ಮೈಸೂರು,ಮಾ.7(ಆರ್‍ಕೆ)- ಒಂಭತ್ತು ತಿಂಗಳ ನಂತರ ಕಡೆಗೂ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಾಮಾನ್ಯ ಸಭೆ ನಡೆಯಿತು.
ಜೆಎಲ್‍ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯ ಕ್ಷರೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆವರೆಗೆ ನಡೆದ ಸುದೀರ್ಘ ಸಭೆಗೆ ಒಟ್ಟು 219 ವಿಷಯಗಳ ಪ್ರಸ್ತಾವನೆ ಗಳನ್ನು ಮಂಡಿಸಲಾಗಿತ್ತಾದರೂ, ಆ ಪೈಕಿ ಬಹುತೇಕ ಸುಮಾರು 200ಕ್ಕೆ ಸಭೆಯು ಅನುಮೋದನೆ ನೀಡಿತು.
ಪ್ರಮುಖವಾಗಿ 2019-20ನೇ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆ ಗಳ ಕ್ರಿಯಾ ಯೋಜನೆಗೆ ಮುಡಾ ಸಭೆಯು ಸಮ್ಮತಿ ನೀಡಿತು. ಉಳಿದಂತೆ ಖಾಸಗಿ ಬಡಾ ವಣೆಗಳಿಗೆ ನಕ್ಷೆ ಅನುಮೋದನೆ, ಬದಲಿ ನಿವೇಶನ ಮಂಜೂರು, ನಿವೇಶನಗಳ ಬಿಡು ಗಡೆ, ತುಂಡು ಜಾಗ ಮಂಜೂರಾತಿ, ನ್ಯಾಯಾಲಯದ ಪ್ರಕರಣಗಳ ಇತ್ಯರ್ಥ, ಬದಲಿ ನಿವೇಶನ ಹಂಚಿಕೆ ಸೇರಿದಂತೆ ನಗರ ಯೋಜನಾ ಶಾಖೆ, ಭೂಸ್ವಾಧೀನ, ವಸತಿ, ಇಂಜಿನಿಯರ್ ಶಾಖೆ ಮಂಡಿಸಿ ರುವ ಬಹುತೇಕ ಎಲ್ಲಾ ಪ್ರಸ್ತಾವನೆಗಳಿಗೂ ಚರ್ಚಿಸಿದ ಸದಸ್ಯರು ನಿಯಮಾನುಸಾರ ಒಪ್ಪಿಗೆ ಸೂಚಿಸಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಮರಿ ತಿಬ್ಬೇಗೌಡ, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಆರ್. ಧರ್ಮಸೇನಾ, ರವೀಂದ್ರ ಶ್ರೀಕಂಠಯ್ಯ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಕಾರ್ಯದರ್ಶಿ ಸವಿತಾ, ನಗರ ಯೋಜಕ ಸದಸ್ಯ, ವಿಶೇಷ ಭೂಸ್ವಾಧೀನಾಧಿಕಾರಿ ಚಂದ್ರಮ್ಮ, ಮುಖ್ಯ ಲೆಕ್ಕಾಧಿಕಾರಿ ಮುತ್ತು, ಸೆಸ್ಕ್ ಸೂಪ ರಿಂಟೆಂಡಿಂಗ್ ಇಂಜಿನಿಯರ್ ಮುನಿ ಗೋಪಾಲರಾಜು ಸೇರಿದಂತೆ ಹಲವು ಅಧಿ ಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿದ್ದಾಗ 2019ರ ಜುಲೈ 23ರಂದು ಅಂದಿನ ಅಧ್ಯಕ್ಷ ಹೆಚ್.ಎನ್.ವಿಜಯ್ ನೇತೃತ್ವದಲ್ಲಿ ನಡೆದ ಮುಡಾ ಸಭೆ ನಂತರ ಈವರೆಗೂ ನಡೆ ದಿರಲಿಲ್ಲ. 2019ರ ದಸರಾ, ಸಂಸತ್ ಚುನಾ ವಣೆ, ಸರ್ಕಾರ ಬದಲಾವಣೆಯಾದ ಕಾರಣ ಪ್ರಾಧಿಕಾರದ ಸಭೆ ನಡೆದಿರಲಿಲ್ಲ.
ಜೊತೆಗೆ ಜನಪ್ರತಿನಿಧಿಗಳು ಅಧ್ಯಕ್ಷರಾಗಿರ ಲಿಲ್ಲ. ಜಿಲ್ಲಾಧಿಕಾರಿಗಳೇ ಮುಡಾ ಅಧ್ಯಕ್ಷ ರಾಗಿದ್ದರೂ, ಅವರಿಗೆ ಬೇರೆ ಜವಾಬ್ದಾರಿ ಗಳಿದ್ದರಿಂದ ಸಮಯದ ಅಭಾವದಿಂದಾಗಿ ಮುಡಾ ಸಭೆಯನ್ನು ಮುಂದೂಡುತ್ತಾ ಬರ ಲಾಗಿತ್ತು. ಪರಿಣಾಮ ಪ್ರಾಧಿಕಾರದ ಕಾರ್ಯ ಚಟುವಟಿಕೆ ಕುಂಠಿತವಾಗಿದ್ದು, ಯೋಜನೆ ಗಳ ಅನುಷ್ಠಾನವೂ ವಿಳಂಬವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.