ಮೈಸೂರು,ಮಾ.7-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 66/11ಕೆವಿ ನಂಜನಗೂಡು ವಿದ್ಯುತ್ ಉಪಸ್ಥಾವರದಲ್ಲಿ ವಿದ್ಯುತ್ ಪರಿವರ್ತಕಗಳ ಉನ್ನತೀಕರಣ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 8ರಂದು ಬೆಳಿಗ್ಗೆ 9ರಿಂದ ಮಾ.9ರ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಕೇಂದ್ರದ ಒಂದು ಪವರ್ ಪರಿವರ್ತಕವು ಮಾರ್ಗಮುಕ್ತತೆಯಲ್ಲಿರುತ್ತದೆ. ಮಾ.8ರಂದು 66/11ಕೆವಿ ನಂಜನ ಗೂಡು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ನೀರಾವರಿ ಪಂಪ್‍ಸೆಟ್ ಮಾರ್ಗಗಳಿಗೆ ಬೆಳಗಿನ ಜಾವ ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಹಾಗೂ ಮಾರ್ಚ್ 8 ಮತ್ತು 9ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮಾ.8ರಂದು ಬೆಳಿಗ್ಗೆ 10ರಿಂದ ಸಂಜೆ 3 ಗಂಟೆವರೆಗೆ ಜೆ.ಸಿ.ನಗರ, ಕೆ.ಸಿ.ಬಡಾವಣೆ, ಇಂಡಸ್ ವ್ಯಾಲಿ, ಜೆಎಸ್‍ಎಸ್ ಆಯುರ್ವೇದಿಕ್ ಆಸ್ಪತ್ರೆ, ಲಲಿತಾದ್ರಿಪುರ, ಗಿರಿದರ್ಶಿನಿ ಬಡಾವಣೆ, ಲಲಿತಾದ್ರಿಪುರ, ಸಿದ್ದಾರ್ಥ ಲೇಔಟ್, ಕುರುಬಾರಹಳ್ಳಿ ವೃತ್ತ, ವೆಂಕಟಲಿಂಗಯ್ಯ ಲೇಔಟ್, ಮೈಸೂರು ಮೃಗಾಲಯ, ರೇಸ್‍ಕೋರ್ಸ್, ಎ.ಟಿ.ಐ. ಟ್ರೈನಿಂಗ್ ಸೆಂಟರ್, ಕಾರಂಜಿ ಕೆರೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.