ರಾಜ್ಯದಲ್ಲಿ ಕೊರೊನಾ ಸೋಂಕಿತರು, ಸಾವಿನ ಸಂಖ್ಯೆ ಇಳಿಮುಖ
ಮೈಸೂರು

ರಾಜ್ಯದಲ್ಲಿ ಕೊರೊನಾ ಸೋಂಕಿತರು, ಸಾವಿನ ಸಂಖ್ಯೆ ಇಳಿಮುಖ

June 10, 2021

ಮೈಸೂರು, ಜೂ.9(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ರಾಜ್ಯ ದಲ್ಲಿ ಬುಧವಾರ 10,959 ಮಂದಿಗೆ ಸೋಂಕು ತಗುಲಿದ್ದು, 20,246 ಮಂದಿ ಗುಣಮುಖ ರಾಗಿದ್ದಾರೆ. ಮೈಸೂರಿನ 22 ಮಂದಿ ಸೇರಿದಂತೆ ರಾಜ್ಯದಲ್ಲಿ 192 ಮಂದಿ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಬುಧವಾರ 1,163 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,045 ಮಂದಿ ಗುಣ ಕಂಡಿದ್ದು, ಈವರೆಗೆ 1,38,304 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,54,235 ಮಂದಿಗೆ ಸೋಂಕು ತಗುಲಿದೆ. ಈವರೆಗೆ 1,776 ಮಂದಿ ಸಾವನ್ನಪ್ಪಿದ್ದು, ಜಿಲ್ಲೆ ಯಲ್ಲಿನ್ನೂ 14,155 ಸಕ್ರಿಯ ಪ್ರಕರಣಗಳಿವೆ.

ಸಾವು: ರಾಜೀವ್ ನಗರದ 33 ವರ್ಷದ ಮಹಿಳೆ, ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ 65 ವರ್ಷದ ವೃದ್ಧ, ಬೆಳವಾಡಿಯ 54 ವರ್ಷದ ವ್ಯಕ್ತಿ, ಕುವೆಂಪುನಗರದ 69 ವರ್ಷದ ವೃದ್ಧ, ಗುಂಡುರಾವ್ ನಗರದ 76 ವರ್ಷದ ವೃದ್ಧ, ತಿ.ನರಸೀಪುರ ತಾಲೂಕಿನ ರಂಗ ಸಮುದ್ರದ 62 ವರ್ಷದ ವೃದ್ಧೆ, ವಿಜಯನಗರದ 40 ವರ್ಷದ ವ್ಯಕ್ತಿ, ನೆಹರು ನಗರದ 64 ವರ್ಷದ ವೃದ್ಧೆ, ಜಯ ನಗರದ 72 ವರ್ಷದ ವೃದ್ಧೆ, ಹೂಟ ಗಳ್ಳಿಯ 58 ವರ್ಷದ ವೃದ್ಧೆ, ಹುಣಸೂರಿನ 58 ವರ್ಷದ ವೃದ್ಧೆ, ರಾಜೇಂದ್ರ ನಗರದ 68 ವರ್ಷದ ವೃದ್ಧೆ, ರಾಜೀವ್ ನಗರದ 31 ವರ್ಷದ ಮಹಿಳೆ, ದಡದಹಳ್ಳಿಯ 58 ವರ್ಷದ ವೃದ್ಧ, ವೀರನಗೆರೆಯ 82 ವರ್ಷದ ವೃದ್ಧ, ಸುಭಾಷ್‍ನಗರದ 70 ವರ್ಷದ ವೃದ್ಧೆ, ಮೇಟಗಳ್ಳಿಯ 70 ವರ್ಷದ ವೃದ್ಧೆ, ರಾಜೇಂದ್ರ ನಗರದ 34 ವರ್ಷದ ವ್ಯಕ್ತಿ, ರಾಮಕೃಷ್ಣ ನಗರದ 65 ವರ್ಷದ ವೃದ್ಧೆ, ಹುಣಸೂರು ತಾಲೂಕಿನ 65 ವರ್ಷದ ವೃದ್ಧ, ತಿ.ನರಸೀ ಪುರ ತಾಲೂಕಿನ ಮಾವಿನಹಳ್ಳಿಯ 70 ವರ್ಷದ ವೃದ್ಧೆ, ಶ್ರೀರಾಂ ಪುರದ 49 ವರ್ಷದ ಮಹಿಳೆ ಒಟ್ಟು 22 ಮಂದಿ ಬುಧವಾರ ಸಾವನ್ನಪ್ಪಿದ್ದಾರೆ.

ರಾಜ್ಯ: ಬಾಗಲಕೋಟೆ 96, ಬಳ್ಳಾರಿ 211, ಬೆಳಗಾವಿ 341, ಬೆಂಗಳೂರು ಗ್ರಾಮಾಂತರ 385, ಬೆಂಗಳೂರು ನಗರ 2,395, ಬೀದರ್ 9, ಚಾಮ ರಾಜನಗರ 254, ಚಿಕ್ಕಬಳ್ಳಾಪುರ 268, ಚಿಕ್ಕಮಗ ಳೂರು 339, ಚಿತ್ರದುರ್ಗ 200, ದಕ್ಷಿಣ ಕನ್ನಡ 594, ದಾವಣಗೆರೆ 227, ಧಾರವಾಡ 275, ಗದಗ 95, ಹಾಸನ 745, ಹಾವೇರಿ 97, ಕಲಬುರಗಿ 48, ಕೊಡಗು 216, ಕೋಲಾರ 239, ಕೊಪ್ಪಳ 157, ಮಂಡ್ಯ 397, ಮೈಸೂರು 1,163, ರಾಯಚೂರು 20, ರಾಮ ನಗರ 50, ಶಿವಮೊಗ್ಗ 562, ತುಮಕೂರು 662, ಉಡುಪಿ 413, ಉತ್ತರಕನ್ನಡ 312, ವಿಜಯಪುರ 158 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 31 ಸೇರಿ ರಾಜ್ಯದಲ್ಲಿ ಬುಧವಾರ 10,959 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27,28,248ಕ್ಕೆ ಏರಿಕೆಯಾ ಗಿದೆ. ಇಂದು ಗುಣಮುಖರಾದ 20,246 ಮಂದಿ ಸೇರಿ ಈವರೆಗೆ ಒಟ್ಟು 24,80,411 ಸೋಂಕಿತರು ಗುಣಮುಖವಾಗಿದ್ದಾರೆ. ಬುಧವಾರ ರಾಜ್ಯದಲ್ಲಿ 192 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 32,491ಕ್ಕೆ ಏರಿಕೆಯಾಗಿದೆ. ಇನ್ನು 2,15,525 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು: ಮೈಸೂರು ನಗರದಲ್ಲಿ 543, ಮೈಸೂರು ತಾಲೂಕು 127, ತಿ.ನರಸೀಪುರ 66, ನಂಜನ ಗೂಡು 70, ಕೆ.ಆರ್.ನಗರ 79, ಹೆಚ್.ಡಿ.ಕೋಟೆ 65, ಹುಣಸೂರು 115 ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ 98 ಪ್ರಕರಣ ಸೇರಿ ಬುಧವಾರ ಜಿಲ್ಲೆ ಯಲ್ಲಿ 1,163 ಜನರಿಗೆ ಕೊರೊನಾ ದೃಢಪಟ್ಟಿದೆ.

Translate »