ಬೆಂಗಳೂರು, ಸೆ. 9 (ಕೆಎಂಶಿ)-ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಮನವಿ ಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟ ಶಿವರಾಜ್‍ಕುಮಾರ್ ನೇತೃತ್ವದ ತಂಡ ಸಲ್ಲಿಸಿತು.
ಕಳೆದ 6 ತಿಂಗಳಿನಿಂದ ಕೊರೊನಾದಿಂದ ತತ್ತರಿಸಿರುವ ಚಿತ್ರೋ ದ್ಯಮದ ಮಂದಿಗೆ ನೆರವು ನೀಡಲು ವಿಶೇಷ ಪ್ಯಾಕೇಜ್ ಅಗತ್ಯ ವಿದೆ. ಸರ್ಕಾರ ಇದನ್ನು ನೀಡುವಂತೆ ಕೋರಲಾಯಿತು. ಜೊತೆಗೆ ವಾರ್ಷಿಕ ತೆರಿಗೆ ಮನ್ನಾ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳ ಕರೆಂಟ್ ಬಿಲ್‍ಅನ್ನು ಮನ್ನಾ ಮಾಡುವುದು, 2018 ಮತ್ತು 19ನೇ ಸಾಲಿನ ಚಿತ್ರಗಳ ಸಬ್ಸಿಡಿ ಬಿಡುಗಡೆ ಮಾಡು ವಂತೆಯೂ ಮನವಿ ಮಾಡಲಾಯಿತು. ಈಗಾಗಲೇ ಹೆಸರಘಟ್ಟ ದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚಿತ್ರನಗರಿ ಬಗ್ಗೆ ಹೆಚ್ಚು ಆಸ್ಥೆ ವಹಿಸಿ ರೂಪುರೇಷೆ ಸಿದ್ಧಪಡಿಸಿ ಆ ಯೋಜನೆಯನ್ನು ಜಾರಿ ಗೊಳಿಸುವಂತೆ ಮನವಿ ಮಾಡಿದರು. ಚಿತ್ರೋದ್ಯಮದಲ್ಲಿ ಇರುವ ನಿರ್ಮಾಪಕರು, ವಿತರಕರು, ಪ್ರದರ್ಶಕರು ಹಾಗೂ ಕಾರ್ಮಿಕರ ಒಕ್ಕೂಟ ಸೇರಿದಂತೆ ಇತರೇ ಅಂಗ ಸಂಸ್ಥೆಗಳಿಗೆಲ್ಲಾ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಯಿತು. ಕಳೆದ ಬಾರಿಯೂ ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿ ದ್ದರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಭೇಟಿ ಮಾಡಿದ ಚಿತ್ರೋದ್ಯಮದ ಮಂದಿ ಕೊರೊನಾ ಸಂದರ್ಭದಲ್ಲಿ ಅನುಭವಿಸಿರುವ ಸಂಕಷ್ಟಗಳ ನಿವಾರಣೆಗೆ ಒಂದು ವಿಶೇಷ ಪ್ಯಾಕೇಜ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಲಾಯಿತು. ಇದಕ್ಕೂ ಮುನ್ನ ಉದ್ಯಮದವರು ಚಿತ್ರೀಕರಣ ನಡೆಸಲು ಅನುಕೂಲ ಮಾಡಿಕೊಡುವಂತೆ ಸಚಿವ ಸಿ.ಟಿ.ರವಿ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿದ್ದರು. ಮನವಿ ಸ್ವೀಕರಿಸಿದ ಸಿಎಂ, ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ 1 ವಾರದಲ್ಲಿ ಹಂತಹಂತವಾಗಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಚಿತ್ರೋ ದ್ಯಮಕ್ಕೆ ಅಗತ್ಯವಿರುವ ನೆರವನ್ನು ಕಲ್ಪಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಟಿ ತಾರಾ, ನಟರಾದ ಯಶ್, ದುನಿಯಾ ವಿಜಿ, ಸಾಧುಕೋಕಿಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.