ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮಾರ್ಗ ಹುಡುಕಿ
ಮೈಸೂರು

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮಾರ್ಗ ಹುಡುಕಿ

October 21, 2020

ಮೈಸೂರು, ಅ.20(ಆರ್‍ಕೆಬಿ)- ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯು ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿದೆ. ಅದಕ್ಕೆ ಅಗತ್ಯವಾದ ಮಾರ್ಗಗಳನ್ನು ಹುಡುಕಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತಿ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆ ಯಲ್ಲಿ ಜಿಪಂನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಮಂಗಳವಾರ, ಸೆಪ್ಟೆಂ ಬರ್ ಅಂತ್ಯದವರೆಗಿನ ಜಿಪಂ ಪ್ರಗತಿ ಪರಿಶೀಲನೆ ನಡೆಸಿದ ಸಭೆಯಲ್ಲಿ ಮಾತ ನಾಡಿದ ಅವರು, ಎಸ್‍ಎಸ್‍ಎಲ್‍ಸಿಯಲ್ಲಿ ಮೈಸೂರು ಜಿಲ್ಲೆಯು ಶೇ.74ರಷ್ಟು ಫಲಿ ತಾಂಶ ಪಡೆದು 21ನೇ ಸ್ಥಾನಕ್ಕೆ ತಳ್ಳಲ್ಪ ಟ್ಟಿದೆ. ಇದನ್ನು `ಎ’ ಗ್ರೇಡ್‍ಗೆ ತರಲು ಏನು ಯೋಜನೆ ಹಾಕಿಕೊಂಡಿದ್ದೀರಿ? ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾಗಮ ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದೆ. ಕೊರೊನಾ ಕಾರಣದಿಂದ ಫಲಿತಾಂಶದಲ್ಲಿ ಹಿಂದು ಳಿಯಲು ಕಾರಣವಾಯಿತು ಎಂದು ಸಮಜಾಯಿಷಿ ನೀಡಿದರು.

ಪ್ರತಿಯಾಗಿ ಭಾರತಿ ಅವರು, ಫಲಿತಾಂಶ ದಲ್ಲಿ ಹಿಂದುಳಿಯಲು ಕೊರೊನಾದ ಕಾರಣ ನೀಡುತ್ತಿದ್ದೀರಿ. ಬೇರೆ ಜಿಲ್ಲೆಗಳಲ್ಲೂ ಕೊರೊನಾ ಇದೆ. ಆ ಜಿಲ್ಲೆಗಳು ಮುಂದಿವೆ. ನಾವು ಮಾತ್ರ 21ನೇ ಸ್ಥಾನಕ್ಕೆ ಕುಸಿದಿದ್ದೇವೆ ಏಕೆ? ಎಂದು ಮರುಪ್ರಶ್ನಿಸಿದರು.

ವಿದ್ಯಾಗಮ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದೆ. ಮುಂದಿನ ತಿಂಗಳಿಂದ ಮಕ್ಕ ಳಿಗೆ ಯಾವ ರೀತಿ ಪಾಠ ಮಾಡಲಿದ್ದೀರಿ. ಕ್ರಿಯಾ ಯೋಜನೆ ಏಕೆ ಇನ್ನೂ ತಯಾ ರಿಸಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು.

ಮುಂದಿನ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಪ್ರಯತ್ನ ಮಾಡಿ. ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರ ಗೂಗಲ್ ಮೀಟ್ ನಡೆಸಿ, ಶಿಕ್ಷಕ ರನ್ನು ಹುರಿದುಂಬಿಸಿ. ಉತ್ತಮ ಫಲಿ ತಾಂಶ ತಂದು ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಪಡಿಸಲು ಕ್ರಮ ಕೈಗೊಳ್ಳಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಸತಿ ಶಾಲೆ ಮಕ್ಕಳ ಭವಿಷ್ಯ: ವಸತಿ ಶಾಲೆಗಳ ಮಕ್ಕಳಿಗೆ ಕೇವಲ ಆಹಾರ ಪೂರೈ ಸುವುದಷ್ಟೇ ನಿಮ್ಮ ಕೆಲಸವಲ್ಲ. ಅವರ ಭವಿಷ್ಯ ರೂಪಿಸಲು ಆದ್ಯತೆ ನೀಡಬೇಕು. ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಭಾಗವಹಿಸಲು ಅವರನ್ನು ತಯಾರು ಮಾಡಬೇಕು ಎಂದು ಅಧಿಕಾರಿ ಗಳಿಗೆ ಸಿಇಓ ಆದೇಶಿಸಿದರು.

ಆನ್‍ಲೈನ್ ತರಗತಿಗಳಿಗೆ ಎಷ್ಟು ಮಕ್ಕಳು ದಾಖಲಾಗಿದ್ದಾರೆ. ಎಷ್ಟು ಮಕ್ಕಳ ಬಳಿ ಮೊಬೈಲ್ ಇದೆ ಪರೀಕ್ಷಿಸಿ, ಮೊಬೈಲ್ ಖರೀದಿ ಸಲು ಸಾಧ್ಯವಾಗದ ಮಕ್ಕಳಿಗೆ ಯಾವ ರೀತಿ ಯಲ್ಲಿ ಮೊಬೈಲ್ ಕೊಡಿಸಬಹುದು ಎಂಬ ಬಗ್ಗೆ ಆಲೋಚಿಸಿ ಎಂದು ಗಮನ ಸೆಳೆದರು.

ಶುದ್ಧ ಕುಡಿಯುವ ನೀರಿನ ಘಟಕ: ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು (ಆರ್‍ಓ ಪ್ಲಾಂಟ್) ಹಾಳಾ ಗದಂತೆ ನೋಡಿಕೊಳ್ಳಿ. ಕೆಟ್ಟುನಿಂತರೆ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದೂ ಸಂಬಂ ಧಿಸಿದ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 650 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 63 ಘಟಕಗಳನ್ನು ಈವರೆಗೆ ದುರಸ್ತಿಗೊಳಿಸಲಾಗಿದೆ. 40 ಘಟಕ ಗಳಲ್ಲಿ ನೀರಿನ ಸಮಸ್ಯೆ ಇದ್ದು, ಇದರಲ್ಲಿ 20 ಘಟಕಗಳಲ್ಲಿನ ಸಮಸ್ಯೆ ಪರಿಹರಿಸ ಲಾಗಿದೆ. ಉಳಿದ 20 ಘಟಕಗಳ ಬಗ್ಗೆ ಗ್ರಾಪಂ ಗಳ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ನೀರು ಸರಬ ರಾಜು ಇಲಾಖೆ ಕಾರ್ಯಪಾಲಕ ಅಭಿ ಯಂತರ ಸಭೆಗೆ ಮಾಹಿತಿ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಪ್ರತಿ ಕ್ಯಾನ್ ನೀರಿಗೆ 5 ರೂ. ಶುಲ್ಕ ವಿಧಿಸಲಾಗುತ್ತಿದೆ. ಹೀಗೆ ಸಂಗ್ರಹವಾಗುವ ಹಣವನ್ನು ಘಟಕಗಳ ದುರಸ್ತಿಗೆ ಬಳಸ ಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ಗೌರಮ್ಮ, ಶಿಕ್ಷಣ ಸ್ಥಾಯಿ ಸಮಿತಿಯ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »