ಮೈಸೂರಲ್ಲಿ ಸೋಂಕು ಇಳಿಮುಖ
ಮೈಸೂರು

ಮೈಸೂರಲ್ಲಿ ಸೋಂಕು ಇಳಿಮುಖ

October 21, 2020

ಮೈಸೂರು, ಅ.20(ಎಸ್‍ಬಿಡಿ)- ರಾಜ್ಯದಲ್ಲಿ ಬೆಂಗಳೂರು ನಂತರದಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ಸಾವಿನ ಪ್ರಮಾಣ ದಾಖಲಾ ಗುತ್ತಿರುವ ಮೈಸೂರು ಜಿಲ್ಲೆಯಲ್ಲಿ ಸೋಂಕು ನಿಯಂತ್ರಣ ಪರಿಣಾಮಕಾರಿಯಾಗಿದೆ.

ಕಳೆದ ತಿಂಗಳಲ್ಲಿ ಹೆಚ್ಚು ಆರ್ಭಟಿಸಿದ್ದ ಕೊರೊನಾ ದಿನಗಳೆದಂತೆ ಗಣನೀಯ ವಾಗಿ ತಗ್ಗಿದೆ. ಈ ಸಂಬಂಧ ಅಂಕಿ ಅಂಶ ಹಂಚಿಕೊಂಡಿರುವ ಜಿಲ್ಲಾಡಳಿತ, ಕೊರೊನಾ ನಿಯಂತ್ರಣದಲ್ಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದೆ. ಸೆಪ್ಟೆಂಬರ್‍ನಲ್ಲಿ ಶೇ.20.07 ಇದ್ದ ಪಾಸಿಟಿವ್ ಪ್ರಮಾಣ ಅಕ್ಟೋಬರ್‍ನಲ್ಲ್ಲಿ ಶೇ.7.08ಕ್ಕೆ, ಸಾವಿನ ಪ್ರಮಾಣ ಶೇ.2.5 ರಿಂದ ಶೇ.1.1ಕ್ಕೆ ಇಳಿಕೆಯಾಗಿದೆ. ನಿತ್ಯ ನಡೆಸ ಲಾಗುವ ಟೆಸ್ಟಿಂಗ್ ಸಂಖ್ಯೆ 2,500ರಿಂದ ಸುಮಾರು 4 ಸಾವಿರಕ್ಕೆ ಹೆಚ್ಚಿಸಲಾಗಿದೆ. ಹೀಗೆ ಎಲ್ಲಾ ಆಯಾಮಗಳಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸ ಲಾಗಿದೆ. ಸೆ.29ರಂದು ಮೈಸೂರು ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದ ರೋಹಿಣಿ ಸಿಂಧೂರಿ ಅವರು, ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ 2 ವಾರ ಕಾಲಾವಕಾಶ ಕೇಳಿದ್ದರು. ನಂತರದಲ್ಲಿ ಟೆಸ್ಟಿಂಗ್ ಸಂಖ್ಯೆ, ಸಾಮಾನ್ಯ ಹಾಗೂ ಐಸಿಯು ಬೆಡ್ ಸಂಖ್ಯೆ ಹೆಚ್ಚಳ, ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿ ಯಾದ ಬೆಡ್‍ಗಳ ಬಳಕೆ ಹೀಗೆ ಸಾಕಷ್ಟು ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೂ ರಾಜ್ಯದ ಕೊರೊನಾ ಹಾಟ್‍ಸ್ಪಾಟ್ ಜಿಲ್ಲೆಗಳಲ್ಲಿ ಮೈಸೂರು ಒಂದಾಗಿರುವುದರಿಂದ ಮತ್ತಷ್ಟು ಪರಿಣಾಮಕಾರಿ ಕ್ರಮದ ಅಗತ್ಯವಿದೆ ಎಂಬುದು ತಜ್ಞರ ಸಲಹೆಯಾಗಿದೆ.

Translate »