ಪರಿಸರ ಕಾಳಜಿ ಮೆರೆಯುವ ಮೂಲಕ ಮಹಿಳಾ ದಿನಾಚರಣೆ
ಮೈಸೂರು

ಪರಿಸರ ಕಾಳಜಿ ಮೆರೆಯುವ ಮೂಲಕ ಮಹಿಳಾ ದಿನಾಚರಣೆ

March 8, 2020

ಮೈಸೂರು,ಮಾ.7-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗೀಯ ನಿಯಂತ್ರಣ ಕಚೇರಿಯ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಪರಿಸರ ಸ್ನೇಹಿ ತಂಡದ ವತಿಯಿಂದ ಬನ್ನಿಮಂಟಪದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾ ಗೀಯ ನಿಯಂತ್ರಣ ಕಚೇರಿಯ ಆವರಣ ದಲ್ಲಿ ನಗರ ಸಾರಿಗೆ ವಿಭಾಗದ ಮಹಿಳಾ ಸಿಬ್ಬಂದಿ ವರ್ಗದವರೊಂದಿಗೆ ಐವತ್ತಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ ಮಾತನಾಡಿ, ಬಸವಣ್ಣನವರು ಹನ್ನೆರಡನೇ ಶತಮಾನ ದಲ್ಲೇ ಮಹಿಳೆಯರಿಗೆ ಮೊದಲ ಪ್ರಾಮು ಖ್ಯತೆ ಕೊಡಬೇಕೆಂದು ಹೋರಾಟ ನಡೆಸಿ ದ್ದರು. ಅಂದು ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಅವರಿಗೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದು ಇದೇ ಬಸವಣ್ಣನವರು. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಹೀಗೆ ವೀರ ಮಹಿಳಾಮಣಿಗಳು ನಮ್ಮ ದೇಶದಲ್ಲಿ ಅವರದೇ ಆದ ಕೊಡುಗೆಯನ್ನು ನೀಡಿ ದ್ದಾರೆ. ಜಾಗತೀಕರಣದ ಸಂದರ್ಭದಲ್ಲೂ ಎಲ್ಲ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕೆಂದು ತಿಳಿಸಿದರು.

ನಗರ ಸಾರಿಗೆ ವಿಭಾಗೀಯ ಅಧಿಕಾರಿ ಗಳಾದ ನಾಗರಾಜ್ ಮಾತನಾಡಿ, ಪರಿ ಸರ ಸ್ನೇಹಿ ತಂಡದವರು ಮಾಡುತ್ತಿರುವ ಕೆಲಸ ಶ್ಲಾಘನೀಯ. ಮಹಿಳಾ ದಿನಾ ಚರಣೆಯಂದು ಗಿಡ ನೆಟ್ಟು ಕಾರ್ಯಕ್ರಮ ಅರ್ಥಪೂರ್ಣವಾಗಿಸಿದ್ದಾರೆ. ಇದನ್ನು ಸಾಮಾಜಿಕ ಕಳಕಳಿಯುಳ್ಳ ಎಲ್ಲರೂ ಪಾಲಿಸಬೇಕು. ನಮ್ಮ ದೇಶದಲ್ಲಿ ಮಹಿಳೆ ಯರಿಗೆ ಮೊದಲ ಪ್ರಾಮುಖ್ಯತೆಯನ್ನು ಕೊಡುತ್ತಿದ್ದೇವೆ. ನಮ್ಮ ದೇಶದಲ್ಲಿ ಮಹಿಳೆ ಯರಿಗೆ ದೇವರ ಸ್ಥಾನವನ್ನು ನೀಡಿದ್ದೇವೆ. ಮಹಿಳೆಯರು ವಿದ್ಯಾಭ್ಯಾಸದಿಂದ ಹಿಡಿದು ಉನ್ನತ ಅಧಿಕಾರಿ ಸ್ಥಾನಗಳ ಅಲಂಕರಿಸಿದ್ದಾರೆ. ಒಬ್ಬ ಮಹಿಳೆ ತಂಗಿ, ಅಕ್ಕ, ತಾಯಿ, ಹೆಂಡತಿ, ಅಜ್ಜಿ ಹೀಗೆ ಹಲವಾರು ಸ್ಥಾನ ಗಳನ್ನು ತುಂಬುತ್ತಿದ್ದಾರೆ. ಅವಳಿಗೆ ನಾವು ಆಭಾರಿಯಾಗಿರಬೇಕು ಎಂದು ತಿಳಿಸಿ ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ ಮಧು ಎನ್.ಪೂಜಾರ್, ಸಂತೋಷ್, ಜೀವನ್, ಮನು, ವೆಂಕಟೇಶ್, ರಸ್ತೆ ಸಾರಿಗೆ ಅಧಿಕಾರಿ ವರ್ಗದವರಾದ ಮರಿಗೌಡ, ಎಂಡಿಎಂಎಸ್ ಅಧ್ಯಕ್ಷ ಷಡಕ್ಷರಿ, ಮಹಿಳಾ ಸಿಬ್ಬಂದಿ ವರ್ಗ ಸುಪ್ರೀತಾ, ಶಾಂತಲಕ್ಷ್ಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »