ಗ್ಯಾಸ್ ಸಿಲಿಂಡರ್ ವಿತರಕ ಯುವಕರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಗ್ಯಾಸ್ ಸಿಲಿಂಡರ್ ವಿತರಕ ಯುವಕರಿಗೆ ದಿನಸಿ ಕಿಟ್ ವಿತರಣೆ

May 5, 2020

ಮೈಸೂರು,ಮೇ4(ಆರ್‍ಕೆಬಿ)- ಬಿಜೆಪಿ ಹಿಂದುಳಿದ ವರ್ಗಗಳ ವತಿಯಿಂದ ವಿದ್ಯಾ ರಣ್ಯಪುರಂ ಭಾರತಿ ಕನ್ವೆನ್ಷನ್ ಹಾಲ್ ಪಕ್ಕದ ಪಾರ್ವತಿ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ವಿತರಕ ಹುಡುಗರಿಗೆ ಉಚಿತ ದಿನಸಿ ಪದಾರ್ಥಗಳಿರುವ ಕಿಟ್‍ಗಳನ್ನು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ವಿತರಿಸಿದರು.

ಮೈಸೂರಿನಲ್ಲಿ ವಿವಿಧ ಗ್ಯಾಸ್ ಕಂಪನಿ ಗಳ ಗ್ಯಾಸ್ ವಿತರಕ ಯುವಕರು ಮನೆ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉಜ್ವಲ ಹಾಗೂ ಗ್ಯಾಸ್ ವಿತ ರಣೆಯನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿಯ ನಡುವೆಯೂ ಜನ ಸಾಮಾನ್ಯರಿಗೆ ಅತ್ಯವಶ್ಯಕವಾಗಿರುವ ಗ್ಯಾಸ್ ಸಿಲಿಂಡರ್‍ಗಳನ್ನು ತಲುಪಿಸುತ್ತಿರುವ ಇವ ರಿಗೆ ದಿನಸಿ ಕಿಟ್ ನೀಡಲಾಗುತ್ತಿದೆ. ಕನಕ ಗಿರಿ, ಗುಂಡೂರಾವ್‍ನಗರ, ಅಶೋಕಪುರಂ, ಬಂಡಿಕೇರಿ, ತೊಣಚಿಕೊಪ್ಪಲು, ಜಯನಗರ ಸೇರಿದಂತೆ ವಿವಿಧ ಕಡೆಗಳ ಗ್ಯಾಸ್ ಸಿಲಿಂ ಡರ್ ವಿತರಕರಿಗೆ ದಿನಸಿ ಕಿಟ್‍ಗಳನ್ನು ವಿತ ರಿಸಲಾಗಿದೆ ಎಂದರು. ಹಿಂದುಳಿದ ವರ್ಗ ಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಮಾಜಿ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಪ್ರದೀಪ್ ಕುಮಾರ್, ರಮೇಶ್ ಕುರುಬಾರಹಳ್ಳಿ, ಜಯ ಶಂಕರ್, ಶರತ್, ರಾಜು, ಪ್ರಸಾದ್ ಇದ್ದರು.

Translate »