್ ಹಾಗೂ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾಂಬಿನೇಶನ್‍ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಚಿತ್ರ ಯುವರತ್ನ. ರಾಜಕುಮಾರ ಸಿನಿಮಾದ ನಂತರ ಇವರಿಬ್ಬರ ಜೋಡಿಯಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಚಿತ್ರ ಇದಾಗಿದ್ದು, ಅದ್ಯಾವಾಗ ಸಿನಿಮಾ ತೆರೆಗೆ ಬರುತ್ತೋ ಎಂದು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿz್ದÁರೆ. ಮೊನ್ನೆಯಷ್ಟೆ ಅಂದರೆ ಪುನೀತ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮನ ತಣಿಸಲಾಗಿತ್ತು. ಯುವರತ್ನ ಚಿತ್ರ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕ ಆನಂದ ರಾಮ್ ಮಾಡಿದ ಟ್ವೀಟ್ ಸಿಕ್ಕಾಪಟ್ಟೆ ಜೋಶ್ ನೀಡಿತ್ತು. ಅಲ್ಲದೆ ಸಖತ್ ವೈರಲ್ ಕೂಡ ಆಯಿತು.

ಅದೇನೆಂದರೆ ಬಹುನಿರೀಕ್ಷೆಯ ಯುವರತ್ನ ಸಿನಿಮಾ ಮೇ 21ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಎಲ್ಲರೂ ಸ್ವಾಗತ ಮಾಡಲು ಸಿದ್ಧರಾಗಿ ಎಂದು ಸಂತೋಷ್ ಆನಂದ್ ರಾಮ್ ಅವರ ಫೇಕ್ ಟ್ವಿಟ್ಟರ್ ಅಕೌಂಟ್ ನಿಂದ ಪೆÇೀಸ್ಟ್ ಮಾಡಲಾಗಿತ್ತು, ಹಲವಾರು ಸಿನಿ ಪ್ರಿಯರು ಅದನ್ನೇ ನಿಜವೆಂದು ನಂಬಿ ದ್ದರು. ನಿರ್ದೇಶಕ ಸಂತೋಷ್ ಆನಂದ ರಾಮ್ ಅವರು ತನಗೆ ಗೊತ್ತಿರದೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿರುವುದನ್ನು ನೋಡಿ ಶಾಕ್ ಆದರು. ನಂತರ ಅದು ಫೇಕ್ ಅಂತ ಗೊತ್ತಾಗಿ ಅವರೇ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿz್ದÁರೆ.

ಇದೊಂದು ತಪ್ಪು ಮಾಹಿತಿ, ಇನ್ನೂ ಚಿತ್ರದ 2 ಹಾಡುಗಳ ಚಿತ್ರೀಕರಣ ಬಾಕಿ ಯಿದ್ದು, ಪೆÇೀಸ್ಟ್ ಪೆÇ್ರಡP್ಷÀನ್ ಕೆಲಸಗಳು ಪಕ್ಕ ಮುಗಿದ ಮೇಲೆ ರಿಲೀಸ್ ದಿನಾಂಕ ವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಿದ್ದು ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲದಕ್ಕೂ ದೊಡ್ಡ ಮಟ್ಟದಲ್ಲಿ ಪ್ಲಾನ್ ಇರುವುದರಿಂದ ರಿಲೀಸ್ ದಿನಾಂಕವನ್ನು ಈಗಲೇ ನಿಗದಿ ಮಾಡುವುದಕ್ಕಾಗುವುದಿಲ್ಲ ಎಂದು ಟ್ವೀಟ್ ಮಾಡಿz್ದÁರೆ. ಯುವರತ್ನ ಸಿನಿಮಾದ ಟಾಕಿ ಭಾಗ ಈಗಾಗಲೇ ಮುಕ್ತಾಯವಾಗಿದೆ. ಆದರೆ ಸಿನಿಮಾದ ಎರಡು ಬಹುನಿರೀಕ್ಷೆಯ ಹಾಡಿನ ಚಿತ್ರೀ ಕರಣ ಬಾಕಿ ಉಳಿದುಕೊಂಡಿದೆ. ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಎಲ್ಲವು ಅಂದು ಕೊಂಡಂತೆ ಆಗಿದ್ದರೆ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ವಿದೇಶಿ ಚಿತ್ರೀಕರಣ ಮುಂದಕ್ಕೆ ಹಾಕಿz್ದÉೀವೆ. ಮತ್ತೆ ಯಾವಾಗ, ಎಲ್ಲಿ ಚಿತ್ರೀಕರಣ ಮಾಡ ಬೇಕು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ ಎಂದು ಸಹ ಹೇಳಿದ್ದಾರೆ.

Translate »