ಕೊರೊನಾ: ಮುಂಜಾಗರೂಕತಾ ಕ್ರಮ
ಮೈಸೂರು

ಕೊರೊನಾ: ಮುಂಜಾಗರೂಕತಾ ಕ್ರಮ

March 8, 2020

ಮೈಸೂರು, ಮಾ. 7(ವೈಡಿಎಸ್)-ಚೀನಾದೆಲ್ಲೆಡೆ ಭಯ ಹುಟ್ಟಿಸಿರುವ ಕೊರೊನಾ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಇದೀಗ ಬೆಂಗಳೂ ರಿಗೂ ಕಾಲಿಟ್ಟಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ನೋವಲ್ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿದ್ದು, ಕೆಲವು ಸಲಹೆ-ಸೂಚನೆಗಳನ್ನು ನೀಡಿದೆ.

ಮಾಡಬೇಕಾದ್ದು: ಆಗಾಗ್ಗೆ ಸೋಪು ಅಥವಾ ಆಲ್ಕೋಹಾಲ್ ಮಿಶ್ರಿತ ಹ್ಯಾಂಡ್ ರಬ್ ದ್ರವ ಬಳಸಿ ಕೈತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಕೈಗಳು ಸ್ವಚ್ಛವಾಗಿದ್ದರೂ ಕೈ ತೊಳೆ ಯುವುದನ್ನು ಮರೆಯಬಾರದು. ಕೆಮ್ಮುವಾಗ, ಸೀನುವಾಗ ಮಾಸ್ಕ್/ ಕರವಸ್ತ್ರ ಅಡ್ಡವಾಗಿ ಹಿಡಿದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.

ಬಳಸಿದ ಟಿಶ್ಯೂ ಪೇಪರ್ ತಕ್ಷಣವೇ ಮುಚ್ಚಳ ಇರುವ ಕಸದತೊಟ್ಟಿಗೆ ಎಸೆಯ ಬೇಕು. ರೋಗ ಲಕ್ಷಣಗಳು (ಜ್ವರ, ಉಸಿರಾಟದ ತೊಂದರೆ, ನೆಗಡಿ/ ಕೆಮ್ಮು) ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು. ಈ ವೇಳೆ ನಿಮ್ಮ ಬಾಯಿ ಮತ್ತು ಮೂಗನ್ನು ಮಾಸ್ಕ್‍ನಿಂದ ಮುಚ್ಚಿಕೊಂಡಿರಬೇಕು. ಈ ರೋಗ ಲಕ್ಷಣಗಳಿದ್ದರೆ ಕೂಡಲೇ 24×7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬೇಕು. ಹೆಚ್ಚು ಜನಸಂದಣಿ ಇರುವ ಸಮಾರಂಭಗಳಲ್ಲಿ ಭಾಗವಹಿಸಬಾರದು.

ಮಾಡಬಾರದ್ದು: ನೀವು ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರೆ, ಎಲ್ಲರೊಂದಿಗೂ ನಿಕಟ ಸಂಪರ್ಕ ಹೊಂದಬಾರದು. ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಮುಟ್ಟಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.

Translate »