ಸದಾನಂದಗೌಡರಿಂದ ರಾಜ್ಯದ ಪರಿಸ್ಥಿತಿ ಮಾಹಿತಿ ಪಡೆದ ಪ್ರಧಾನಿ ಮೋದಿ
News

ಸದಾನಂದಗೌಡರಿಂದ ರಾಜ್ಯದ ಪರಿಸ್ಥಿತಿ ಮಾಹಿತಿ ಪಡೆದ ಪ್ರಧಾನಿ ಮೋದಿ

June 17, 2021

ಬೆಂಗಳೂರು, ಜೂ.16 (ಕೆಎಂಶಿ)- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಹೋದ್ಯೋಗಿ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಕರ್ನಾಟಕ ದಲ್ಲಿನ ಪಕ್ಷದ ಸರ್ಕಾರ ಹಾಗೂ ರಾಜಕೀಯ ಪರಿ ಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.
ಪ್ರಧಾನಿಯವರು ನಿನ್ನೆಯಷ್ಟೇ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿನ ನಾಯಕತ್ವ ಕುರಿತಂತೆ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಜೊತೆ ಸಮಾಲೋಚನೆ ನಡೆಸಿದ್ದರು. ಇದರ ಬೆನ್ನಲ್ಲೇ ತಮಗೆ ಅಪಾರ ನಂಬಿಕೆಗೆ ಅರ್ಹರಾಗಿ ರುವ ಸದಾನಂದಗೌಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುಮಾರು 25 ನಿಮಿಷ ಗಳ ಕಾಲ ತಮ್ಮ ಪಕ್ಷದ ಆಡಳಿತ ಮತ್ತು ನಾಯಕತ್ವಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಭೇಟಿಯ ನಂತರ ಸದಾನಂದಗೌಡರು ಮಾಧ್ಯಮ ದವರ ಜೊತೆ ಒಂದು ಶಬ್ದವನ್ನೂ ಹೊರಗೆಡವಲಿಲ್ಲ. ಇತ್ತ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‍ಸಿಂಗ್ ನಾಯಕತ್ವ ಕುರಿತಂತೆ ಪರ, ವಿರೋಧಿಗಳ ಮಾತುಗಳನ್ನು

ಆಲಿಸಲು 3 ದಿನಗಳ ಭೇಟಿಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಅವರು ರಾಜ್ಯ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನವೇ ಪ್ರಧಾನಿ ಮೋದಿ ಅವರು, ಸದಾನಂದಗೌಡರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಾತುಕತೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ಇಂತಹ ಸನ್ನಿವೇಶದಲ್ಲಿ ನಾಯಕತ್ವಕ್ಕೆ ಸಂಬಂಧಿಸಿ ದಂತೆಯೇ ಚರ್ಚೆ ನಡೆಸಿ, ಮಾಹಿತಿ ಪಡೆದು, ಒಂದು ವೇಳೆ ಬದಲಾವಣೆ ಮಾಡಿದರೆ ಮುಂದೆ ಯಾರನ್ನು ಮಾಡಬಹುದು. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಪಕ್ಷಕ್ಕೆ ಧಕ್ಕೆಯಾಗುತ್ತದೆಯೇ? ಆದರೆ ಅದನ್ನು ಹೇಗೆ ತಪ್ಪಿಸುವುದು ಎಂಬೆಲ್ಲ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಯಡಿಯೂರಪ್ಪನವರನ್ನೇ ಮುಂದುವರೆಸಿದರೆ, ಆಡಳಿತ ಮತ್ತು ಪಕ್ಷ ಸಂಘಟನೆ ಪರಿಸ್ಥಿತಿಯ ಬಗ್ಗೆಯು ಗೌಡರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಪ್ರಧಾನಿಯವರು ಕರ್ನಾಟಕ ರಾಜ್ಯ ರಾಜಕೀಯ ಮತ್ತು ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾಹಿತಿ ಪಡೆದಿದ್ದರೂ, ಇದುವರೆಗೂ ಬಹಿರಂಗವಾಗಿ ಏನೂ ಹೇಳಿಕೆ ನೀಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಮಿತ್ ಷಾ ಹಾಗೂ ನಡ್ಡಾ ಅವರ ಜೊತೆ ಸಮಾ ಲೋಚನೆ ಮಾಡಿದ್ದಾರೆ ಮತ್ತು ಸದಾನಂದಗೌಡರಿಂದಲೂ ಮಾಹಿತಿ ಪಡೆದಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆಯೋ ಕಾದು ನೋಡಬೇಕು. ಪ್ರಧಾನಿಯವರು ಸದಾನಂದಗೌಡರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಆರ್‍ಎಸ್‍ಎಸ್ ಮೂಲದ ಗೌಡರು ಪಕ್ಷದ ನೆಲೆಗಟ್ಟಿನಲ್ಲೇ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ. ಪಕ್ಷದ ಆದೇಶ ಬಂದ ತಕ್ಷಣವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿ ದಿದ್ದರು. ನಂತರ ಇವರನ್ನು ಮೋದಿ ಅವರು ತಮ್ಮ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿ, ರೈಲ್ವೆ ಖಾತೆಯಂತಹ ಹೊಣೆಗಾರಿಕೆ ವಹಿಸಿದ್ದರು. ಅಷ್ಟೇ ಅಲ್ಲದೆ, ಮೊದಲ ಐವರು ಸಚಿವರಲ್ಲಿ ಗೌಡರು ಒಬ್ಬರಾಗಿದ್ದರು. ಇಲಾಖೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಪ್ರಧಾನಿಯವರು, ರೈಲ್ವೆ ಖಾತೆ ಕಸಿದು, ಕಾನೂನು ಖಾತೆ ನೀಡಿದಾ ಗಲೂ ಗೌಡರು ತುಟಿಪಿಟಿಕ್ ಅನ್ನಲಿಲ್ಲ. ತದನಂತರ ಅವರಿಗೆ ರಾಸಾಯನಿಕ ಇಲಾಖೆ ಯಂತಹ ಪ್ರಮುಖ ಖಾತೆಯನ್ನೇ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಸಂದರ್ಭದಲ್ಲೂ ಗೌಡರಿಂದಲೇ ಮಾಹಿತಿ ಪಡೆದುಕೊಂಡ ನಿದರ್ಶನಗಳಿವೆ. ಕೆಲವು ವಿಷಯಗಳಲ್ಲಿ ಅವರು ಹೇಳಿದ್ದನ್ನು ಪ್ರಧಾನಿಯವರು ಪಾಲಿಸಿದ್ದಾರೆ. ಸದ್ಯಕ್ಕೆ ಗೌಡರು, ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಗೌಡರ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂತೋಷ್ ಬಣದಲ್ಲಿದ್ದಾರೆ.

Translate »