ಕೊರೊನಾ: ಮೈಸೂರು ಜಿಲ್ಲೆ 31 ಪ್ರಕರಣ ದೃಢ, 17 ಮಂದಿ ಗುಣಮುಖ
ಮೈಸೂರು

ಕೊರೊನಾ: ಮೈಸೂರು ಜಿಲ್ಲೆ 31 ಪ್ರಕರಣ ದೃಢ, 17 ಮಂದಿ ಗುಣಮುಖ

March 15, 2021

ಮೈಸೂರು, ಮಾ.14(ವೈಡಿಎಸ್)- ರಾಜ್ಯದ ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಭಾನುವಾರ ಒಂದೂ ಪ್ರಕರಣಗಳು ವರದಿಯಾಗಿಲ್ಲ. ಮೈಸೂರು ಜಿಲ್ಲೆಯಲ್ಲಿ ಭಾನುವಾರ 31 ಮಂದಿಗೆ ಸೋಂಕು ತಗುಲಿದ್ದು, 17 ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 54,445 ಮಂದಿಗೆ ಸೋಂಕು ತಗುಲಿದಂತಾಗಿದೆ. 53,184 ಸೋಂಕಿತರು ಗುಣಮುಖರಾಗಿ ದ್ದಾರೆ. ಇಂದು ಸಾವಿನ ಬಗ್ಗೆ ವರದಿಯಾಗಿಲ್ಲ. ಇದುವರೆಗೆ 1,036 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿನ್ನೂ 225 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 69 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 30, ಖಾಸಗಿ ಆಸ್ಪತ್ರೆಗಳು-ನಿಗಾ ಕೇಂದ್ರಗಳಲ್ಲಿ 126 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಸಿರುವ 72,310 ಮಂದಿ ಸೇರಿ, ಒಟ್ಟು 9,09,388 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ.

ರಾಜ್ಯ: ಬಾಗಲಕೋಟೆ 2, ಬಳ್ಳಾರಿ 9, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು ನಗರ 628, ಬೀದರ್ 11, ಚಿಕ್ಕಮಗಳೂರು 6, ಚಿತ್ರದುರ್ಗ 5, ದಕ್ಷಿಣಕನ್ನಡ 40, ದಾವಣಗೆರೆ 3, ಧಾರವಾಡ 20, ಗದಗ್ 2, ಹಾಸನ 9, ಕಲಬುರಗಿ 43, ಕೊಡಗು 6, ಕೋಲಾರ 13, ಕೊಪ್ಪಳ 2, ಮಂಡ್ಯ 1, ಮೈಸೂರು 31, ರಾಯ ಚೂರು 2, ಶಿವಮೊಗ್ಗ 7, ತುಮಕೂರು 17, ಉಡುಪಿ 12, ಉತ್ತರ ಕನ್ನಡ 7, ವಿಜಯ ಪುರ 8, ಯಾದಗಿರಿ 4 ಮಂದಿ ಸೇರಿ ರಾಜ್ಯದಲ್ಲಿ ಭಾನುವಾರ 934 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 609 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,60,272ಕ್ಕೆ ಏರಿಕೆಯಾಗಿದ್ದು, 9,39,499 ಸೋಂಕಿತರು ಗುಣಮುಖರಾದಂತಾಗಿದೆ. ಇಂದು ವರದಿಯಾದ 3 ಸಾವಿನ ಪ್ರಕರಣ ಸೇರಿ ರಾಜ್ಯದಲ್ಲಿ ಈವರೆಗೆ ಒಟ್ಟು 12,390 ಮಂದಿ ಕೊರೊನಾದಿಂದ ಮೃತಪಟ್ಟಂತಾಗಿದೆ. ಇನ್ನು 8,364 ಸಕ್ರಿಯ ಪ್ರಕರಣಗಳಿವೆ.

Translate »