ಮೈಸೂರು ಜಿಪಂ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ
ಮೈಸೂರು

ಮೈಸೂರು ಜಿಪಂ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ

March 8, 2020

ಮೈಸೂರು,ಮಾ.7(ಎಂಟಿವೈ)- ಮೈಸೂರು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗೆ ಶನಿವಾರ ನಡೆಯಬೇಕಿದ್ದ ಚುನಾವಣೆ ಕೋರಂ ಕೊರತೆಯಿಂದ ಮುಂದಕ್ಕೆ ಹೋಯಿತು. ಹೀಗಾಗುತ್ತಿರುವುದು ಇದು 2ನೇ ಬಾರಿಯಾಗಿದೆ.

ಸಮಿತಿಗೆ ಸದಸ್ಯರ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಶನಿವಾರ ಮೈಸೂರು ಜಿಪಂ ಸಭಾಂಗಣದಲ್ಲಿ ನಡೆದ ಸಭೆಗೆ ಗೈರು ಹಾಜ ರಾದರು. ಪರಿಣಾಮ, `ಕೋರಂ ಕೊರತೆಯಿಂದ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಮಾ. 21ಕ್ಕೆ ಮುಂದೂಡಿರುವೆ’ ಎಂದು ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್ ಸಭೆಗೆ ತಿಳಿಸಿದರು.

ಜಿಪಂನ 49 ಸದಸ್ಯರು, ಮೂವರು ಸಂಸದರು, 11 ಶಾಸಕರು, 5 ವಿಧಾನಪರಿಷತ್ ಸದಸ್ಯರು, 7 ತಾಪಂ ಗಳ ಅಧ್ಯಕ್ಷರನ್ನು ಒಳಗೊಂಡಂತೆ 74 ಮಂದಿ ಮತ ಚಲಾವಣೆ ಹಕ್ಕು ಹೊಂದಿದ್ದಾರೆ. ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆಗೆ 37 ಸದಸ್ಯರ ಹಾಜರಿ ಕಡ್ಡಾಯವಿತ್ತು. ಆದರೆ ಶನಿವಾರ 33 ಸದಸ್ಯರಷ್ಟೇ ಹಾಜರಾಗಿದ್ದರು.

ಶನಿವಾರದ ಸಭೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯ ರೇನೋ ಹಾಜರಾದರು. ಆದರೆ ಜೆಡಿಎಸ್‍ಗೆ ದೊರೆತಿ ರುವ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಜೆಡಿಎಸ್ ನಾಯಕರು ವಿಫಲರಾದರು. ಪರಿಣಾಮ ಜೆಡಿಎಸ್ ಸದಸ್ಯರು ಸಭೆಗೆ ಗೈರಾದರು.

ತಲಾ ಒಂದೊಂದು ಸಮಿತಿ: ಮೈಸೂರು ಜಿಪಂನಲ್ಲಿ ಒಟ್ಟು 5 ಸ್ಥಾಯಿ ಸಮಿತಿಗಳಿವೆ. ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿ ಜಿಪಂ ಅಧ್ಯಕ್ಷರ ಸುಪ ರ್ದಿಗೆ ಒಳಪಟ್ಟರೆ, ಉಪಾಧ್ಯಕ್ಷರು ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಸದ್ಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್‍ಗೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯನ್ನು ಬಿಜೆಪಿಗೆ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯನ್ನು ಜೆಡಿಎಸ್‍ಗೆ ನೀಡಲಾಗಿದೆ.

ಕಾಂಗ್ರೆಸ್, ಬಿಜೆಪಿ ನಿರಾಳ: ಶನಿವಾರ ಬೆಳಿಗ್ಗೆ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‍ನ ಜಿಪಂ ಸದಸ್ಯರ ಸಭೆಯಲ್ಲಿ ತಲಕಾಡು ಜಿಪಂ ಕ್ಷೇತ್ರದ ಸದಸ್ಯ ಮಂಜುನಾಥನ್ ಅವರನ್ನು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಹದಿನಾರು ಕ್ಷೇತ್ರದ ಎಂ.ಎ.ಗುರುಸ್ವಾಮಿ ಅವರನ್ನು ಬಿಜೆಪಿ ಮುಖಂಡರು ಆಯ್ಕೆ ಮಾಡಿದ್ದಾರೆ. ಹಾಗಾಗಿ ಎರಡೂ ಪಕ್ಷಗಳ ಸದಸ್ಯರು ಉತ್ಸಾಹದಿಂ ದಲೇ ಸಭೆಗೆ ಆಗಮಿಸಿದ್ದರು. ನಾಮಪತ್ರ ಸಲ್ಲಿಕೆಗೂ ಅರ್ಜಿ ಭರ್ತಿ ಮಾಡಿದ್ದರು. ಆದರೆ ಚುನಾವಣೆ ಮುಂದೂ ಡಿದ್ದರಿಂದ ಎರಡೂ ಪಕ್ಷಗಳವರಿಗೆ ನಿರಾಸೆಯಾಯಿತು.

ಜೆಡಿಎಸ್‍ನಲ್ಲಿ ಮಾಜಿ ಸಚಿವರಾದ ಜಿ.ಟಿ.ದೇವೇ ಗೌಡ ಹಾಗೂ ಸಾ.ರಾ.ಮಹೇಶ್ ಬಣದ ನಡುವಿನ ಪೈಪೋಟಿ, ಭಿನ್ನಾಭಿಪ್ರಾಯದಿಂದಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕ ವಿಚಾರ ದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆ ಅವಧಿ ಆಗಿರುವುದರಿಂದ ಸಮಿತಿಗೆ ಅಧ್ಯಕ್ಷರಾಗಲು ಪ್ರಬಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಚಂದ್ರಿಕಾ ಸುರೇಶ್, ಮಾದೇಗೌಡ, ಮಂಜುನಾಥ್, ರುದ್ರಮ್ಮ, ದಿನೇಶ್ ಒತ್ತಡ ಹೇರಿದ್ದರು. ಐವರಲ್ಲಿ ಕೆಲವರು ಶಾಸಕ ಸಾ.ರಾ.ಮಹೇಶ್ ಅವರ ಬೆಂಬಲಿಗರಾಗಿದ್ದರೆ, ಕೆಲ ವರು ಜಿ.ಟಿ.ದೇವೇಗೌಡ ಬೆಂಬಲಿಗರು.

ಇದೇ ವೇಳೆ ಪಕ್ಷದ ವರಿಷ್ಠ ಹೆಚ್.ಡಿ.ಕುಮಾರ ಸ್ವಾಮಿ ಅವರು ಮೈಸೂರು ನಗರಕ್ಕೆ ಶನಿವಾರ ಆಗಮಿ ಸಿದ್ದರು. ಅವರನ್ನು ಭೇಟಿಯಾಗಿ ಅವರ ಸಲಹೆಯಂ ತೆಯೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಸದಸ್ಯರು ನಿರ್ಧರಿಸಿದರು. ಹಾಗಾಗಿ ಸ್ಥಾಯಿ ಸಮಿತಿ ಆಯ್ಕೆ ಸಭೆಗೆ ಜೆಡಿಎಸ್ ಸದಸ್ಯರು ಹಾಜರಾಗಿಲ್ಲ ಎಂದು ಪಕ್ಷದ ಸದಸ್ಯರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

Translate »