ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ಬಿಗ್ ಬಾಸ್ ಮಾಜಿ ಸ್ಪರ್ಧಿ  ಆಡಂ ಪಾಷಾ ಬಂಧನ
ಮೈಸೂರು

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ಬಿಗ್ ಬಾಸ್ ಮಾಜಿ ಸ್ಪರ್ಧಿ  ಆಡಂ ಪಾಷಾ ಬಂಧನ

October 21, 2020

ಬೆಂಗಳೂರು,ಅ.20- ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಿಚಾರಣೆ ನಡೆ ಸಿದ ಬಳಿಕ ಎನ್‍ಸಿಬಿ ಅಧಿಕಾರಿಗಳು ಬಿಗ್ ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂ ಧಿಸಿದಂತೆ ಕಳೆದ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಆಡಮ್ ಪಾಷಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈಗಾ ಗಲೇ ಪ್ರಕರಣದಲ್ಲಿ ಬಂಧಿತಳಾದ ಡ್ರಗ್ಸ್ ಪೆಡ್ಲರ್ ಅನಿಕಾ, ಆಡಂ ಪಾಷಾ ತನ್ನ ಬಳಿ ಡ್ರಗ್ಸ್ ಖರೀದಿಸುತ್ತಿದ್ದ ಎಂಬ ಮಾಹಿತಿಯೊಂದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಹೀಗಾಗಿ ಅನಿಕಾಳಿಂದ ಡ್ರಗ್ಸ್ ಖರೀದಿ ಆರೋಪದಡಿ ಪಾಷಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ವಿಭಾಗದ ಮುಖ್ಯಸ್ಥ ಅಮಿತ್ ಗವಾಟೆ ಸ್ಪಷ್ಟಪಡಿಸಿದ್ದಾರೆ.

 

 

 

Translate »