ಕೊರೊನಾ ಹಾವಳಿ: ಕಾರುಗಳ ಮಾರಾಟಕ್ಕೂ ಕುತ್ತು
ಮೈಸೂರು

ಕೊರೊನಾ ಹಾವಳಿ: ಕಾರುಗಳ ಮಾರಾಟಕ್ಕೂ ಕುತ್ತು

June 17, 2021

ಮೈಸೂರು,ಜೂ. 16(ಆರ್‍ಕೆ)-ಮಹಾ ಮಾರಿ ಕೊರೊನಾ ವೈರಸ್ ಸೋಂಕಿ ನಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆÀ. ಎಲ್ಲಾ ವಲಯಗಳಂತೆ ವಾಹನ ತಯಾರಿಕೆ ಮತ್ತು ಮಾರಾಟ ಕ್ಷೇತ್ರವೂ ನೆಲಕಚ್ಚಿದೆ.

ಕಳೆದ ವರ್ಷದ ಕೊರೊನಾ ಮೊದಲ ಅಲೆಯ ಲಾಕ್‍ಡೌನ್ ನಿರ್ಬಂಧದಿಂದ ನಲುಗಿದ್ದ ಕಾರು ಉತ್ಪಾದನಾ ಕಂಪನಿಗಳು, ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳುತ್ತಿರು ವಾಗಲೇ 2ನೇ ಅಲೆ ಅಪ್ಪಳಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೋವಿಡ್-19 ಲಾಕ್‍ಡೌನ್ ನಿರ್ಬಂಧÀ ದಿಂದಾಗಿ ಮೈಸೂರಿನ ಎಲ್ಲಾ ಕಾರ್ ಶೋರೂಂ ಮತ್ತು ಸರ್ವಿಸ್ ವಿಭಾಗಗಳು ಬಂದ್ ಆಗಿರುವುದರಿಂದ ಹೊಸ ಕಾರುಗಳ ಮಾರಾಟವೂ ಸಂಪೂರ್ಣ ಸ್ಥಗಿತಗೊಂ ಡಿದ್ದು, ಡೀಲರ್‍ಗಳು, ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಮೊದಲ ಅಲೆ ಅಂತ್ಯಗೊಂಡ ನಂತರ ಹೊಸ ಕಾರುಗಳ ಮಾರಾಟ ಕೊಂಚ ಮಟ್ಟಿಗೆ ಚೇತರಿಕೆಯಾಗುತ್ತಿತ್ತು. ತಿಂಗಳಲ್ಲಿ ಸರಿಸುಮಾರು ಒಂದೊಂದು ಷೋರೂಂ ಗಳಲ್ಲಿ 100ರಿಂದ 125 ಕಾರುಗಳು ಮಾರಾಟವಾಗುತ್ತಿದ್ದವು.

2020ರ ಫೆಬ್ರವರಿ-ಮಾರ್ಚ್ ತಿಂಗಳ ನಂತರ ಕೊರೊನಾ ವೈರಸ್ ಸೋಂಕು ಹರಡಿ, ಲಾಕ್‍ಡೌನ್ ನಿರ್ಬಂಧ ನಿಯಂ ತ್ರಣಕ್ಕೆ ಬರುವವರೆಗೆ ಕಾರು ಮಾರಾಟ ದಲ್ಲಿ ಭಾರೀ ಕುಸಿತವಾಗಿತ್ತು. ಲಾಕ್‍ಡೌನ್ ಸಡಿಲಗೊಂಡ ನಂತರವೂ ನಿರೀಕ್ಷಿತ ಮಟ್ಟ ದಲ್ಲಿ ವಹಿವಾಟು ನಡೆಯಲಿಲ್ಲ ಎಂದು ಕಾರ್ ಶೋರೂಂ ಮಾಲೀಕರು ತಿಳಿಸಿದ್ದಾರೆ.

ಮೈಸೂರಿನ ಆದರ್ಶ್ ಮೋಟಾರ್ಸ್, ಮಾಂಡೋವಿ, ಫ್ರೆಂಡ್ಲಿ ಮೋಟಾರ್ಸ್, ಅರಸ್ ಕಾರ್, ನಿಸ್ಸಾನ್, ಅದ್ವೈತ್ ಹುಂಡೈ, ಸ್ಟಾರ್ ಹುಂಡೈ, ವೋಲ್ವ್ಸ್ ವ್ಯಾಗನ್, ಅದ್ವೈತ ಗ್ರೂಪ್ಸ್, ಇಂಡಿಯಾ ಗ್ಯಾರೇಜ್‍ನಂತಹ ಕಾರ್ ಶೋರೂಂಗಳು ಇದೀಗ ಲಾಕ್‍ಡೌನ್ ನಿಂದಾಗಿ ಬಂದಾಗಿವೆಯಲ್ಲದೆ, ಅವುಗಳ ಸರ್ವೀಸ್ ಘಟಕಗಳಲ್ಲಿನ ಪ್ರಕ್ರಿಯೆಗಳೂ ಸಂಪೂರ್ಣ ಸ್ಥಗಿತಗೊಂಡಿವೆ.

ಪರಿಣಾಮ ಕಿಯಾ, ಮಾರುತಿ, ಹುಂಡೈ, ಟಾಟಾ, ನಿಸ್ಸಾನ್, ಫೋರ್ಡ್, ಬೆನ್ಜ್, ಮಹೀಂದ್ರ ಹಾಗೂ ಇನ್ನಿತರ ಕಂಪನಿಗಳ ಕಾರುಗಳ ಮಾರಾಟವೂ ಸಂಪೂರ್ಣ ಸ್ಥಗಿತಗೊಂಡಿದೆ ಹಾಗೂ ಆರ್‍ಟಿಓ ಕಚೇರಿಗಳಲ್ಲಿ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಯೂ ಸಹ ಏಪ್ರಿಲ್ ಕಡೇ ವಾರದಿಂದ ಸ್ಥಗಿತವಾಗಿದೆ.

ಕೋವಿಡ್-19 ಲಾಕ್‍ಡೌನ್ ನಿರ್ಬಂಧ ವಿರುವುದರಿಂದ ಮೈಸೂರಿನ ಕಾರ್ ಡೀಲರ್‍ಗಳು, ಶೋರೂಂ ಮತ್ತು ಸರ್ವಿಸ್ ವಿಭಾಗದ ಸಿಬ್ಬಂದಿ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶೋರೂಂ ಮಾಲೀಕರು, ಕಟ್ಟಡದ ಬಾಡಿಗೆ, ನೌಕರರಿಗೆ ಸಂಬಳ, ಭದ್ರತೆ ಮತ್ತು ಸ್ವಚ್ಛತಾ ಸಿಬ್ಬಂದಿ ನಿರ್ವಹಣೆ, ವಿದ್ಯುತ್, ನೀರಿನ ಶುಲ್ಕ, ನೌಕರರ ಮೊಬೈಲ್ ದೂರ ವಾಣಿ ಬಿಲ್ ಸೇರಿದಂತೆ ಇನ್ನಿತರ ಖರ್ಚು ಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಡೀಲರ್‍ಗಳು ತಿಳಿಸಿದ್ದಾರೆ.

Translate »