ಆರು ತಿಂಗಳ ನಂತರ ರೈಲು ಸಂಚಾರ ಪುನಾರಂಭ
ಮೈಸೂರು

ಆರು ತಿಂಗಳ ನಂತರ ರೈಲು ಸಂಚಾರ ಪುನಾರಂಭ

September 10, 2020

ಮೈಸೂರು, ಸೆ.9(ಆರ್‍ಕೆ)- ಕಳೆದ 6 ತಿಂಗ ಳಿಂದ ರೈಲು ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದ ಮೈಸೂರು ರೈಲು ನಿಲ್ದಾಣದಲ್ಲೀಗ ಚಟುವಟಿಕೆ ಕಂಡು ಬರುತ್ತಿದೆ. ಏನೋ ಒಂದು ರೀತಿ ಸಡಗರದ ವಾತಾವರಣ.

ಸೆಪ್ಟೆಂಬರ್ 7ರಿಂದ ಬೆಂಗಳೂರು-ಮೈಸೂರು ನಡುವೆ ಕೆಲ ರೈಲು ಸಂಚಾರ ಆರಂಭವಾಗಿರುವುದರಿಂದ ಮೈಸೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ, ರೈಲ್ವೇ ಪೊಲೀಸರು, ಆರ್‍ಪಿಎಫ್ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿರುವುದಲ್ಲದೆ, ರೈಲ್ವೇ ಸಿಬ್ಬಂದಿ ಸ್ಟೇಷನ್ನಿನ ಸ್ವಚ್ಛತೆ, ಹಳ್ಳಿ ಗಳನ್ನು ಶುಚಿಗೊಳಿಸುತ್ತಿದ್ದನ್ನು ನೋಡಿದಾಗ ಅಬ್ಬಾ ಅಂತೂ ರೈಲು ಓಡಲಾರಂಭಿಸಿ ದವಲ್ಲ ಎಂದು ಎಲ್ಲಾ ವರ್ಗದ ಜನ ನಿಟ್ಟುಸಿರು ಬಿಡುವಂತಾಗಿದೆ.

ಪ್ರಯಾಣಿಕರ ವಿಶ್ರಾಂತಿ ಗೃಹ, ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್‍ಗಳು, ಇಂಜಿ ನಿಯರಿಂಗ್, ಎಲೆಕ್ಟ್ರಿಕಲ್ ವಿಭಾಗದ ಕಚೇರಿ ಗಳು ಆರಂಭವಾಗಿದ್ದು, ಡಿಆರ್‍ಎಂ ಕಚೇ ರಿಯ ಎಲ್ಲಾ ಶಾಖೆಗಳೂ ಸಂಪೂರ್ಣ ಸಕ್ರಿಯಗೊಂಡಿವೆಯಲ್ಲದೆ, ವಾಹನ ನಿಲುಗಡೆ ಸ್ಥಳ ಪ್ರೀಪೇಯ್ಡ್ ಆಟೋ ಸೆಂಟರ್‍ಗಳು ಕಾರ್ಯಾರಂಭ ಮಾಡಿವೆ.

ಕೊರೊನಾ ವೈರಸ್ ಸೋಂಕು ಹರಡು ತ್ತಿದ್ದರಿಂದ ದೇಶಾದ್ಯಂತ ಲಾಕ್‍ಡೌನ್ ನಿರ್ಬಂಧ ಆದೇಶ ಜಾರಿಗೆ ಬಂದ ಹಿನ್ನೆಲೆ ಯಲ್ಲಿ ಮಾರ್ಚ್ 24ರಿಂದ ಎಲ್ಲಾ ರೈಲು ಗಳ ಸಂಚಾರ ಸ್ಥಗಿತಗೊಂಡ ಕಾರಣ, ಮೈಸೂರು ರೈಲು ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಇದೀಗ ಲಾಕ್‍ಡೌನ್ ನಿರ್ಬಂಧÀ ತೆರವುಗೊಂಡಿರುವುದರಿಂದ ಹಂತ-ಹಂತವಾಗಿ ರೈಲುಗಳ ಸಂಚಾ ರವೂ ಪುನಾರಂಭಗೊಂಡಿವೆ.

ಮೈಸೂರು ರೈಲು ನಿಲ್ದಾಣದಿಂದ ಈಗ 4 ರೈಲುಗಳು ಕಾರ್ಯಾರಂಭ ಮಾಡಿದ್ದು, ಶೇ.50ರಿಂದ 60ರಷ್ಟು ಮಂದಿ ಟ್ರೇನು ಗಳಲ್ಲಿ ಸಂಚರಿಸುತ್ತಿದ್ದಾರೆ.

ವಾರದಲ್ಲಿ 3 ದಿನ ಮಂಗಳೂರಿಗೆ ಸಂಚ ರಿಸುವ ರೈಲು ಮೈಸೂರಿನಿಂದ ಮುಂಜಾನೆ 5-30 ಗಂಟೆಗೆ ಹೊರಡಲಿದೆ. ನಂತರ ಬೆಳಿಗ್ಗೆ 6.45 ಗಂಟೆಗೆ ಮೈಸೂರು-ಸೋಲಾಪುರ ಎಕ್ಸ್‍ಪ್ರೆಸ್ ಬೆಂಗಳೂರು ಮಾರ್ಗ ಪ್ರಯಾಣ ಬೆಳೆಸಲಿದೆ.

ಮಧ್ಯಾಹ್ನ 3.45 ಗಂಟೆಗೆ ಗೋಲ್ ಗುಂಬಜ್ ಎಕ್ಸ್‍ಪ್ರೆಸ್, ರಾತ್ರಿ 7 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ಟ್ರೈನು ಮೈಸೂರಿನಿಂದ ಹೊರ ಡಲಿವೆ. ಬೆಳಿಗ್ಗೆ 9 ಗಂಟೆ, ಬೆಳಿಗ್ಗೆ 11 ಗಂಟೆ, ರಾತ್ರಿ 9.05 ಗಂಟೆ ಹಾಗೂ 11 ಗಂಟೆಗೆ ಕ್ರಮವಾಗಿ 4 ರೈಲುಗಳು ಬೆಂಗ ಳೂರಿನಿಂದ ಪ್ರಯಾಣ ಬೆಳೆಸಿ ಮೈಸೂರು ರೈಲು ನಿಲ್ದಾಣ ತಲುಪಲಿವೆ.

ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿ ರಿಸಿಕೊಂಡರೆ ಮಾತ್ರ ಪ್ರಯಾಣ ಭಾಗ್ಯ. ರೈಲು ನಿಲ್ದಾಣದಲ್ಲಿ ನೇರವಾಗಿ ಟಿಕೆಟ್ ಖರೀದಿಸಲು ಕೌಂಟರ್‍ಗಳು ತೆರೆದಿಲ್ಲ. ರೈಲು ಗಳ ಸೇವೆ ಆರಂಭವಾಗಿರುವುದರಿಂದ ಮೈಸೂರು ರೈಲು ನಿಲ್ದಾಣದ ಆವರಣದ ಟೀಶಾಪ್, ಹೋಟೆಲ್‍ಗಳು ತೆರೆದುಕೊಂಡಿವೆ.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಗೊಳಿಸಿರುವ ರೈಲ್ವೇ ಇಲಾಖೆಯು ಪ್ರತಿ ಯೊಬ್ಬ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಟೆಂಪರೇಚರ್ ಪರೀಕ್ಷೆ ಮಾಡುವ ಪ್ರಕ್ರಿಯೆ ಮುಂದುವರಿಸಿದೆ. ಬರುವ ಹಾಗೂ ಇಲ್ಲಿಂದ ಹೊರಡುವ ರೈಲು ಗಳಿಗೆ ಸಂಪೂರ್ಣ ಸ್ಯಾನಿಟೈಸ್ ಮಾಡುವ ಮೂಲಕ ಕೊರೊನಾ ಸೋಂಕು ಹರಡ ದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Translate »