ಮೈಸೂರು, ಮೇ 4 (ಆರ್‍ಕೆ)- ವರ್ಗಾವಣೆಗೊಂಡಿರುವ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಅವ ರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ನೆನಪಿನ ಕಾಣಿಕೆ ನೀಡಿ, ಆತ್ಮೀಯವಾಗಿ ಬೀಳ್ಕೊಟ್ಟರು.
ನೂತನ ಆಯುಕ್ತ ಡಾ. ಡಿ.ಬಿ. ನಟೇಶ್ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಾಧಿ ಕಾರದ ಕಚೇರಿ ಸಭಾಂಗಣದಲ್ಲಿ ನಿರ್ಗ ಮಿತ ಆಯುಕ್ತ ಕಾಂತರಾಜು ಅವರಿಗೆ ಮೈಸೂರು ಪೇಟ, ಶಾಲು ಹೊದಿಸಿ ಮುಡಾ ನೌಕರರ ಸಂಘದ ಪದಾಧಿಕಾರಿ ಗಳು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಕಾಂತರಾಜು, ತಮ್ಮ ಅಧಿಕಾರಾವಧಿಯಲ್ಲಿ ತಮ್ಮೊಂದಿಗೆ ಸಹಕರಿಸಿದ ಪ್ರಾಧಿಕಾರದ ಸದಸ್ಯರು, ಅಧಿ ಕಾರಿಗಳು, ಸಿಬ್ಬಂದಿ ಹಾಗೂ ಹೊರ ಗುತ್ತಿಗೆ ನೌಕರರಿಗೆ ಕೃತಜ್ಞತೆ ಸಲ್ಲಿಸಿದರು. ಎಲ್ಲರ ಸಹಕಾರದಿಂದಾಗಿ ಹಲವು ಯೋಜನೆ ಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾ ಯಿತು. ಕೆಲ ತಾಂತ್ರಿಕ ಕಾರಣಗಳಿಂದಾಗಿ ಉದ್ದೇಶಿತ ಯೋಜನೆಗಳನ್ನು ಕಾರ್ಯ ಗತ ಮಾಡಲಾಗಿಲ್ಲ. ಮುಂದಿನ ದಿನ ಗಳಲ್ಲಿ ಅವು ಸಾಕಾರವಾಗಲಿ ಎಂದು ಕಾಂತರಾಜು ನುಡಿದರು. ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಕಾರ್ಯ ದರ್ಶಿ ಎಂ.ಕೆ.ಸವಿತಾ, ನಗರ ಯೋಜನಾ ಸದಸ್ಯ ಬಿ.ಎನ್.ಗಿರೀಶ್, ಸೂಪರಿಂ ಟೆಂಡಿಂಗ್ ಇಂಜಿನಿಯರ್ ಶಂಕರ್, ವಿಶೇಷ ಭೂಸ್ವಾಧೀನಾಧಿಕಾರಿ ಚಂದ್ರಮ್ಮ, ಮುಡಾ ನೌಕರರ ಸಂಘದ ಕಾರ್ಯದರ್ಶಿ ಬಸವರಾಜು ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.