117 ವಿದ್ಯಾರ್ಥಿನಿಯರಿಗೆ 4.25 ಲಕ್ಷ ರೂ. `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ
ಮೈಸೂರು

117 ವಿದ್ಯಾರ್ಥಿನಿಯರಿಗೆ 4.25 ಲಕ್ಷ ರೂ. `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ

March 8, 2020

ಮೈಸೂರು, ಮಾ.7- ಕೆನರಾ ಬ್ಯಾಂಕ್ ಮೈಸೂರು ಪ್ರಾದೇಶಿಕ ಕಚೇರಿಯಿಂದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗಳ ವಿದ್ಯಾರ್ಥಿನಿಯರಿಗೆ `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ ವಿತರಿಸಲಾಯಿತು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಸ್‍ಸಿ, ಎಸ್‍ಟಿ ಪ್ರತಿಭಾನ್ವಿತ 117 ವಿದ್ಯಾರ್ಥಿನಿಯರಿಗೆ ಒಟ್ಟು 4.25 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಮೈಸೂರು ಜಿಪಂ ಯೋಜನಾ ನಿರ್ದೇ ಶಕಿ ಕೆ.ಸುಶೀಲ, ವಿದ್ಯಾರ್ಥಿವೇತನ ಸದುಪ ಯೋಗಪಡಿಸಿಕೊಂಡು ಉತ್ತಮವಾಗಿ ವಿದ್ಯಾ ಭ್ಯಾಸ ಮುಂದುವರೆಸಿ. ನಿರಂತರ ಪರಿ ಶ್ರಮದಿಂದ ಇಂದಿನ ಸ್ಪರ್ಧಾತ್ಮಕ ಯುಗ ದಲ್ಲಿ ಉನ್ನತ ಹುದ್ದೆ ಪಡೆಯುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿ ಎಂದು ವಿದ್ಯಾರ್ಥಿ ನಿಯರಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಮುಖ್ಯ ವ್ಯವ ಸ್ಥಾಪಕ ವೆಂಕಟಾಚಲಪತಿ ಮಾತನಾಡಿ, ಪಠ್ಯ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನ ವನ್ನೂ ಗಳಿಸಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿ ದರಲ್ಲದೆ, ಕೆನರಾ ಬ್ಯಾಂಕಿನ ಸಮಾಜ ಮುಖಿ ಕಾರ್ಯವನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾ ಯಕ ಮಹಾ ಪ್ರಬಂಧಕರಾದ ಕೆ.ಬಿ.ಗೀತಾ ಮಾತನಾಡಿ, ಮಕ್ಕಳಿಗೆ ಬ್ಯಾಂಕಿನಲ್ಲಿ ಲಭ್ಯ ವಿರುವ ಶಿಕ್ಷಣ ಸಾಲ, ಬ್ಯಾಂಕಿಂಗ್ ಸೌಲಭ್ಯ ಗಳ ಬಗ್ಗೆ ತಿಳಿಸಿಕೊಟ್ಟರು. ಮಂಡಲ ಪ್ರಬಂ ಧಕ ಹೆಚ್.ಪಿ.ಗಿರಿಧರ್, ಹಿರಿಯ ಪ್ರಬಂಧಕ ಎ.ವಿ.ಯಶ್ವಂತ್, ಅಧಿಕಾರಿಗಳಾದ ಹೆಚ್. ಬಿ.ಲತಾಂಜಲಿ, ಜಯರಾಜ್, ವಿವಿಧ ಶಾಖೆಗಳ ಪ್ರಬಂಧಕರು, ಶಿಕ್ಷಕರು, ಪೆÇೀಷ ಕರು ಕಾರ್ಯಕ್ರಮದಲ್ಲಿದ್ದರು.

Translate »