ರಾಜ್ಯ ಸರ್ಕಾರದಿಂದ ಎರಡೂವರೆ ಲಕ್ಷ ಕೋವಿಡ್ ಸಾವಿನ ಮಾಹಿತಿ ಮುಚ್ಚಿಡಲಾಗಿದೆ
News

ರಾಜ್ಯ ಸರ್ಕಾರದಿಂದ ಎರಡೂವರೆ ಲಕ್ಷ ಕೋವಿಡ್ ಸಾವಿನ ಮಾಹಿತಿ ಮುಚ್ಚಿಡಲಾಗಿದೆ

June 17, 2021

ಬೆಂಗಳೂರು, ಜೂ.16 (ಕೆಎಂಶಿ)- ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡೂವರೆ ಲಕ್ಷ ಸಾವಿನ ಸಂಖ್ಯೆ ಗಳನ್ನು ಮುಚ್ಚಿಟ್ಟಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಜನವರಿಯಿಂದ ಇಂದಿನವ ರೆಗೂ ಕೊರೊನಾದಿಂದ 33,033 ಜನ ಸಾವ ನ್ನಪ್ಪಿದ್ದಾರೆ ಎಂದು ರಾಜ್ಯದಲ್ಲಿ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ರಾಜ್ಯ ದಲ್ಲಿ ಜನವರಿಂದ ಜೂನ್ ತಿಂಗಳವರೆಗೆ ಒಟ್ಟು 3,27,985 ಸಾವುಗಳು ಸಂಭವಿ ಸಿವೆ ಎಂದು ಸರ್ಕಾರವೇ ತಿಳಿಸಿದೆ. ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 33 ಸಾವಿರ ಮಾತ್ರವಾದರೆ, ಉಳಿದ 3 ಲಕ್ಷ ಸಹಜ ಸಾವುಗಳಾಗಿವೆಯೇ ಎಂದು ಪ್ರಶ್ನಿಸಿದರು.
ಕೊರೊನಾ ಆರಂಭವಾದ ನಂತರ ಡೆತ್ ಆಡಿಟ್ ಮಾಹಿತಿಯನ್ನು ಹಾಗೂ ಅಂಕಿ ಅಂಶಗಳು ಬಹಿರಂಗವಾಗದಂತೆ ಸರ್ಕಾರ ತಡೆ ಹಿಡಿದಿದೆ. ನಮ್ಮ ಬಳಿ 2018-19ರ ಜನವರಿಯಿಂದ ಜೂನ್‍ವರೆಗೆ 88 ಸಾವಿರ ಸಾವುಗಳಾಗಿದ್ದವು. ಈ ವರ್ಷ 3.27 ಲಕ್ಷಕ್ಕೂ ಹೆಚ್ಚಿನ ಸಾವುಗಳಾಗಿವೆ. ಸರ್ಕಾರದ ಮಾಹಿತಿ ಯನ್ನು ಅವಲೋಕಿಸಿದರೆ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಸಾವುಗಳ ಸಂಖ್ಯೆಯನ್ನು ಸರ್ಕಾರ ಮುಚ್ಚಿಟ್ಟಿರುವುದು ಸ್ಪಷ್ಟವಾಗಿದೆ. ಇದು ಮನುಷ್ಯತ್ವದ ಲಕ್ಷಣ ಅಲ್ಲ. ಜನರಿಗೆ ಯಾಕೆ ಮೋಸ ಮಾಡುತ್ತಿದ್ದಾರೆ. ಪರಿಹಾರ ಪಡೆಯಲು ಮೃತ ಪಟ್ಟ ಕುಟುಂಬಗಳನ್ನು ವಂಚಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. 2019-20ರ ನಂತರ ಮರಣದ ಮಾಹಿತಿಯನ್ನು ಪ್ರಕಟಿಸುವು ದನ್ನೇ ನಿಲ್ಲಿಸಲಾಗಿದೆ. ಕೋವಿಡ್ ಸಂದರ್ಭ ದಲ್ಲಿ ಪಾರದರ್ಶಕವಾಗಿರಬೇಕಿತ್ತು. ಆದರೆ ಸರ್ಕಾರ ಅದನ್ನು ಮಾಡದೆ ಮುಚ್ಚಿಟ್ಟು ಮೋಸ ಮಾಡಿದೆ. ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ಕೊಳ್ಳಲು ಸರ್ಕಾರ ಇಂತಹ ಅಪರಾಧಿ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಆರೋ ಪಿಸಿದರು. ಸರ್ಕಾರ ಸಾವಿನ ಸತ್ಯ ಮುಚ್ಚಿಟ್ಟು ಸುಳ್ಳಿನ ಗೋಪುರ ಕಟ್ಟುತ್ತಿದೆ. ಅದನ್ನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮತ್ತು ವಾಸ್ತವಿಕ ಮಾಹಿತಿಯ ಶ್ವೇತಪತ್ರವನ್ನು ಪ್ರಕಟಿಸ ಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 81289 ಮಕ್ಕಳಿಗೆ ಶೇ.8ರಷ್ಟು ಕೊರೊನಾ ಸೋಂಕು ತಗುಲಿದೆ. ಬೆಂಗ ಳೂರಿನಲ್ಲಿ 45 ಸಾವಿರ ಮಕ್ಕಳು ಸೋಂಕಿತ ರಾಗಿದ್ದರು. ಅವರಲ್ಲಿ ಶೇ.2ರಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ. 3ನೇ ಅಲೆ ಮಕ್ಕಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳಿವೆ. ಸರ್ಕಾರ ಕೂಡಲೇ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ವಿಧಾನಸಭೆಯ ಅನೇಕ ಸಮಿತಿಗಳು ಕೆಲಸ ಮಾಡಲು ಅವಕಾಶ ನೀಡ ದಂತೆ ಸಭಾಧ್ಯಕ್ಷರು ತಡೆ ನೀಡಿದ್ದಾರೆ. ನಾವು ಒತ್ತಡ ಹಾಕಿದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ನಾವು ಸಭೆ ನಡೆಸಿ ಸಲ್ಲಿಸಿದ ವರದಿಯನ್ನು ಶಾಸನ ಸಭೆಯಲ್ಲಿ ಮಂಡಿಸದೆ ಮುಚ್ಚಿಡಲಾಗುತ್ತಿದೆ. ಇದು ದುರಂತ. ಭ್ರಷ್ಟಾಚಾರ ವ್ಯಾಪಕವಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಬಹಿರಂಗ ಮಾಡಿ, ಸಮಿತಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು. ಸಂಪುಟ ಸಭೆ ನಡೆಯುತ್ತಿದೆ, ಪಕ್ಷ ಸಭೆಗಳು ನಡೆಯುತ್ತಿವೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಯಾಕೆ ಸಭೆ ನಡೆಸಬಾರದು. ಭ್ರಷ್ಟಾಚಾರ ಹೊರ ಬರುತ್ತದೆ ಎಂಬ ಕಾರಣಕ್ಕೆ ಕೆಲಸ ಮಾಡಲು ಅಡ್ಡಿಪಡಿಸಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 1600 ವೆಂಟಿಲೇಟರ್‍ಗಳು ಈಗಲೂ ದಾಸ್ತಾನಿನಲ್ಲಿ ಕೊಳೆಯುತ್ತಾ ಬಿದ್ದಿವೆ. ಪಿಎಂ ಕೇರ್ಸ್‍ನಿಂದ ಕಳುಹಿಸಿದ ವೆಂಟಿಲೇಟರ್ ಡಬ್ಬಾಗಳು ದಾಸ್ತಾನಿನಲ್ಲಿ ಇರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಚರ್ಚೆಯಾಗುತ್ತಿದೆ. ಇದು ಜನ ವಿರೋಧಿ ಕೃತ್ಯ, ಸಂಕಷ್ಟ ಕಾಲದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ರಾಜಕೀಯದಲ್ಲಿ ಮುಳುಗಿರುವ ಬಿಜೆಪಿ ರಾಜ್ಯಕ್ಕೆ ಶಾಪವಾಗಿದೆ. ಮುಂದಿನ ದಿನಗಳಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Translate »