ಎಬಿವಿಪಿ ಆಕ್ಸಿಜನ್ ಚಾಲೆಂಜ್‍ಗೆ ಚಾಲನೆ
ಮೈಸೂರು

ಎಬಿವಿಪಿ ಆಕ್ಸಿಜನ್ ಚಾಲೆಂಜ್‍ಗೆ ಚಾಲನೆ

June 10, 2021

ಮೈಸೂರು,ಜೂ.9(ಎಸ್‍ಪಿಎನ್)- ವಿಶ್ವ ಪರಿಸರ ದಿನದಂಗವಾಗಿ ಮೈಸೂರು ಗಾಂಧಿ ನಗರದ ಸಿದ್ದಾರ್ಥ ಕಾಲೇಜು ಆವರಣ ದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿ ಷತ್ (ಎಬಿವಿಪಿ) ಮೈಸೂರು ಘಟಕ ಆಯೋ ಜಿಸಿದ್ದ ರಾಜ್ಯಾದ್ಯಂತ 5 ಲಕ್ಷ ಸಸಿ ನೆಟ್ಟು, ಪೋಷಿಸುವ ‘ಆಕ್ಸಿಜನ್ ಚಾಲೆಂಜ್’ ಅಭಿಯಾನಕ್ಕೆ ಕರ್ನಾಟಕ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಬಿ.ವಿ.ವಸಂತ್‍ಕುಮಾರ್ ಬುಧವಾರ ಚಾಲನೆ ನೀಡಿದರು.

ಕೊರೊನಾ ಸಂಕಷ್ಟದಲ್ಲೂ ಯುವ ಜನತೆ ಹಸಿರೀಕರಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಗಿಡ ನೆಟ್ಟು ಪೋಷಿಸುವುದು ಜನಕಲ್ಯಾಣಕ್ಕಾಗಿ ಎಂಬುದನ್ನು ತಿಳಿದು ಪ್ರತಿಯೊಬ್ಬರು ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ. ಗಿಡ ನೆಡುವುದು ಒಂದು ದಿನಕ್ಕೆ ಸೀಮಿತ ವಾಗದೇ ನಿರಂತರ ಪ್ರಕ್ರಿಯೆಯಾಗಬೇಕು. ಎಲ್ಲರ ಮನಸ್ಸಿನೊಳಗೆ ಇಳಿಯಬೇಕು ಎಂದರು. ಈ ಅಭಿಯಾನದಲ್ಲಿ ಪಾಲ್ಗೊ ಳ್ಳುವ ಎಪಿವಿಪಿ ಕಾರ್ಯಕರ್ತ ಐದು ಗಿಡ ನೆಟ್ಟು, ಒಂದು ವರ್ಷ ಆ ಗಿಡವನ್ನು ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿರುವುದು ಸಂತಸದಾಯಕ. ಅಭಿಯಾನಕ್ಕೆ ರಾಜ್ಯದ ಉನ್ನತದ ಅಧಿ ಕಾರಿಗಳು, ಮಠಾಧೀಶರು, ವಿವಿಧ ವಿವಿ ಕುಲಪತಿಗಳು ಸೇರಿದಂತೆ ಅನೇಕ ಗಣ್ಯರು ಬೆಂಬಲ ವ್ಯಕ್ತಪಡಿಸಿರುವುದು ಉತ್ತಮ ಬೆಳವಣಿಗೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಮಹದೇವ ಪ್ರಸಾದ್, ಪಾಲಿಕೆ ಸದಸ್ಯೆ ಅಶ್ವಿನಿ ಶರತ್, ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಶ್ರೀರಾಮ ಅಂಗೀರಸ, ಜಿಲ್ಲಾ ಸಂಚಾಲಕ ಮಲ್ಲಪ್ಪ, ಮಹಾನಗರ ಸಹ ಕಾರ್ಯ ದರ್ಶಿ ಕಿರಣ್, ಕಾರ್ಯಕರ್ತರಾದ ಮನು, ಪ್ರೇರಣ ಇದ್ದರು.

Translate »