ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪ್ರೊ. ಎಸ್.ಅಯ್ಯಪ್ಪನ್ ಆಯ್ಕೆ
ಕೊಡಗು

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪ್ರೊ. ಎಸ್.ಅಯ್ಯಪ್ಪನ್ ಆಯ್ಕೆ

May 5, 2020

ಮಡಿಕೇರಿ, ಮೇ4-ಕರ್ನಾಟಕ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆÀಮಿಯನ್ನು ಜುಲೈ 2005ರಲ್ಲಿ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ಅಧ್ಯಕ್ಷರಾಗಿದ್ದ ಪದ್ಮ ವಿಭೂಷಣ ಪ್ರೊ. ಯು.ಆರ್.ರಾವ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿತ್ತು.

ಈ ಅಕಾಡೆÀಮಿಯು ಪ್ರತಿ ಮೂರು ವರ್ಷಗಳಿಗೊಮ್ಮೆ ನೂತನ ಅಧ್ಯಕ್ಷರನ್ನು ಹಾಗೂ ಸದಸ್ಯರುಗಳನ್ನು ಸರ್ಕಾರದಿಂದ ನಾಮ ನಿರ್ದೇಶನ ಮಾಡುತ್ತಾ ಬಂದಿದ್ದು, ಭಾರತೀಯ ಸಂಶೋ ಧನಾ ಪರಿಷತ್, ಸರ್ಕಾರದ ಕಾರ್ಯ ದರ್ಶಿ, ಕೃಷಿ ಸಂಶೋ ಧನೆ ಹಾಗೂ ಶಿಕ್ಷಣ ಇಲಾಖೆ, ಭಾರತ ಸರ್ಕಾರ ಅಥವಾ ಕುಲಾಧಿಪತಿಗಳು, ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯ, ಮಣಿಪುರ ಇವರ ಅಧ್ಯಕ್ಷತೆ ಯಲ್ಲಿ ಪ್ರಸ್ತುತ ಮೂರು ವರ್ಷಗಳ ಅವಧಿಗೆ ವಿಜ್ಞಾನಿ ಪ್ರೊ. ಎಸ್. ಅಯ್ಯ ಪ್ಪನ್ ಅವರನ್ನು ಆಯ್ಕೆಮಾಡಿದೆ.

ಸದರಿ ಸಮಿತಿಯು 13 ಜನ ಸದಸ್ಯ ರನ್ನು ಒಳಗೊಂಡಿದ್ದು, ಖ್ಯಾತ ಶಿಕ್ಷಣ ತಜ್ಞರು, ಹೆಸರಾಂತ ವಿಜ್ಞಾನಿಗಳು ಮತ್ತು ಸರ್ಕಾರದ ಹಿರಿಯ ಆಡಳಿತಗಾರರು ಸದಸ್ಯರಾಗಿದ್ದಾರೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »