ಈ ಬಾರಿ ಅರ್ಧ ಗಂಟೆಗೆಲ್ಲಾ ಜಂಬೂಸವಾರಿ ಅಂತ್ಯ!
ಮೈಸೂರು

ಈ ಬಾರಿ ಅರ್ಧ ಗಂಟೆಗೆಲ್ಲಾ ಜಂಬೂಸವಾರಿ ಅಂತ್ಯ!

October 21, 2020

ಮೈಸೂರು, ಅ.20(ಎಂಟಿವೈ)- ನಾಡಹಬ್ಬ ದಸರಾ ಮಹೋ ತ್ಸವದಲ್ಲಿ ಸಾಂಸ್ಕøತಿಕ ವೈಭವದ ಸಂಕೇತವೂ, ಭಕ್ತಿಭಾವದೊಂ ದಿಗೆ ಏಕತೆ ಬಿಂಬಿಸುವ ದಿಕ್ಸೂಚಿಯೂ ಆಗಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಅರ್ಧ ಗಂಟೆಯಲ್ಲೇ ಸಮಾಪ್ತಿಯಾಗಲಿದೆ.

ಪ್ರತಿವರ್ಷ ಅದ್ಧೂರಿ ದಸರೆಯಲ್ಲಿ ವೈಭವದ ಮೆರವಣಿಗೆಗೆ ಸಾಕ್ಷಿಯಾಗುತ್ತಿದ್ದ ಜಂಬೂಸವಾರಿ, ಈ ಬಾರಿ ಕೊರೊನಾ ಹಿನ್ನೆಲೆ ಯಲ್ಲಿ ಸರಳವಾಗಿದೆ, ಮೆರವಣಿಗೆ ಮಾರ್ಗವೂ ಮೊಟಕುಗೊಂಡಿದೆ. ಮೈಸೂರು ಅರಮನೆ ಆವರಣದಿಂದ ಆರಂಭವಾಗಿ ಬನ್ನಿ ಮಂಟಪದ ಪಂಜಿನ ಕವಾಯಿತು ಮೈದಾನದವರೆಗೂ (5 ಕಿ.ಮಿ ದೂರ) ನಡೆಯುತ್ತಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ಹಿನ್ನೆಲೆಯಲ್ಲಿ 500 ಮೀ.ಗೆ ಸೀಮಿತಗೊಂಡಿದೆ. ಹಾಗಾಗಿ, ಆನೆ ಅಭಿಮನ್ಯು ಬೆನ್ನಿಗೆ ಅಂಬಾರಿ ಕಟ್ಟಿದ ಅರ್ಧ ಗಂಟೆಗೆಲ್ಲಾ ಜಂಬೂಸವಾರಿ ಕೊನೆಗೊಳ್ಳÀಲಿದೆ. 2002-03ನೇ ಸಾಲಿನ ನಂತರ ಸುದೀರ್ಘ ಅವಧಿ ಬಳಿಕ ಜಂಬೂ ಸವಾರಿ ಬೇಗನೇ ಮುಗಿಯುತ್ತಿರುವುದು ಇದೇ ಮೊದಲು. 2002- 03ರಲ್ಲಿ ಕಾಡುಗಳ್ಳ ವೀರಪ್ಪನ್ ವರನಟ ಡಾ.ರಾಜ್‍ಕುಮಾರ್ ಅವರನ್ನು ಅಪಹರಣ ಮಾಡಿದ್ದ ಹಿನ್ನೆಲೆಯಲ್ಲಿ ಆ ವರ್ಷವೂ ಜಂಬೂ ಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತಗೊಂಡಿತ್ತು. ಕೊರೊನಾ ಸೋಂಕಿನಿಂದಾಗಿ ಅರಮನೆ ಆವರಣಕ್ಕೆ ಮಿತಗೊಳಿಸಲಾಗಿದೆ. ಕೊರೊನಾ ಸಂಬಂಧ ಜಾಗೃತಿ ಮೂಡಿಸುವ ಹಾಗೂ ಸರ್ಕಾ ರದ ಸಾಧನೆ ವಿವರಿಸುವ ಎರಡು ಸ್ತಬ್ಧಚಿತ್ರ, ಪಥಸಂಚಲನಕ್ಕೆ 4 ಪೊಲೀಸ್ ತುಕಡಿ, ಅಶ್ವಾರೋಹಿ ದಳದ ತುಕಡಿ ಇರಲಿವೆ. ಈ ಬಾರಿ 300 ಜನರ ವೀಕ್ಷಣೆಗಷ್ಟೇ ಅವಕಾಶ ನೀಡಲಾಗುತ್ತಿದೆ.

ಅಂಬಾರಿ ಭಾರ ಹೊತ್ತು ಸರಾಗ ಸಾಗಿದ `ಅಭಿಮನ್ಯು’

ಮೈಸೂರು, ಅ.20(ಎಂಟಿವೈ)- ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕ ರ್ಷಣೆ ಜಂಜೂಸವಾರಿ. ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಧೈರ್ಯಶಾಲಿ ಬಿರುದಾಂಕಿತ, ಕೂಂಬಿಂಗ್ ಸ್ಪೆಷಲಿಸ್ಟ್ `ಅಭಿಮನ್ಯು’ ಮಂಗಳವಾರ ಮರದ ಅಂಬಾರಿಯೊಂದಿಗೆ ಒಟ್ಟು 700 ಕೆಜಿ ತೂಕವನ್ನು

ನಿರಾಯಾಸವಾಗಿ ಹೊತ್ತೊಯ್ಯುವ ಮೂಲಕ ಭರವಸೆ ಮೂಡಿಸಿದ್ದಾನೆ. ಕೊರೊನಾ ಹಿನ್ನೆಲೆ ಈ ಬಾರಿ ಸಾಂಪ್ರದಾಯಿಕ ದಸರಾಗಷ್ಟೆ ಸೀಮಿತಗೊಳಿಸಿರುವ ಮಹೋತ್ಸವದಲ್ಲಿ ಜಂಬೂಸವಾರಿಯನ್ನು ಅರಮನೆ ಅಂಗಳಕ್ಕೆ ಮಿತಗೊಳಿಸಲಾಗುತ್ತಿದೆ. 750 ಕೆಜಿ ಚಿನ್ನದ ಅಂಬಾರಿ ಹೊರಬೇಕಿರುವ 53 ವರ್ಷದ ಅಭಿಮನ್ಯು ತಾಲೀಮಿನಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಾನೆ. ಅಭಿಮನ್ಯುಗೆ ಕಳೆದ 10 ದಿನದಿಂದ ಮರದ ತೊಟ್ಟಿಲಿನೊಂದಿಗೆ 500, ಬಳಿಕ 600 ಕೆಜಿ (ಹಂತ ಹಂತವಾಗಿ ಏರಿಕೆ) ಬಾರದ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಗಿತ್ತು. ಜಂಬೂಸವಾರಿಗೆ 6 ದಿನ ಮಾತ್ರ ಇರುವುದರಿಂದ ಇಂದು 700 ಕೆಜಿ ಮರಳಿನ ಮೂಟೆ ಹೊರಿಸಲಾಗಿತ್ತು. ಜತೆಗೆ ಗಜಪಡೆಗೆ ಅಗತ್ಯಕ್ಕನುಗುಣವಾಗಿ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಇಂದು ಬೆಳಗ್ಗೆ ಅರಮನೆ ಆವರಣದಲ್ಲಿ, ಪ್ರಮೋದಾ ದೇವಿ ಒಡೆಯರ್ ನಿವಾಸದ ಬಳಿ ಜೋಡಿಸಿರುವ ಕ್ರೇನ್ ಮೂಲಕ ಮರದ ಅಂಬಾರಿ ಯನ್ನು ಅಭಿಮನ್ಯು ಬೆನ್ನ ಮೇಲೆ ಇರಿಸಿ ಕಟ್ಟಲಾಯಿತು. ಬಳಿಕ ಮರಳಿನ ಮೂಟೆ ಇರಿಸಲಾ ಯಿತು. ಕುಮ್ಕಿ ಆನೆಗಳಾದ ವಿಜಯ ಮತ್ತು ಕಾವೇರಿಯೊಂದಿಗೆ ಅಭಿಮನ್ಯು ಗಾಂಭಿರ್ಯದ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದ. ಒಡೆಯರ್ ನಿವಾಸದ ಬಳಿಯಿಂದ ಆರಂಭವಾದ ಅಭಿಮನ್ಯುವಿನ ತಾಲೀಮು ಜಯಮಾರ್ತಾಂಡ ದ್ವಾರ, ತ್ರಿನೇಶ್ವರ ದೇವಾಲಯ, ಭುವನೇಶ್ವರಿ ದೇವಾಲಯ, ಜಂಬೂಸವಾರಿ ದಿನ ಪುಷ್ಪಾರ್ಚನೆ ಮಾಡುವ ಸ್ಥಳದ ಬಳಿ 2 ಸುತ್ತು ಹಾಕುವುದರೊಂದಿಗೆ ಕೊನೆಗೊಂಡಿತು. ಅಲ್ಲದೆ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಸೊಂಡಿಲೆತ್ತಿ ಸೆಲ್ಯೂಟ್ ಹೊಡಿಸುವ ತಾಲೀಮನ್ನು ಅಭಿಮನ್ಯುವಿಗೆ ನೀಡಲಾಯಿತು. ಈ ವೇಳೆ ಡಿಸಿಎಫ್ ಎಂ.ಜಿ.ಅಲೆಗ್ಸಾಂಡರ್, ಪಶುವೈದ್ಯ ಡಾ.ಡಿ.ಎನ್.ನಾಗ ರಾಜು, ಸಹಾಯಕರಾದ ರಂಗರಾಜು, ಅಕ್ರಮ್ ಸೇರಿದಂತೆ ಇನ್ನಿತರರು ಇದ್ದರು.

Translate »