ಮುಡಾ ನೂತನ ಆಯುಕ್ತ ಡಾ.ಡಿ.ಬಿ.ನಟೇಶ್ ಅಧಿಕಾರ ಸ್ವೀಕಾರ
ಮೈಸೂರು

ಮುಡಾ ನೂತನ ಆಯುಕ್ತ ಡಾ.ಡಿ.ಬಿ.ನಟೇಶ್ ಅಧಿಕಾರ ಸ್ವೀಕಾರ

May 5, 2020

ಮೈಸೂರು, ಮೇ 4 (ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನೂತನ ಆಯುಕ್ತ ಡಾ. ಡಿ.ಬಿ.ನಟೇಶ್ ಸೋಮ ವಾರ ಅಧಿಕಾರ ಸ್ವೀಕ ರಿಸಿದರು.

ಮುಡಾ ಕಚೇರಿಯಲ್ಲಿ ನಿರ್ಗಮಿತ ಆಯುಕ್ತ ಪಿ.ಎಸ್.ಕಾಂತರಾಜು, ಡಾ.ಡಿ.ಬಿ.ನಟೇಶ್ ಅವ ರಿಗೆ ಅಧಿಕಾರ ಹಸ್ತಾಂ ತರಿಸಿದರು. ಈ ವೇಳೆ ಮುಡಾ ಸೂಪರಿಂಟೆಂ ಡಿಂಗ್ ಇಂಜಿನಿಯರ್ ಶಂಕರ್, ನಗರ ಯೋಜನಾ ಸದಸ್ಯ ಬಿ.ಎನ್.ಗಿರೀಶ್, ಕಾರ್ಯದರ್ಶಿ ಎಂ.ಕೆ.ಸವಿತಾ, ಮುಖ್ಯ ಲೆಕ್ಕಾಧಿಕಾರಿ ಮುತ್ತು ಹಾಗೂ ಇತರರು ಉಪಸ್ಥಿತರಿದ್ದರು.

ನಂತರ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ನೂತನ ಆಯುಕ್ತ ಡಾ. ಡಿ.ಬಿ. ನಟೇಶ್, ನಾನು ಈ ಹಿಂದೆ ಮೈಸೂರಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದೇನೆ. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ನಗರಾಭಿವೃದ್ಧಿ ಇಲಾಖೆ ಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದರಿಂದ ಸಂತೋಷವಾಗಿದೆ ಎಂದರು.

ಈಗ ತಾನೇ ಮುಡಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮೊದಲು ಎಲ್ಲಾ ವಲಯಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಳ್ಳುತ್ತೇನೆ. ಏನೇನು ಆಗಬೇಕು, ಏನೇನಿದೆ ಎಂಬುದನ್ನು ತಿಳಿದುಕೊಂಡು ಆದ್ಯತೆ ಮೇಲೆ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು. ಈಗ ತಾನೇ ಬಜೆಟ್ ಮಂಡನೆಯಾಗಿದೆ. ಅದರಲ್ಲಿರುವ ಯೋಜನೆಗಳನ್ನು ಅಧ್ಯಯನ ಮಾಡಿ, ಅನುಷ್ಠಾನಗೊಳಿಸುವ ಕುರಿತು ಮುಡಾ ಸದಸ್ಯರು, ಅಧೀನಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದ ಡಾ. ನಟೇಶ್, ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಧಿಕಾರದಿಂದ ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನುಡಿದರು.

Translate »