‘ಕಾರ್ಟೂನ್ ಕಣ್ಣಲ್ಲಿ ಕೊರೊನಾ’ ಇಂದು ವ್ಯಂಗ್ಯಚಿತ್ರಗಳ ಪ್ರದರ್ಶನ
ಮೈಸೂರು

‘ಕಾರ್ಟೂನ್ ಕಣ್ಣಲ್ಲಿ ಕೊರೊನಾ’ ಇಂದು ವ್ಯಂಗ್ಯಚಿತ್ರಗಳ ಪ್ರದರ್ಶನ

May 5, 2020

ಮೈಸೂರು,ಮೇ4-ಹಿಮಾಲಯ ಫೌಂಡೇಷನ್ ವತಿಯಿಂದ ಮೇ 5ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಲದರ್ಶಿನಿಯಲ್ಲಿ ವಿಶ್ವ ವ್ಯಂಗ್ಯಚಿತ್ರಗಾರರ ದಿನಾಚರಣೆ ಅಂಗ ವಾಗಿ ಖ್ಯಾತ ವ್ಯಂಗ್ಯ ಚಿತ್ರಕಾರ ಹಾಗೂ ಫುಲ್ ಬ್ರೈಟರ್ ಎಂ.ವಿ. ನಾಗೇಂದ್ರಬಾಬು ಅವರ ‘ಕಾರ್ಟೂನ್ ಕಣ್ಣಲ್ಲಿ ಕೊರೊನಾ’ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಾಂಕೇತಿಕವಾಗಿ ನಡೆಯುತ್ತಿರುವ ಈ ಸರಳ ಕಾರ್ಯಕ್ರಮವನ್ನು ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜ ಪೇಯಿ ಕಾರ್ಟೂನ್‍ಗಳನ್ನು ಬಿಡುಗಡೆಗೊಳಿಸುವರು. ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮುಖಂಡ ಆರ್.ರಘು, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಧಾರ್ಮಿಕ ಚಿಂತಕ ಕೆ.ಆರ್.ಯೋಗಾನರಸಿಂಹನ್ ಭಾಗವ ಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಅನಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »