ಮೈಸೂರು,ಮಾ.7(ವೈಡಿಎಸ್)- ಜಿಂಕೆ ಕೊಂಬನ್ನು ಅಕ್ರಮವಾಗಿ ವಿಮಾನದ ಮೂಲಕ ಮೈಸೂರಿನಿಂದ ಹೈದರಾಬಾದ್‍ಗೆ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಮೈಸೂರು ವಿಮಾನ ನಿಲ್ದಾಣದ ಭದ್ರತಾ ಪಡೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದು ಬಳಿಕ ವಿದ್ಯಾರಣ್ಯಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ತಮಿಳುನಾಡಿನ ಕಾಂಚಿಪುರಂ ಮೂಲದ ಕಾರ್ತಿಕ್ ರೆಡ್ಡಿ(38) ಬಂಧಿತ ಆರೋಪಿ. ಕಾರ್ತಿಕ್ ಹೈದರಾಬಾದ್‍ಗೆ ತೆರಳಲು ಶುಕ್ರವಾರ ರಾತ್ರಿ 8.30ರ ವೇಳೆಗೆ ಮೈಸೂರು ವಿಮಾನಕ್ಕೆ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ಅಲ್ಲಿನ ಭದ್ರತಾ ಪಡೆ ಸಿಬ್ಬಂದಿ ಕಾರ್ತಿಕ್‍ನ ಬ್ಯಾಗನ್ನು ಪರಿಶೀಲಿಸಿದಾಗ 1 ಜಿಂಕೆ ಕೊಂಬು ಪತ್ತೆಯಾಗಿದೆ. ಕಾರ್ತಿಕ್‍ನನ್ನು ಬಂಧಿ ಸಿದ ವಿದ್ಯಾರಣ್ಯಪುರಂ ಪೊಲೀಸರು, ಪ್ರಕರಣ ದಾಖಲಿ ಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಜಿಂಕೆ ಕೊಂಬನ್ನು ಊಟಿಯಿಂದ ಹೈದರಾಬಾದ್‍ಗೆ ತೆಗೆದುಕೊಂಡು ಹೋಗು ತ್ತಿದ್ದುದಾಗಿ ಕಾರ್ತಿಕ್ ಒಪ್ಪಿಕೊಂಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
