ಬೆಂಗಳೂರು, ಮೇ 4(ಕೆಎಂಶಿ)- ನಲವತ್ತೈದು ದಿನಗಳ ನಂತರ ರಾಜ್ಯದೆಲ್ಲೆಡೆ ಆರ್ಥಿಕ ಚಟುವಟಿಕೆ ಆರಂಭಗೊಂಡಿದೆ. ಕೊರೋನಾ ವೈರಾಣು ನಿಗ್ರಹಕ್ಕೆ ಎರಡು ಹಂತದ ಲಾಕ್‍ಡೌನ್‍ನಿಂದ ಇಡೀ ವ್ಯವಸ್ಥೆ ಸ್ತಬ್ದಗೊಂಡಿತ್ತು. ಇಂದಿನಿಂದ ಮೂರನೇ ಲಾಕ್‍ಡೌನ್ ಮುಂದುವರೆದಿದ್ದು, ಆರ್ಥಿಕ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮುಂಜಾಗ್ರತೆಯಾಗಿ ಸಾರಿಗೆ, ಕ್ಲಬ್, ಬಾರ್ ಇತರೆ ಮನರಂಜನೆ ಸೇರಿದಂತೆ ಸಾರ್ವಜನಿಕರು ಗುಂಪಾಗಿ ಸೇರುವ ಚಟುವಟಿಕೆಗಳಿಗೆ ಲಾಕ್‍ಡೌನ್ ಎಂದಿನಂತೆ ಮುಂದುವರೆಯಲಿದೆ. ಆದರೆ ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಕೈಗಾರಿಕೆಗಳು ಪುನರಾರಂಭಗೊಂಡಿದೆ. ಸ್ಥಗಿತಗೊಂಡಿದ್ದ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ. ಇದಲ್ಲದೆ, ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಇತರ ಚಟುವಟಿಕೆಗಳು ಪ್ರಾರಂಭಗೊಂಡಿವೆ. ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳು ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ಆದರೆ ಶಾಲಾ ಕಾಲೇಜುಗಳು ಮಾತ್ರ ಮುಂದಿನ ಆದೇಶದವರೆಗೂ ತೆರೆಯುವುದಿಲ್ಲ. ಸಾರ್ವಜನಿಕರು ಎಂದಿನಂತೆ ಸಹಜ ಜನಜೀವನ ಆರಂಭಿಸಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ, ತಮ್ಮ ಸ್ವಂತ ವಾಹನ ಇಲ್ಲವೆ ನಡಿಗೆಯಲ್ಲೇ ತಮ್ಮ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸೋಂಕಿತರು ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಒಂದು ಮತ್ತು ಎರಡನೇ ಹಂತರದ ಲಾಕ್‍ಡೌನ್ ಅವಧಿಯಲ್ಲಿ ಮನೆಗಳಿಗೆ ಸೀಮಿತವಾಗಿ ಅಜ್ಞಾತ ವಾಸದಲ್ಲಿದ್ದ ಜನರಿಗೆ ಇಂದು ಪ್ರಪಂಚವನ್ನೇ ನೋಡಿದಂತಹ ಅನುಭವಾಯ್ತು. ಕೊರೋನಾ ಬೀತಿಯಿಂದ ಹೊರ ಬಂದ ಜನರು ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಆದರೆ ಎಲ್ಲಾ ಚಟುವಟಿಕೆಗಳು ಇಂದಿನಿಂದ ಮುಂದಿನ 15 ದಿನಗಳವರೆಗೂ ಅಂದರೆ ಸಂಜೆ 6.30ಕ್ಕೆ ಮುಗಿಸಬೇಕು. ರಾತ್ರಿ 7 ಗಂಟೆಯಿಂದ ಮುಂಜಾನೆ 7 ಗಂಟೆಯವರೆಗೂ ಇಡೀ ರಾಜ್ಯದಲ್ಲಿ ಕಪ್ರ್ಯೂ ಜಾರಿಯಲ್ಲಿದ್ದು, ಸಾರ್ವಜನಿಕರು ಈ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವಂತಿಲ್ಲ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಸರ್ಕಾರಿ, ಕೈಗಾರಿಕೆ ಸೇರಿದಂತೆ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ, ತಡವಾದರೆ ಮನೆ ಸೇರಿಕೊಳ್ಳಬಹುದಾಗಿದೆ.
ಉಳಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಲು ಕಡ್ಡಾಯ ಮಾಡಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ, 200 ರಿಂದ 1000 ರೂ.ವರೆಗೆ ದಂಡ ತೆÀರಬೇಕಾಗುತ್ತದೆ.