ಇಂದಿನಿಂದ ಮೈಸೂರು ರೈಲು ನಿಲ್ದಾಣದ ಪಶ್ಚಿಮ ಭಾಗದ ಪ್ರವೇಶ ಬಂದ್
ಮೈಸೂರು

ಇಂದಿನಿಂದ ಮೈಸೂರು ರೈಲು ನಿಲ್ದಾಣದ ಪಶ್ಚಿಮ ಭಾಗದ ಪ್ರವೇಶ ಬಂದ್

March 8, 2020

ಮೈಸೂರು, ಮಾ. 7(ಆರ್‍ಕೆ)- ಉನ್ನತೀಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 8ರಿಂದ ಮೈಸೂರಿನ ರೈಲು ನಿಲ್ದಾಣದ ಪಶ್ಚಿಮ ದ್ವಾರದ (ಸಿಎಫ್‍ಟಿಆರ್‍ಐ ಎದುರು) ಬಳಿ ಪ್ರವೇಶವನ್ನು ಬಂದ್ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೇ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಪ್ರಿಯಾಶೆಟ್ಟಿ ತಿಳಿಸಿದ್ದಾರೆ.

ಮೈಸೂರು ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಯಡಿ ಸಿಎಫ್‍ಟಿಆರ್‍ಐ ಕಡೆಯ 2ನೇ ಪ್ರವೇಶದ್ವಾರದ ಸಕ್ರ್ಯುಲೇಟಿಂಗ್ ಏರಿಯಾ ಮತ್ತು ಹೊಂದಿಕೊಂಡಂತಿರುವ ಸಂಪರ್ಕ ರಸ್ತೆಯ ಉನ್ನತೀಕರಣ ಕೆಲಸವನ್ನು ಮಾರ್ಚ್ 8ರಿಂದ ಆರಂಭಿಸಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ಪ್ರಯಾಣಿಕರು ಮತ್ತು ವಾಹನ ಸಂಚಾರವನ್ನು ಮಾರ್ಚ್ 8ರಿಂದ ಆ ಭಾಗದಲ್ಲಿ ಬಂದ್ ಮಾಡಲಾಗಿದ್ದು, ಪ್ರಸ್ತುತ ಇರುವ ರೈಲು ನಿಲ್ದಾಣದ ಪ್ರಧಾನ ದ್ವಾರದ ಕಡೆಯಿಂದ ಪ್ರವೇಶ ಪಡೆದು ಅಭಿವೃದ್ಧಿ ಕಾಮಗಾರಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.

Translate »